New Year 2023: ಹೊಸ ವರ್ಷ 2023 ರ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ದೇವರ ಆಶೀರ್ವಾದದೊಂದಿಗೆ ವರ್ಷದ ಮೊದಲ ದಿನವನ್ನು ಪ್ರಾರಂಭಿಸಿದರೆ, ವರ್ಷವಿಡೀ ಸಂಕಷ್ಟಗಳಿಗೆ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ದುಃಖ ಮತ್ತು ಬಡತನ ದೂರಾಗುತ್ತದೆ. ಹೊಸ ವರ್ಷದಂದು ಅತ್ಯಂತ ಶುಭ ಕಾಕತಾಳೀಯ ರೂಪುಗೊಳ್ಳುತ್ತಿದೆ. ಇದರಲ್ಲಿ ಸೂರ್ಯನನ್ನು ಮತ್ತು ಯಮರಾಜನನ್ನು ಪೂಜಿಸುವುದರಿಂದ ವರ್ಷವಿಡೀ ಅಪಾರ ಸಂತೋಷ ಪ್ರಾಪ್ತಯಾಗಲಿದೆ ಎನ್ನಲಾಗಿದೆ. ಜನವರಿ 1, 2023 ರಂದು ನಿರ್ಮಾಣಗೊಳ್ಳುತ್ತಿರುವ ವಿಶೇಷ ಕಾಕತಾಳೀಯ ಯಾವುದು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

2023 ರಲ್ಲಿ ವಿಶೇಷ ಕಾಕತಾಳೀಯ ರೂಪಗೊಳ್ಳುತ್ತಿದೆ
ಹೊಸ ವರ್ಷವು ಜನವರಿ 1, 2023 ರಂದು ದಶಮಿ ತಿಥಿಯಿಂದ ಪ್ರಾರಂಭವಾಗುತ್ತಿದೆ. ಧರ್ಮಗ್ರಂಥಗಳಲ್ಲಿ ಯಮರಾಜನನ್ನು ದಶಮಿ ತಿಥಿಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ದಿನ ಯಮನನ್ನು ಪೂಜಿಸುವುದರಿಂದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಯಮರಾಜನು ನರಕ ಮತ್ತು ಅಕಾಲಿಕ ಮರಣದಿಂದ ಮನುಷ್ಯನಿಗೆ ಮುಕ್ತಿ ನೀಡುತ್ತಾನೆ.

ಜನವರಿ 1, 2023 ಭಾನುವಾರ, ಈ ದಿನವನ್ನು ಗ್ರಹಗಳ ರಾಜನಾದ ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಸೂರ್ಯನ ಆರಾಧನೆಯು ಸಂತೋಷ, ಊರ್ಜೆ, ಶಕ್ತಿ, ಸಮೃದ್ಧಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಯಮರಾಜನು ಸೂರ್ಯದೇವನ ಪುತ್ರ ಕೂಡ ಹೌದು. ಯಮಲೋಕದ ದೇವ ಯಮರಾಜನ ತಂದೆ ಸೂರ್ಯ ದೇವನಿಂದ ಆಶೀರ್ವಾದ ಪಡೆದ ವ್ಯಕ್ತಿಯು ಅಕಾಲಿಕ ಮೃತ್ಯು ಭಯ ಮತ್ತು ಯಮನ ಹಿಂಸೆಯನ್ನು ಎದುರಿಸುವುದಿಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಯಮರಾಜ ಮತ್ತು ಸೂರ್ಯ ದೇವರ ಪೂಜೆಗೆ ವಿಧಾನ
2023 ರ ಹೊಸ ವರ್ಷದ ಮೊದಲ ದಿನ, ಬ್ರಹ್ಮ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಯ ನೀರಿನಿಂದ ಸ್ನಾನ ಮಾಡಿ. ಕೆಂಪು ಬಟ್ಟೆಗಳನ್ನು ಧರಿಸಿ ಮತ್ತು ತಾಮ್ರದ ಪಾತ್ರೆಯೊಂದಿಗೆ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಹೂವುಗಳು, ಕೆಂಪು ಚಂದನ, ಕೆಂಪು ಹೂವುಗಳು, ಕುಂಕುಮವನ್ನು ನೀರಿನಲ್ಲಿ ಮಿಶ್ರಣ ಮಾಡಲು ಮರೆಯಬೇಡಿ. ಅರ್ಘ್ಯವನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಿ,

ಓಂ ಹ್ರೀ ಹ್ರೀ ಸೂರ್ಯಾಯ ಸಹಸ್ರಕಿರಣರಾಯ, ಮನೋವಾಂಚಿತ ಫಲಂ ದೇಹಿ ದೇಹಿ ಸ್ವಾಹಾ.

ಸಾಧ್ಯವಾದರೆ, ಈ ದಿನ ಸೂರ್ಯ ದೇವರ ದೇವಸ್ಥಾನಕ್ಕೆ ತೆರಳಿ ಸೇವೆ ಸಲ್ಲಿಸಿ. ಈ ಪರಿಹಾರವು ಅನೇಕ ತಲೆಮಾರುಗಳನ್ನು ರಕ್ಷಿಸುತ್ತದೆ. ಭಾನುವಾರದಂದು, ಹಿಟ್ಟಿನ ಉಂಡೆಗಳನ್ನು ಮಾಡುವ ಮೂಲಕ ಮೀನುಗಳಿಗೆ ಆಹಾರವನ್ನು ನೀಡುವುದು ವಿತ್ತೀಯ ಲಾಭವನ್ನು ನೀಡುತ್ತದೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-Dhanu Sankranti: ಇಂದು ಧನು ರಾಶಿಗೆ ಸೂರ್ಯನ ಪ್ರವೇಶ, 3 ರಾಶಿಯವರು ಎಚ್ಚರಿಕೆಯಿಂದ ಕಳೆಯಬೇಕಾದ ದಿನ

ಯಮರಾಜನನ್ನು ಮೆಚ್ಚಿಸಲು, ಸೂರ್ಯ ದೇವರಿಗೆ ಹಾಲು ಮತ್ತು ತುಪ್ಪವನ್ನು ಅರ್ಪಿಸುವುದು ಪ್ರಯೋಜನಕಾರಿಯಾಗಿದೆ. ಈ ದಿನ ಸೂರ್ಯಾಸ್ತದ ನಂತರ ಯಮನ ಹೆಸರಿನಲ್ಲಿ ದೀಪವನ್ನು ದಾನ ಮಾಡಿ. ದಕ್ಷಿಣ ದಿಕ್ಕಿನಲ್ಲಿ ಹಿಟ್ಟಿನ ನಾಲ್ಕು ಮುಖದ ದೀಪವನ್ನು ಮಾಡಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಈ ಪರಿಹಾರವು ಅಕಾಲಿಕ ಮ್ದ್ರುತ್ಯೂ ಭಯವನ್ನು ತೊಡೆದುಹಾಕುತ್ತದೆ ಮತ್ತು ದೀರ್ಘಾಯುಷ್ಯದ ವರವನ್ನು ನೀಡುತ್ತದೆ.


ಇದನ್ನೂ ಓದಿ-Kharmas 2022: ನಾಳೆಯಿಂದ ಖರ್ಮಾಸ್ ಆರಂಭ, 4 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.