ನವದೆಹಲಿ: Rashifal 2022 - ಜ್ಯೋತಿಷ್ಯ ಶಾಸ್ತ್ರದ (Horoscope 2022) ಪ್ರಕಾರ, 2022 ರ ಉದಯವು ವೃಶ್ಚಿಕ ರಾಶಿ ಮತ್ತು ಕನ್ಯಾ ಲಗ್ನದಲ್ಲಿ ಸಂಭವಿಸುತ್ತಿದೆ. ವರ್ಷದ ಆರಂಭದಲ್ಲಿ, ಚಂದ್ರನು ಜ್ಯೇಷ್ಠ ನಕ್ಷತ್ರದ ಮೊದಲ ಹಂತದಲ್ಲಿರುತ್ತಾನೆ. ಗ್ರಹಗಳ ಈ ಸ್ಥಾನದಿಂದ ಮುಂಬರುವ ವರ್ಷವು ಉದ್ಯೋಗಿಗಳಿಗೆ, ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ವಿಶೇಷವಾಗಿರುತ್ತದೆ. ಇದಲ್ಲದೇ ಹೊಸ ವರ್ಷದ ಆರಂಭದಲ್ಲಿ ಕಾಲಸರ್ಪಯೋಗವು (Kaal Sarp Yog In 2022)  ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಜ್ಯೋತಿಷ್ಯದ ದೃಷ್ಟಿಯಿಂದ ಹೊಸ ವರ್ಷದ ವಿಶೇಷತೆ ಏನೆಂದು ತಿಳಿಯೋಣ ಬನ್ನಿ


COMMERCIAL BREAK
SCROLL TO CONTINUE READING

ಕಾಲಸರ್ಪಯೋಗದಿಂದ 2022ರ ಆರಂಭ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2022 ರ ಆರಂಭದಲ್ಲಿ 12 ಗಂಟೆಯ ನಂತರ ಕಾಲಸರ್ಪ ಯೋಗವು ರೂಪುಗೊಳ್ಳುತ್ತದೆ. ವಿಶ್ವ ಜಾತಕದಲ್ಲಿ ರೂಪುಗೊಳ್ಳಲಿರುವ ಕಾಲಸರ್ಪ ಯೋಗದಲ್ಲಿ ರಾಹುವಿನ (Rahu) ದೃಷ್ಟಿ ಅದೃಷ್ಟ ಸ್ಥಾನದ ಮೇಲೆ ನೆಟ್ಟಿದೆ. ಇದಲ್ಲದೆ, ಪ್ರಬಲವಾದ ಮನೆಯಲ್ಲಿ ಕೇತು (Ketu), ಚಂದ್ರ ಮತ್ತು ಮಂಗಳ ಒಟ್ಟಿಗೆ ಕುಳಿತಿದ್ದಾರೆ. ಇದರಿಂದಾಗಿ ಭೂಮಿಯ ಮೇಲಿನ ಪರಿಸ್ಥಿತಿ ತುಂಬಾ ಬಿಗಡಾಯಿಸಲಿದೆ. ಆಕಾಶದಿಂದ ವಿಪತ್ತು ಬರುವ ಸಾಧ್ಯತೆ ಇದೆ. ಇದರೊಂದಿಗೆ ದೇಶ ದೊಡ್ಡ ಬಿಕ್ಕಟ್ಟನ್ನೇ ಎದುರಿಸಬೇಕಾಗಬಹುದು. ಸುನಾಮಿಯಂತಹ (Tsunami) ಆಪತ್ತು ಕೂಡ ಅಲ್ಲಗಳೆಯಲಾಗದು.


ಇದನ್ನೂ ಓದಿ-ನಿಮ್ಮ ಅದೃಷ್ಟ ಬದಲಾಯಿಸುತ್ತೆ 'ಎಣ್ಣೆ' : ರಾಶಿ ಪ್ರಕಾರ, ಈ ರೀತಿ ಕೆಲಸ ಮಾಡಿ


ಆರ್ಥಿಕ ದೃಷ್ಟಿಕೋನದಿಂದ 2022 ವಿಶೇಷವಾಗಿದೆ
ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷವು ಆರೋಗ್ಯದ ದೃಷ್ಟಿಯಿಂದ ಸಾಮಾನ್ಯವಾಗಿರಲಿದೆ. ಆದರೆ, ಮಕ್ಕಳನ್ನು ಬಾಧೆಗಳಿಂದ ದೂರವಿರಿಸಬೇಕು. ಶೈಕ್ಷಣಿಕ ದೃಷ್ಟಿಯಿಂದ 2022 ಮಿಶ್ರ ಪ್ರತಿಫಲ ನೀಡಲಿದೆ. ವಿದ್ಯಾರ್ಥಿಗಳು ಹೊಸ ವರ್ಷದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಕಳೆದ ವರ್ಷ ಕೊರೊನಾ ಮಹಾಮಾರಿಯಿಂದ ಅಸ್ತವ್ಯಸ್ತವಾಗಿದ್ದ ಶಿಕ್ಷಣ ದಿನಚರಿ ಸುಧಾರಿಸಲಿದೆ. ಇದಲ್ಲದೇ ಆರ್ಥಿಕ ದೃಷ್ಟಿಯಿಂದಲೂ 2022 ವಿಶೇಷವಾಗಲಿದೆ. ಆರ್ಥಿಕತೆಯ ಸ್ಥಿತಿ ಸುಧಾರಿಸಲಿದೆ. ಅಂದರೆ, ಕರೋನಾ ಸಾಂಕ್ರಾಮಿಕದಿಂದಾಗಿ ಹದಗೆಟ್ಟ ಆರ್ಥಿಕ ಸ್ಥಿತಿ ಮತ್ತೆ ಸರಿದಾರಿಗೆ ಬರಲಿದೆ. 


ಇದನ್ನೂ ಓದಿ-ಡಿ.31ರವರೆಗೆ ಈ 4 ರಾಶಿಯವರು ಜಾಗರೂಕರಾಗಿರಿ: ಭಾರೀ ನಷ್ಟ ಉಂಟಾಗಬಹುದು..!


(Disclaimer: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-ಈ ರಾಶಿಯವರಿಗೆ ಅತ್ಯಂತ ಕಠಿಣವಾಗಿರಲಿದೆ 2022, ಎದುರಿಸಬೇಕಾದೀತು ಆರ್ಥಿಕ ನಷ್ಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.