Budhaditya Yoga: ಈ ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ನೀಡಲಿದೆ ಬುಧಾದಿತ್ಯ ಯೋಗ

Budhaditya Yoga: ಇದೇ ನವೆಂಬರ್ 21, 2021 ರಿಂದ  ಬುಧಾದಿತ್ಯ ಯೋಗ  ಏರ್ಪಡುತ್ತಿದೆ.  20 ದಿನಗಳ ಕಾಲ ನಡೆಯುವ ಈ ಯೋಗವು 3 ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ.  

Written by - Yashaswini V | Last Updated : Nov 19, 2021, 08:26 AM IST
  • ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗವನ್ನು ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ
  • ಈ ಯೋಗವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ
  • ಕೆಲವು ರಾಶಿಯವರಿಗೆ ಈ ಯೋಗವು ಸಮೃದ್ಧಿಯನ್ನು ತರುತ್ತದೆ
Budhaditya Yoga: ಈ ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ನೀಡಲಿದೆ ಬುಧಾದಿತ್ಯ ಯೋಗ   title=
Budhaditya Yoga November 2021

Budhaditya Yoga:  ಯಶಸ್ಸು, ಆರೋಗ್ಯ ಮತ್ತು ಆತ್ಮಸ್ಥೈರ್ಯಕ್ಕೆ ಕಾರಣವಾದ ಸೂರ್ಯನು ಮತ್ತು ತೇಜಸ್ಸು ಮತ್ತು ಸಮೃದ್ಧಿಗೆ ಕಾರಣವಾದ ಬುಧ ಶೀಘ್ರದಲ್ಲೇ  ಒಂದೇ ರಾಶಿಯಲ್ಲಿ ಸಂಯೋಗಗೊಳ್ಳಲಿದ್ದಾರೆ. ಎರಡು ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಕೂಡುತ್ತವೆ. ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗವನ್ನು ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರಿಗೆ ಈ ಯೋಗವು ಸಮೃದ್ಧಿಯನ್ನು ತರುತ್ತದೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.

20 ದಿನಗಳ ಕಾಲ ಇರಲಿದೆ ಬುಧಾದಿತ್ಯ ಯೋಗ:
ಗ್ರಹಗಳ ರಾಜನಾದ ಸೂರ್ಯನು ನವೆಂಬರ್ 16, 2021 ರಂದು ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ. ಇದೀಗ ನವೆಂಬರ್ 21, 2021 ರಂದು ಬುಧ ಕೂಡ ಈ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಹೀಗಾಗಿ ನವೆಂಬರ್ 21 ರಂದು ಎರಡು ಗ್ರಹಗಳು ಒಂದೇ ಗ್ರಹದಲ್ಲಿ ಕೂಡುವುದರಿಂದ ಬುಧಾದಿತ್ಯ ಯೋಗ (Budhaditya Yoga) ರೂಪುಗೊಳ್ಳಲಿದೆ. ಈ ಎರಡು ಗ್ರಹಗಳು ಡಿಸೆಂಬರ್ 10 ರವರೆಗೆ ವೃಶ್ಚಿಕ ರಾಶಿಯಲ್ಲಿರುವುದರಿಂದ ಡಿಸೆಂಬರ್ 10 ರವರೆಗೆ ಈ ಯೋಗ ಇರುತ್ತದೆ. 20 ದಿನಗಳ ಕಾಲ ನಡೆಯುವ ಈ ಯೋಗವು 3 ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Longest Lunar Eclipse: ಈ ಶತಮಾನದ ಸುದೀರ್ಘ ಚಂದ್ರಗ್ರಹಣ; ಈ 3 ರಾಶಿಚಕ್ರದವರು ಎಚ್ಚರದಿಂದಿರಿ

ಈ ರಾಶಿಚಕ್ರ ಚಿಹ್ನೆಗಳ ಭವಿಷ್ಯವು ಬದಲಾಗುತ್ತದೆ:
ಸಿಂಹ ರಾಶಿ:
ಸಿಂಹ ರಾಶಿಯವರು (Zodiac Signs) ಈ ಅವಧಿಯಲ್ಲಿ ಹೆಚ್ಚಿನ ಹಣದ ಹರಿವನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ಉದ್ಯಮವು ಉತ್ತಮವಾಗಿರುತ್ತದೆ. ಹೊಸ ಮನೆ ಮತ್ತು ವಾಹನದಿಂದ ನೀವು ಸಂತೋಷವನ್ನು ಪಡೆಯಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ.

ಕುಂಭ ರಾಶಿ: ಕುಂಭ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಗೌರವವೂ ಹೆಚ್ಚಾಗುತ್ತಾದೆ. ಈ ರಾಶಿಯವರು ಕಠಿಣ ಪರಿಶ್ರಮದ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ. ಇದು ಸಂತೋಷವನ್ನು ತರುತ್ತದೆ. ವಿಶೇಷವಾಗಿ ಸರ್ಕಾರಿ ವಲಯಕ್ಕೆ ಸಂಬಂಧಿಸಿದವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ- ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗೆ ಶನಿಕಾಟ ಇಲ್ಲ

ಮೀನ ರಾಶಿ: ಮೀನ ರಾಶಿಯವರಿಗೆ ಈ ಅವಧಿ ತುಂಬಾ ಅನುಕೂಲಕರವಾಗಿದೆ. ಪ್ರವಾಸಗಳು ಲಾಭದಾಯಕವಾಗಬಹುದು. ವಿತ್ತೀಯ ಲಾಭದಿಂದಾಗಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಅದೇ ಸಮಯದಲ್ಲಿ, ಬಯಸಿದ ಉದ್ಯೋಗ ಅಥವಾ ಸ್ಥಳಾಂತರವನ್ನು ಬಯಸುವ ವ್ಯಕ್ತಿಗಳ ಇಚ್ಛೆಗಳು ಈ ಸಮಯದಲ್ಲಿ ಈಡೇರುತ್ತವೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News