Happy New Year 2023: ಹೊಸ ವರ್ಷವಿಡೀ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ನಾಳೆ ರಾಶಿಗನುಗುಣವಾಗಿ ಬಟ್ಟೆ ಧರಿಸಿ

Lucky Colors For 2023: ಹೊಸ ವರ್ಷದಲ್ಲಿ ಸುಖ-ಸಮೃದ್ಧಿಯನ್ನು ಪಡೆಯಲು ಜನರು ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ. ಹಾಗಾದರೆ ಬನ್ನಿ, ಹೊಸ ವರ್ಷದಲ್ಲಿ ರಾಶಿಗನುಗುನವಾಗಿ ನಾವು ಯಾವ ಬಣ್ಣದ ಬಟ್ಟೆ ಧರಿಸಬೇಕು ಮತ್ತು ಅದರಿಂದ ನಮಗೆ ವರ್ಷವಿಡೀ ತಾಯಿ ಲಕ್ಷ್ಮಿಯ ಕೃಪೆ ಹೇಗೆ ಪ್ರಾಪ್ತಿಯಾಗುತ್ತದೆ ತಿಳಿದುಕೊಳ್ಳೋಣ,  

Written by - Nitin Tabib | Last Updated : Dec 31, 2022, 02:08 PM IST
  • 2023 ರ ವರ್ಷವು ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಪ್ರತಿಯೊಬ್ಬರೂ ಹಾರೈಸುತ್ತಾರೆ.
  • ತಮ್ಮ ಹೊಸ ವರ್ಷ ಸುಖ-ಸಂತೋಷದಿಂದ ಮತ್ತು ನವಚೈತನ್ಯ ಹಾಗೂ ಹುಮ್ಮಸ್ಸಿನಿಂದ ಕಳೆಯಲು ಜನರು ತರಹೇವಾರಿ ಪ್ರಯತ್ನಗಳನ್ನು ನಡೆಸುತ್ತಾರೆ.
Happy New Year 2023: ಹೊಸ ವರ್ಷವಿಡೀ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ನಾಳೆ ರಾಶಿಗನುಗುಣವಾಗಿ ಬಟ್ಟೆ ಧರಿಸಿ title=
ಹೊಸ ವರ್ಷದ ಹಾರ್ದಿಕ ಶುಭಾಷಯಗಳು 2023

Lucky Colors For 2023: ಸಾಮಾನ್ಯವಾಗಿ ಹೊಸ ವರ್ಷವು ನಮ್ಮ ನಿಮ್ಮೆಲ್ಲರ ಬಾಳಲ್ಲಿ ಹೊಸ ಭರವಸೆಯ ಆಶಾಕಿರಣಗಳನ್ನು ಹೊತ್ತು ತರುತ್ತದೆ ಎನ್ನಲಾಗುತ್ತದೆ. 2023 ರ ವರ್ಷವು ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಪ್ರತಿಯೊಬ್ಬರೂ ಹಾರೈಸುತ್ತಾರೆ. ತಮ್ಮ ಹೊಸ ವರ್ಷ ಸುಖ-ಸಂತೋಷದಿಂದ ಮತ್ತು ನವಚೈತನ್ಯ ಹಾಗೂ ಹುಮ್ಮಸ್ಸಿನಿಂದ ಕಳೆಯಲು ಜನರು ತರಹೇವಾರಿ ಪ್ರಯತ್ನಗಳನ್ನು ನಡೆಸುತ್ತಾರೆ. ನಿಮ್ಮ ರಾಶಿಗೆ ಅನುಗುಣವಾಗಿ ಹೊಸ ವರ್ಷದಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಮತ್ತು ಅದರಿಂದ ವರ್ಷವಿಡೀ ತಾಯಿ ಲಕ್ಷ್ಮಿ ಕೃಪೆ ಸದಾ ನಮ್ಮೊಂದಿಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಮೇಷ ರಾಶಿ- ಮೇಷ ರಾಶಿಯವರು ಜನವರಿ 1 ರಂದು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಈ ದಿನದಂದು ಯಾವುದೇ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ, ಇಲ್ಲದಿದ್ದರೆ ನೀವು ಅದರ ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

ವೃಷಭ ರಾಶಿ- ವೃಷಭ ರಾಶಿಯವರು ಜನವರಿ 1 ರಂದು ಬಿಳಿ, ಗುಲಾಬಿ ಅಥವಾ ಕೆನೆ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ವರ್ಷಪೂರ್ತಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ.ಈ ದಿನ ಅಪ್ಪಿತಪ್ಪಿಯೂ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.

ಮಿಥುನ ರಾಶಿ- ಈ ರಾಶಿಯ ಜನರು ವರ್ಷದ ಮೊದಲ ದಿನ ಹಸಿರು ಬಟ್ಟೆಗಳನ್ನು ಧರಿಸಬೇಕು. ಇದರಿಂದ ನಿಮ್ಮ ಸೃಜನಶೀಲತೆ ಹೆಚ್ಚುತ್ತದೆ ಮತ್ತು ಅದೃಷ್ಟವೂ ಹೊಳೆಯುತ್ತದೆ.

ಕರ್ಕ ರಾಶಿ- ಕರ್ಕ ರಾಶಿಯವರು ಹೊಸ ವರ್ಷದ ಮೊದಲ ದಿನ ಹಳದಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದು ನಿಮ್ಮ ಎಲ್ಲಾ ಸ್ಥಗಿತಗೊಂಡ ಕೆಲಸಗಳಲ್ಲಿ ಪ್ರಗತಿಯನ್ನು ತರುತ್ತದೆ ಮತ್ತು ನೀವು ಯಶಸ್ಸನ್ನು ಸಹ ಪಡೆಯುವಿರಿ.

ಸಿಂಹ ರಾಶಿ- ಸಿಂಹ ರಾಶಿಯವರು ಹೊಸ ವರ್ಷದಂದು ಕೆಂಪು, ಕೇಸರಿ, ಹಳದಿ, ಗೋಲ್ಡನ್ ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರೊಂದಿಗೆ ನೀವು ಲಕ್ಷ್ಮಿ ದೇವಿಯ ದೈವಿಕ ಅನುಗ್ರಹವನ್ನು ಪಡೆಯುವಿರಿ.

ಕನ್ಯಾ ರಾಶಿ- ಕನ್ಯಾ ರಾಶಿಯ ಜನರು ಹೊಸ ವರ್ಷದ ಮೊದಲ ದಿನದಂದು ತಿಳಿ ನೀಲಿ, ತಿಳಿ ಗುಲಾಬಿ ಅಥವಾ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ದಿನ ಯಾವುದೇ ರೂಪದಲ್ಲಿ ಕೆಂಪು ಬಣ್ಣವನ್ನು ಧರಿಸುವುದನ್ನು ತಪ್ಪಿಸಿ.

ತುಲಾ ರಾಶಿ- ತುಲಾ ರಾಶಿಯ ಜನರು ಜನವರಿ 1 ರಂದು ನೀಲಿ ಬಟ್ಟೆಗಳನ್ನು ಧರಿಸಬೇಕು. ಇದರಿಂದ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ. ಜೊತೆಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ಈ ದಿನ ಕಪ್ಪು, ಬಿಳಿ ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ.

ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯವರಿಗೆ ಹೊಸ ವರ್ಷದ ಮೊದಲ ದಿನದಂದು ಕೆಂಪು ಅಥವಾ ಮರೂನ್ ಬಣ್ಣದ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಈ ಎರಡೂ ಬಣ್ಣಗಳು ನಿಮಗೆ ಶುಭವನ್ನು ತರುತ್ತವೆ. ಈ ದಿನ ಹಸಿರು ಬಟ್ಟೆಗಳನ್ನು ಧರಿಸಬೇಡಿ.

ಧನು ರಾಶಿ- ಹಳದಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳು ವರ್ಷದ ಮೊದಲ ದಿನದಂದು ಧನು ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗುತ್ತದೆ. ಇದು ವರ್ಷವಿಡೀ ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತದೆ.

ಮಕರ ರಾಶಿ- ಮಕರ ರಾಶಿಯವರು ಹೊಸ ವರ್ಷದ ಮೊದಲ ದಿನದಂದು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದು ನಿಮ್ಮ ಯಶಸ್ಸಿನ ಹಾದಿಯಲ್ಲಿ ಬರುವ ಅಡೆತಡೆಗಳಿಗೆ ಅಂತ್ಯ ಹಾಡುತ್ತದೆ.

ಕುಂಭ ರಾಶಿ- ಕುಂಭ ರಾಶಿಯವರಿಗೆ ಹೊಸ ವರ್ಷದ ಮೊದಲ ದಿನದಂದು ನೀಲಿ ಅಥವಾ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಈ ಎರಡೂ ಬಣ್ಣಗಳು ನಿಮಗೆ ಮಂಗಳಕರವೆಂದು ಸಾಬೀತಾಗುತ್ತವೆ. ಇದರೊಂದಿಗೆ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

ಇದನ್ನೂ ಓದಿ-Palmistry: ನಿಮ್ಮ ಕೈಯಲ್ಲಿಯೂ ಈ ಚಿಹ್ನೆ ಇದೆಯಾ, ಇದ್ರೆ ನಿಮ್ಮದು ರಾಜಯೋಗ, ಧನ-ಸಂಪತ್ತಿನ ಕೊರತೆ ಎಂದಿಗೂ ಎದುರಾಗಲ್ಲ

ಮೀನ ರಾಶಿ- ಮೀನ ರಾಶಿಯವರು ವರ್ಷದ ಮೊದಲ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.

ಇದನ್ನೂ ಓದಿ-Shani Upay: ಹೊಸ ವರ್ಷಕ್ಕೂ ಮುನ್ನ ಶನಿವಾರ ಸಂಜೆಯೊಳಗೆ ಈ ಉಪಾಯ ಮಾಡಿ! ವರ್ಷವಿಡೀ ಸಂಕಷ್ಟ ನಿಮ್ಮ ಹತ್ತಿರವೂ ಸುಳಿಯಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News