ಸ್ನಾನದ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
Bathing Tips: ಸ್ನಾನ ಮಾಡುವುದರಿಂದ ದೇಹದ ಕೊಳೆ ಹೋಗುವುದು ಮಾತ್ರವಲ್ಲ, ಇದು ಆಯಾಸವನ್ನು ಹೋಗಲಾಡಿಸಿ ಒಂದು ರೀತಿಯ ತಾಜಾತನವನ್ನು ನೀಡುತ್ತದೆ. ಆದರೆ, ಸ್ನಾನದ ಬಳಿಕ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಅದರಲ್ಲೂ ಚರ್ಮದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
Skin Care Tips: ಸ್ನಾನ ಮಾಡುವುದರಿಂದ ಆಯಾಸ ಕಡಿಮೆಯಾಗಿ, ಫ್ರೇಶ್ನೆಸ್ ಅನುಭವವಾಗುತ್ತದೆ. ಸ್ನಾನ ಮಾಡುವುದರಿಂದ ದೇಹವನ್ನು ಶುದ್ಧಗೊಳಿಸಬಹುದು, ಇದು ನಮ್ಮನ್ನು ರೋಗಗಳಿಂದ ದೂರ ಉಳಿಯಲು ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಆದರೆ, ಸ್ನಾನದ ಬಳಿಕ ನಿಮಗೆ ಗೊತ್ತಿದ್ದೋ ಇಲ್ಲವೇ ಗೊತ್ತಿಲ್ಲದೆಯೋ ಮಾಡುವ ಕೆಲವು ಸಣ್ಣ ತಪ್ಪುಗಳು ನಿಮ್ಮ ಚರ್ಮದ ಆರೋಗದ ಮೇಲೆ, ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಹೌದು, ಸ್ನಾನ ಮಾಡಿದ ಬಳಿಕ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಚರ್ಮದ ಆರೋಗ್ಯದ ಮೇಲೆ ಹಾಗೂ ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಂತಹ ತಪ್ಪುಗಳೆಂದರೆ...
* ಟವೆಲ್‌ನಲ್ಲಿ ಉಜ್ಜುವುದು:
ಸಾಮಾನ್ಯವಾಗಿ ಸ್ನಾನ ಮುಗಿಸಿದ ನಂತರ ಟವೆಲ್‌ನಲ್ಲಿ ಮೈ ಒರೆಸಿಕೊಳ್ಳುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಆದ್ರೆ, ಕೆಲವರು ನೀರನ್ನು ಒರೆಸುವಾಗ ಟವೆಲ್‌ನಿಂದ ಉಜ್ಜುತ್ತಾರೆ. ಇದು ಚರ್ಮವನ್ನು ಹಾನಿಗೊಳಿಸುತ್ತದೆ. ಅದರಲ್ಲೂ ಮುಖ್ಯವಾಗಿ ಮುಖ ಮೇಲೆ ಟವೆಲ್‌ನಿಂದ ಉಜ್ಜುವುದರಿಂದ ಅದು ಚರ್ಮವನ್ನು ಡ್ರೈ ಮಾಡುತ್ತದೆ.
ಇದನ್ನೂ ಓದಿ- Hair Care Tips: ಮುಂಗಾರಿನ ಋತುವಿನಲ್ಲಿ ಕೂದಲಿಗೆ ಬಣ್ಣ ಹಾಕುವಾಗ ಈ ಸಂಗತಿಗಳು ನೆನಪಿರಲಿ
* ಮಾಶ್ಚರೈಸರ್:
ಸ್ನಾನ ಮಾಡಿದ ಬಳಿಕ ನಾವು ಮುಖಕ್ಕೆ ಮಾಶ್ಚರೈಸರ್ ಹಚ್ಚುತ್ತೇವೆ. ಆದರೆ, ಬಹುತೇಕ ಮಂದಿ ಬಾಡಿ ಲೋಷನ್ ಬಳಸುವುದಿಲ್ಲ. ಇದು ಚರ್ಮದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದನ್ನು ತಪ್ಪಿಸಲು ಸ್ನಾನದ ನಂತರ ನಮ್ಮ ಮುಖವನ್ನು ತೇವಗೊಳಿಸುವಂತೆ, ದೇಹದ ಉಳಿದ ಭಾಗವನ್ನು ತೇವಗೊಳಿಸುವ ಬಗ್ಗೆ ಎಂದರೆ ಮಾಶ್ಚರೈಸರ್, ಬಾಡಿ ಲೋಷನ್ ಹಚ್ಚುವ ಬಗ್ಗೆ ಕಾಳಜಿವಹಿಸಿ.
* ಕೂದಲಿಗೆ ಟವೆಲ್ ಸುತ್ತಿಕೊಳ್ಳುವುದು:
ಸ್ನಾನದ ನಂತರ ಟವೆಲ್ ಸುತ್ತಿಕೊಳ್ಳುವುದು ಕೂದಲಿಗೆ ತುಂಬಾ ಹಾನಿಕಾರಕವಾಗಿದೆ. ತಲೆಗೆ ಸ್ನಾನ ಮಾಡಿದ ತಕ್ಷಣ ಕೂದಲಿಗೆ ಟವೆಲ್ ಕಟ್ಟುವುದರಿಂದ ಅದು ಕೂದಲಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಒದ್ದೆ ಕೂದಲನ್ನು ಬಿಗಿಯಾಗಿ ಟವೆಲ್‌ನಿಂದ ಸುತ್ತಿ ಕಟ್ಟಿದಾಗ ಅದು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ.
ಇದನ್ನೂ ಓದಿ- Shikakai Powder: ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಸೀಗೆಕಾಯಿ ಸಿಗ್ತದೆ ಅದನ್ನ ಬಳಸಿ...!
* ಒದ್ದೆ ಕೂದಲನ್ನು ಬಾಚಿಕೊಳ್ಳುವುದು:
ಕೆಲವರು ಕೂದಲು ಒದ್ದೆ ಇರುವಾಗ ಬಾಚುವುದರಿಂದ ಸಿಕ್ಕು ಬಿಡಿಸುವುದು ತುಂಬಾ ಸುಲಭ ಎಂದು ಭಾವಿಸಿ, ತಲೆಗೆ ಸ್ನಾನ ಮಾಡಿದ ತಕ್ಷಣ ಕೂದಲು ಬಾಚುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ