ನವದೆಹಲಿ : ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷದ (New year)ಆಗಮನವಾಗಲಿದೆ. 2021 ಕಳೆದು 2022ಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷದಲ್ಲಿ ಜೀವನದಲ್ಲಿ ಸುಖ ಸಂತೋಷ ತುಂಬಿರಲಿ ಎನ್ನುವುದೇ ಪ್ರತಿಯೊಬ್ಬರ ಮನದಾಸೆಯಾಗಿರುತ್ತದೆ. ಹೊಸ ವರ್ಷ ಕೆಲವರ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ತರಬಹುದು. ಇನ್ನು ಕೆಲವರ ಜೀವನವನ್ನು ಮಂಕಾಗಿಸಬಹುದು. ಜ್ಯೋತಿಷ್ಯದ ಪ್ರಕಾರ (Astrology), ಕೆಲವೊಂದು ರಾಶಿಯವರ ಜೀವನದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದೆ. 


COMMERCIAL BREAK
SCROLL TO CONTINUE READING

ಮೇಷ  (Aries): ಹೊಸ ವರ್ಷದಲ್ಲಿ (new year horoscope)ಈ ರಾಶಿಯವರ ಪ್ರೇಮ ಜೀವನವು ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಒಂಟಿಯಾಗಿದ್ದರೆ ಈ ವರ್ಷ ನಿಮ್ಮ ಜೀವನದಲ್ಲಿಯೂ ಸಂಗಾತಿಯ ಪ್ರವೇಶವಾಗಬಹುದು. ನಿಮ್ಮ ವೃತ್ತಿಪರ ಜೀವನವನ್ನು ಉತ್ತಮಗೊಳಿಸುವಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಯಾವುದೇ ರೀತಿಯ ಟೆನ್ಷನ್ ಇರುವುದಿಲ್ಲ. ಮದುವೆಯಾಗುವ (marriage) ಯೋಚನೆಯಲ್ಲಿರುವವರು ಹೊಸ ವರ್ಷದಲ್ಲಿ ಮದುವೆಯಾಗಬಹುದು.


ಇದನ್ನೂ ಓದಿ : Budhaditya Yoga: ಈ ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ನೀಡಲಿದೆ ಬುಧಾದಿತ್ಯ ಯೋಗ


ಧನು ರಾಶಿ (Sagittarius) : ಈ ವರ್ಷ ಪ್ರೇಮ ಜೀವನಕ್ಕೆ ಉತ್ತಮವಾಗಿದೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ, ಬರುವ ಸಮಸ್ಯೆಗಳು ಬಗೆಹರಿಯುತ್ತವೆ. ಪ್ರೀತಿ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ಮದುವೆಯ ಬಗ್ಗೆ ಮುಂದುವರೆಯಬಹುದು. ವಿವಾಹಿತರಿಗೂ ಸಮಯ ಉತ್ತಮವಾಗಿದೆ. 


ಮಕರ (Capricorn): ಮಕರ ರಾಶಿಯವರ ಪ್ರೇಮ ಜೀವನಕ್ಕೂ ಈ ವರ್ಷ ಉತ್ತಮವಾಗಿದೆ. ಇನ್ನೂ ಲವ್ ರಿಲೇಶನ್ ಶಿಪ್ ನಲ್ಲಿ ಇಲ್ಲದವರ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗಬಹುದು. ಈ ರಾಶಿಚಕ್ರದ (Zodic sign) ಜನರು ಈ ವರ್ಷ ವಿವಾಹವಾಹಬಹುದು. 2022 ರಲ್ಲಿ ಮೇ ನಿಂದ ಜುಲೈ ವರೆಗಿನ ಸಮಯವು ಪ್ರೀತಿಯಲ್ಲಿರುವ ಜನರಿಗೆ ತುಂಬಾ ಮಂಗಳಕರವಾಗಿದೆ. ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದರೆ, ಈ ವರ್ಷ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಗಾತಿಯನ್ನು ಪರಿಚಯಿಸಬಹುದು. 


ಇದನ್ನೂ ಓದಿ : Longest Lunar Eclipse: ಈ ಶತಮಾನದ ಸುದೀರ್ಘ ಚಂದ್ರಗ್ರಹಣ; ಈ 3 ರಾಶಿಚಕ್ರದವರು ಎಚ್ಚರದಿಂದಿರಿ


ಕುಂಭ (Aquarius): ಈ ವರ್ಷ ನಿಮ್ಮ ಪ್ರೀತಿಯ ಜೀವನವನ್ನು ಸುಧಾರಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತೀರಿ. ನಿಮ್ಮ ಸಂಬಂಧವು ಬಲಗೊಳ್ಳಲು ಪ್ರಾರಂಭಿಸುತ್ತದೆ. ಈ ವರ್ಷ ನೀವು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗಬಹುದು. ವಿವಾಹಿತರಿಗೂ ಈ ವರ್ಷ ಉತ್ತಮವಾಗಿರುತ್ತದೆ. ಸಂಬಂಧ ಗಟ್ಟಿಯಾಗಲಿದೆ. ನಿಮ್ಮ ಜೀವನದ ಪ್ರಮುಖ ಕೆಲಸಗಳಲ್ಲಿ ನಿಮ್ಮ ಸಂಗಾತಿಯ ಬೆಂಬಲ ಸಿಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.