Astro Tips: ಹಲವಾರು ವರ್ಷಗಳ ಬಳಿಕ ಈ ರೀತಿಯ ಒಂದು ಅದ್ಭುತ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದ್ದು, ಈ ಬಾರಿಯ ಹೊಸವರ್ಷ ಭಾನುವಾರದಿಂದ ಆರಂಭಗೊಳ್ಳುತ್ತಿದೆ. 2017ರಲ್ಲಿ ಈ ರೀತಿಯ ಕಾಕತಾಳೀಯ ಸಂಭವಿಸಿತ್ತು. ಹೀಗಿರುವಾಗ ಹೊಸವರ್ಷದ ಆರಂಭವನ್ನು ನೀವು ಸೂರ್ಯೋಪಾಸನೆಯಿಂದ ಮಾಡಿದರೆ, ಇಡೀ ವರ್ಷ ನಿಮಗೆ ಸೂರ್ಯನ ಕೃಪೆ ಲಭಿಸುತ್ತದೆ. ಹಾಗೆ ನೋಡಿದರೆ, ಕೆಲವರು ನಿತ್ಯ ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಹಾಗೂ ಸೂರ್ಯನಿಗೆ ಪೂಜೆ ಸಲ್ಲಿಸುವುದರಿಂದ ತಮ್ಮ ದಿನವನ್ನು ಆರಂಭಿಸುತ್ತಾರೆ. ಆದರೆ, ಕೆಲವೊಮ್ಮೆ ಸಣ್ಣಪುಟ್ಟ ತಪ್ಪುಗಳು ನಡೆದು ಹೋಗುತ್ತವೆ. ಒಂದು ವೇಳೆ ನಿಮಗೂ ಕೂಡ ಸೂರ್ಯ ದೇವನ ಆಶೀರ್ವಾದ ಲಭಿಸಬೇಕು ಎಂದಾದಲ್ಲಿ, ಸೂರ್ಯನಿಗೆ ಪೂಜೆ ಸಲ್ಲಿಸುವಾಗ ಸರಿಯಾದ ಪದ್ಧತಿಯನ್ನು ಅನುಸರಿಸುವುದು ತುಂಬಾ ಮುಖ್ಯವಾಗಿದೆ. ಸೂರ್ಯದೇವನಿಗೆ ಅರ್ಘ್ಯ ಅರ್ಪಿಸುವಾಗ ನೀವು ಸರಿಯಾದ ಮಂತ್ರವನ್ನು ಪಠಿಸಬೇಕು. ಹಾಗಾದರೆ ಬನ್ನಿ ಸೂರ್ಯನಿಗೆ ಪೂಜೆ ಸಲ್ಲಿಸುವಾಗ ಸರಿಯಾದ ಸಮಯ ಮತ್ತು ವಿಧಾನವನ್ನು ಅನುಸರಿಸುವುದು ತುಂಬಾ ಮುಖ್ಯವಾಗಿದೆ.
ಈ ರೀತಿ ಸೂರ್ಯನಿಗೆ ಪೂಜೆ ಸಲ್ಲಿಸಿ

COMMERCIAL BREAK
SCROLL TO CONTINUE READING

>> ಹೆಚ್ಚಿನ ಜನರು ಬೆಳಗ್ಗೆ ಎದ್ದ ನಂತರ ಸೂರ್ಯ ದೇವರನ್ನು ಆರಾಧಿಸುತ್ತಾರೆ. ಹೀಗಿರುವಾಗ, ನೀವು ಪೂಜೆ ಮಾಡುವ ಸರಿಯಾದ ಮಾರ್ಗವನ್ನು ತಿಳಿದಿರಬೇಕು. ಬ್ರಹ್ಮ ಮುಹೂರ್ತದಲ್ಲಿ ಸೂರ್ಯನನ್ನು ಆರಾಧಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಎಲ್ಲಕ್ಕಿಂತ ಮೊದಲು ಬೆಳಗ್ಗೆ ಎದ್ದು ಸ್ನಾನ ಮಾಡಿ. ನಿಮ್ಮ ಮನಸ್ಸನ್ನು ಶುದ್ಧೀಕರಿಸಿ, ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಹೂವುಗಳನ್ನು ಬೆರೆಸಿ ಸೂರ್ಯ ದೇವರಿಗೆ ಅರ್ಪಿಸಿ. ಅರ್ಘ್ಯ ನೀಡುವಾಗ ಜೊತೆಗೆ ಗಾಯತ್ರಿ ಮಂತ್ರವನ್ನೂ ಪಠಿಸಿ.


>> ತಾಮ್ರವನ್ನು ಸೂರ್ಯನ ಲೋಹವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತಾಮ್ರದ ಪಾತ್ರೆಯ ಮೂಲಕವೇ ಅರ್ಘ್ಯವನ್ನು ನೀಡಿದರೆ ಉತ್ತಮ. ಇದನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅರ್ಘ್ಯವನ್ನು ನೀಡುವ ಸಮಯದಲ್ಲಿ ನೀರಿನ ಅಂಚಿನಿಂದ ನಿಮ್ಮ ಕಣ್ಣುಗಳು ಸೂರ್ಯ ದೇವರನ್ನು ನೋಡುತ್ತಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹೀಗೆ ಪೂಜೆ ಮಾಡಿದರೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಅಥವಾ ಕಣ್ಣುಗಳ ಕಾಂತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.


>> ಸೂರ್ಯೋದಯದ ಸಮಯದಲ್ಲಿ ನೀವು ಸೂರ್ಯನಿಗೆ ನಮಸ್ಕರಿಸಿದರೆ, ಅದು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸನಾತನ ಧರ್ಮದಲ್ಲಿ, ಪ್ರತಿ ದಿನವೂ ಒಂದಲ್ಲ ಒಂದು ದೇವರಿಗೆ ಮೀಸಲಾಗಿದೆ. ವೇದಗಳಲ್ಲಿ, ಸೂರ್ಯ ದೇವರನ್ನು ಕಣ್ಣು ಎಂದು ಪರಿಗಣಿಸಲಾಗಿದೆ ಮತ್ತು ಜ್ಯೋತಿಷ್ಯದಲ್ಲಿ, ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಇದಲ್ಲದೆ, ನೀವು ಭಾನುವಾರದಂದು ಆದಿತ್ಯ ಹೃದಯ ಸ್ತೋತ್ರವನ್ನು ಸಹ ಪಠಿಸಬೇಕು. ಇದು ನಿಮಗೆ ಬೇಕಾದ ಫಲಿತಾಂಶವನ್ನು ನೀಡುತ್ತದೆ. ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.


ಇದನ್ನೂ ಓದಿ-Happy New Year 2023: ಹೊಸ ವರ್ಷವಿಡೀ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ನಾಳೆ ರಾಶಿಗನುಗುಣವಾಗಿ ಬಟ್ಟೆ ಧರಿಸಿ


ಸೂರ್ಯದೇವ ಹುಟ್ಟಿದ್ದು ಹೇಗೆ?
ವೇದಗಳ ಪ್ರಕಾರ, ಸೂರ್ಯನನ್ನು ಪ್ರಪಂಚದ ಆತ್ಮ ಎಂದು ಕರೆಯಲಾಗುತ್ತದೆ. ಸೂರ್ಯನಿಂದ ಮಾತ್ರ ಭೂಮಿಯ ಮೇಲೆ ಜೀವನ ಸಾಧ್ಯ. ಬ್ರಹ್ಮಾಂಡವನ್ನು ರಚಿಸಿದಾಗ, ಮರೀಚಿಯು ಬ್ರಹ್ಮನ ಮಗ, ಅವನ ನಂತರ ಅವನ ಮಗ ಋಷಿ ಕಶ್ಯಪ್. ಋಷಿ ಕಶ್ಯಪ್ ಪ್ರಜಾಪತಿ ದಕ್ಷನ ಪುತ್ರಿಯರಾದ ದಿತಿ ಮತ್ತು ಅದಿತಿಯನ್ನು ವಿವಾಹವಾದರು. ದಿತಿಯು ಎಲ್ಲಾ ರಾಕ್ಷಸರಿಗೆ ಜನ್ಮ ನೀಡಿದಳು. ಅದಿತಿಯು ಎಲ್ಲಾ ದೇವತೆಗಳಿಗೆ ಜನ್ಮ ನೀಡಿದಳು. ಒಂದು ಕಾಲದಲ್ಲಿ ರಾಕ್ಷಸರು ಸ್ವರ್ಗವನ್ನು ವಶಪಡಿಸಿಕೊಂಡರು ಮತ್ತು ಎಲ್ಲಾ ದೇವತೆಗಳನ್ನು ಓಡಿಸಿದರು. ಇದರಿಂದಾಗಿ ತಾಯಿ ಅದಿತಿಯು ಸೂರ್ಯದೇವನನ್ನು ಪೂಜಿಸುತ್ತಾಳೆ ಮತ್ತು ಸೂರ್ಯದೇವನು ತನ್ನ ಗರ್ಭದಿಂದ ಹುಟ್ಟಬೇಕೆಂದು ಆತನಲ್ಲಿ ವರವನ್ನು ಕೋರುತ್ತಾಳೆ. ಕಠೋರ ತಪಸ್ಸಿನ ನಂತರ, ಆಕೆಯ ಆಸೆ ಈಡೇರುತ್ತದೆ. ಆ ನಂತರ ತೇಜಸ್ವಿ ಮಗು ಜನಿಸುತ್ತದೆ, ಆ ಮಗುವನ್ನು ಆದಿತ್ಯ ಎಂದು ಕರೆಯಲಾಗುತ್ತದೆ. ಅವನು ದೇವತೆಗಳ ಪ್ರಾಣ ರಕ್ಷಕನಾಗುತ್ತಾನೆ ಮತ್ತು ಎಲ್ಲಾ ರಾಕ್ಷಸರ ಸಂಹಾರ ಮಾಡುತ್ತಾನೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.


ಇದನ್ನೂ ಓದಿ-SSY Scheme : ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರದ ಬಗ್ಗೆ ಬಿಗ್ ಅಪ್‌ಡೇಟ್!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.