Vision Improving Tips: ಮೊಬೈಲ್ ಫೋನ್ ಪ್ರಸ್ತುತ ಪ್ರತಿಯೊಬ್ಬ ವ್ಯಕ್ತಿಯ ಜೀವನಾಡಿಯಾಗಿದೆ. ಇದಿಲ್ಲದೆ, ನಾವು ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಕೆಲವರದ್ದು. ಇದನ್ನು ಹೊರತುಪಡಿಸಿ ಕಚೇರಿ ಕೆಲಸಕ್ಕಾಗಿ ಕಂಪ್ಯೂಟರ್, ಮನರಂಜನೆಗಾಗಿ ದೂರದರ್ಶನ ನಮ್ಮ-ನಿಮ್ಮೆಲ್ಲರ ಜೀವನದ ಅವಿಭಾಜ ಅಂಗ ಎಂದರೂ ತಪ್ಪಾಗುವುದಿಲ್ಲ. ಆದರೆ, ಇವುಗಳ ಅತಿಯಾದ ಬಳಕೆಯಿಂದಾಗಿ  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕಣ್ಣಿನ ಸೋಂಕುಗಳಿಗೆ ತುತ್ತಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಫೋನ್, ಟಿವಿ, ಆನ್‌ಲೈನ್ ತರಗತಿಗಳಂತಹ ಹೆಚ್ಚಿನ ಪರದೆಗಳನ್ನು ನೋಡುವಂತಹ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ.  ಆದ್ದರಿಂದ, ಅವರ ಕಣ್ಣುಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವ ಅವಶ್ಯಕತೆಯಿದೆ. ವಯಸ್ಸಾದಂತೆ ಇತರ ಆರೋಗ್ಯ ಸಮಸ್ಯೆಗಳಂತೆ ಕಣ್ಣಿನ ಸಮಸ್ಯೆಗಳು ಕಾಡುವುದು ತುಂಬಾ ಸಹಜ. ಆದರೆ, ಪ್ರಸ್ತುತ, ಗ್ಯಾಜೆಟ್‌ಗಳ ಅತಿಯಾದ ಬಳಕೆಯಿಂದಾಗಿ ತುಂಬಾ ಪುಟ್ಟ ಪುಟ್ಟ ಮಕ್ಕಳಲ್ಲೂ ಕಣ್ಣು ಉರಿ, ದೃಷ್ಟಿ ದೋಷದಂತಹ ಸಮಸ್ಯೆಗಳು ಕಾಡತೊಡಗಿವೆ. ಹಾಗಾಗಿ, ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕನ್ನಡಕ ಧರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. 


ವಾಸ್ತವವಾಗಿ, ಪ್ರತಿ ತಂದೆ-ತಾಯಿ ತಮ್ಮ ಮಕ್ಕಳು ಚೆನ್ನಾಗಿರಲಿ, ಆರೋಗ್ಯವಾಗಿರಲಿ ಎಂದು  ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಮಕ್ಕಳ ಸಂತೋಷ, ಅವರ ಭವಿಷ್ಯವೇ ಅವರ ಪ್ರಮುಖ ಆದ್ಯತೆ ಆಗಿರುತ್ತದೆ. ಮಕ್ಕಳ ಅಗತ್ಯತೆಗಳನ್ನು ಪೂರೈಸಲು  ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾರೆ. ಆದರೆ, ಮಕ್ಕಳು ಅಳಬಾರದು ಎಂತಲೋ, ಊಟ ಮಾಡಿಕೊಳ್ಳಲಿ ಎಂತಲೋ, ಇಲ್ಲವೇ ಕೆಲಸದ ನಡುವೆ ತಮಗೆ ತೊಂದರೆ ನೀಡದಿರಲಿ ಎಂದೋ ಯಾವುದೋ ಒಂದು ಕಾರಣಕ್ಕೆ ಮಕ್ಕಳಿಗೆ ಫೋನ್ ನೀಡುತ್ತಾರೆ. ಆರಂಭದಲ್ಲಿ ಇದು ಆ ಕ್ಷಣದಲ್ಲಿ ತೋಚುವ ಸಾಮಾನ್ಯ ಉಪಾಯವೇ ಆದರೂ, ಬರು ಬರುತ್ತಾ ಇದು ಮಕ್ಕಳಲ್ಲಿ ಮೊಬೈಲ್ ಗೀಳನ್ನು ಹೆಚ್ಚಾಗುವಂತೆ ಮಾಡುತ್ತದೆ. ತಮಗೆ ಗೊತ್ತೋ-ಗೊತ್ತಿಲ್ಲದೆಯೋ ಮಕ್ಕಳು ಈ ರೀತಿಯಾಗಿ ಫೋನ್ ಗೀಳಿನಲ್ಲಿ ಬೀಳಲು ಪೋಷಕರೇ ಪ್ರಮುಖ ಕಾರಣಕರ್ತರು. 


ಇದನ್ನೂ ಓದಿ- ನೈಸರ್ಗಿಕವಾಗಿ ಉದ್ದನೆಯ ಕೂದಲು ಬಯಸುವವರಿಗೆ ತುಂಬಾ ಪ್ರಯೋಜನಕಾರಿ ಮನೆಮದ್ದುಗಳು


ಕಾರಣ ಏನೇ ಇರಲಿ ಅತಿಯಾಗಿ ಗ್ಯಾಜೆಟ್‌ಗಳನ್ನು ಬಳಸುವುದು ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿರುವುದಂತೂ ಸುಳ್ಳಲ್ಲ. ಇದು ಕೇವಲ ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರನ್ನೂ ಬಾಧಿಸುತ್ತಿರುವ ಸಮಸ್ಯೆಯಾಗಿದೆ. ಆದರೆ, ನೀವು ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರವನ್ನು ಪಡೆಯಬಹುದು. ಮಾತ್ರವಲ್ಲ, ಕನ್ನಡಕಕ್ಕೂ ಬೈ! ಬೈ! ಹೇಳಬಹುದು. 


ಕಣ್ಣುಗಳನ್ನು ರಕ್ಷಿಸಲು ಏನು ಮಾಡಬೇಕು:
>> ನೀವು ದೀರ್ಘಕಾಲದವರೆಗೆ ಕಂಪ್ಯೂಟರ್ ಬಳಸುತ್ತಿದ್ದರೆ, ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಬೇಕು. ಇದಕ್ಕಾಗಿ ಮಧ್ಯೆ-ಮಧ್ಯೆ ಬ್ರೇಕ್ ತೆಗೆದುಕೊಳ್ಳಿ. ಕುಳಿತಲ್ಲಿಯೇ ಸಣ್ಣಪುಟ್ಟ ಕಣ್ಣಿನ ವ್ಯಾಯಾಮ ಮಾಡುವ ಮೂಲಕ ಕಣ್ಣುಗಳಿಗೆ ವಿಶ್ರಾಂತಿ ನೀಡಿ. 


>> ಕಂಪ್ಯೂಟರ್ ಪರದೆಯನ್ನು ಕಣ್ಣುಗಳಿಂದ ಕನಿಷ್ಠ 20 ರಿಂದ 25 ಇಂಚುಗಳಷ್ಟು ದೂರದಲ್ಲಿಡಿ.


>> ಅನಾವಶ್ಯಕವಾಗಿ ಫೋನ್, ಕಂಪ್ಯೂಟರ್ ಗಳ ಬಳಕೆ ಮಾಡುವ ಅಭ್ಯಾಸಕ್ಕೆ ಕಡಿವಾಣ ಹಾಕಿ. 


>> ಸೋಂಕುಗಳಿಂದ ರಕ್ಷಣೆ ಪಡೆಯಲು ಆಗಾಗ್ಗೆ ಕಣ್ಣುಗಳನ್ನು ತೊಳೆಯಿರಿ. 


ಇದನ್ನೂ ಓದಿ- ಹಸಿರು ಅಲೋವೆರಾಗಿಂತ  22 ಪಟ್ಟು ಹೆಚ್ಚು ಶಕ್ತಿಶಾಲಿ ಕೆಂಪು ಆಲೋವಿರಾ ! ಇದರ ಪ್ರಯೋಜನ ಕೂಡಾ ಅದ್ಭುತ 


ಮಕ್ಕಳಲ್ಲಿ ದೃಷ್ಟಿ ದೋಷ ನಿವಾರಣೆಗಾಗಿ ಕಣ್ಣಿಗೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಕಾಳಜಿ:- 
* ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್, ಟಿವಿಯಿಂದ ದೂರ ಉಳಿಯುವಂತೆ ಮಾಡಿ. 


* ಬಿಸಿಲಿಗೆ ಹೋಗುವಾಗ ತಪ್ಪದೆ ಸನ್ ಗ್ಲಾಸ್ ಬಳಸಿ. 


* ಪ್ರತಿದಿನ ಬೆಳಿಗ್ಗೆ, ಸಂಜೆ ಕಣ್ಣಿನ ವ್ಯಾಯಾಮಗಳನ್ನು ಮಾಡಿ. 


* ವಾರಕ್ಕೆ ಎರಡು ಬಾರಿ ತಲೆಗೆ ಎಣ್ಣೆ ಹಚ್ಚುವುದರಿಂದ ಕಣ್ಣುಗಳ ಆರೋಗ್ಯ ಕಾಪಾಡುತ್ತದೆ. ಹಾಗಾಗಿ, ತಲೆಗೆ ಎಣ್ಣೆ ಹಚ್ಚುವುದನ್ನು ಮರೆಯಬೇಡಿ. 


* ತರಕಾರಿಗಳಲ್ಲಿ, ಕ್ಯಾರೆಟ್ ಕಣ್ಣುಗಳಿಗೆ ತುಂಬಾ ಒಳ್ಳೆಯದು. ಮಗುವಿನ ಆಹಾರದಲ್ಲಿ ಅದರ ಸೇವನೆಯನ್ನು ಹೆಚ್ಚಿಸಿ. 


* ಕಿತ್ತಳೆ, ದ್ರಾಕ್ಷಿ, ಮಾವಿನ ಹಣ್ಣುಗಳು ಕಣ್ಣಿಗೆ ತುಂಬಾ ಪ್ರಯೋಜನಕಾರಿ. ಈ ಹಣ್ಣುಗಳು ಕಣ್ಣುಗಳಲ್ಲಿ ಶುಷ್ಕತೆಯನ್ನು ತಡೆಗಟ್ಟುವ ಮೂಲಕ ಕಣ್ಣುಗಳನ್ನು ರಕ್ಷಿಸುತ್ತದೆ.


* ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು ಸಾಧ್ಯವಾದಷ್ಟು ನಿಮ್ಮ ಮಕ್ಕಳಿಗೆ ಸಮಯವನ್ನು ನೀಡಿ. ಅವರೊಂದಿಗೆ ಆಟವಾಡಿ. ಅವರ ಜೀವನಶೈಲಿಯ ಬಗ್ಗೆ ವಿಶೇಷ ಗಮನವನ್ನು ನೀಡಿ. 


* ಮಕ್ಕಳನ್ನು ಕ್ರೀಡೆ, ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರೂ ಸಹ ಗ್ಯಾಜೆಟ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತಾರೆ. ಇದು ಅವರ ಕಣ್ಣುಗಳನ್ನು ರಕ್ಷಿಸಲು ಸಹಾಯಕವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.