Remedy for Long Hair: ನೈಸರ್ಗಿಕವಾಗಿ ಉದ್ದನೆಯ ಕೂದಲು ಬಯಸುವವರಿಗೆ ತುಂಬಾ ಪ್ರಯೋಜನಕಾರಿ ಮನೆಮದ್ದುಗಳು

Natural ways to grow hair length: ಉದ್ದನೆಯ ದಟ್ಟವಾದ ಕೂದಲನ್ನು ಪಡೆಯುವುದು ಪ್ರತಿಯೊಬ್ಬರ ಬಯಕೆ ಎಂದರೂ ತಪ್ಪಾಗಲಾರದು. ಆದರೆ ಈ ಬದಲಾದ ಜೀವನಶೈಲಿಯಲ್ಲಿ ಕೂಡಲ ಆರೈಕೆಗೆ ಸಮಯವೇ ಇಲ್ಲದಿರುವುದರಿಂದ ಕೂದಲಿನ ಆರೈಕೆ ಸಾಧ್ಯವಾಗುವುದಿಲ್ಲ. ಆದರೆ, ಹೆಚ್ಚು ಸಮಯ ಬೇಕಿಲ್ಲ, ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ನೀವು ಸೊಂಪಾದ ಉದ್ದನೆಯ ಕೂದಲನ್ನು ನಿಮ್ಮದಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Feb 6, 2024, 12:25 PM IST
  • ಕೂದಲಿನ ಹಲವು ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಕೆಲವು ಮನೆಮದ್ದುಗಳನ್ನು ಉಲ್ಲೇಖಿಸಲಾಗಿದೆ.
  • ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಉದ್ದವಾದ ಕೂದಲನ್ನು ಪಡೆಯಬಹುದು.
Remedy for Long Hair: ನೈಸರ್ಗಿಕವಾಗಿ ಉದ್ದನೆಯ ಕೂದಲು ಬಯಸುವವರಿಗೆ ತುಂಬಾ ಪ್ರಯೋಜನಕಾರಿ ಮನೆಮದ್ದುಗಳು title=

Tips for achieving long hair naturally: ಉದ್ದ ಮತ್ತು ದಪ್ಪ ಕೂದಲು ಹೊಂದಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ಮಾಡ್ರನ್ ಯುಗದಲ್ಲಿ ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಉತ್ಪನ್ನಗಳು ಲಭ್ಯವಿವೆ. ಆದರೆ, ಇವುಗಳಲ್ಲಿರುವ ರಾಸಾಯನಿಕಗಳು ನಿಮ್ಮ ಕೂದಲಿಗೆ ಹಾನಿ ಮಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಬದಲಿಗೆ ನೀವು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ ಉದ್ದನೆಯ, ದಪ್ಪವಾದ ಕೂದಲನ್ನು ನಿಮ್ಮದಾಗಿಸಬಹುದು. ಅಂತಹ ಸುಲಭ ಮನೆಮದ್ದುಗಳೆಂದರೆ... 

* ನೆಲ್ಲಿಕಾಯಿ: 
ಆಯುರ್ವೇದದಲ್ಲಿ ಕೂದಲಿನ ಹಲವು ಸಮಸ್ಯೆಗಳಿಗೆ ನೆಲ್ಲಿಕಾಯಿಯನ್ನು ಅತ್ಯುತ್ತಮ ಪರಿಹಾರ ಎಂದು ಹೇಳಲಾಗುತ್ತದೆ. ಎರಡು ಚಮಚ ಆಮ್ಲಾ ರಸದಲ್ಲಿ 2 ಚಮಚ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳುವುದರ ಜೊತೆಗೆ ಉದ್ದನೆಯ ಕೂದಲನ್ನು ಪಡೆಯಬಹುದು. 

* ಬೆಳ್ಳುಳ್ಳಿ: 
ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ನಿರ್ವಹಿಸುವ ಮೂಲಕ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕಾಗಿ  7 ರಿಂದ 8 ಬೆಳ್ಳುಳ್ಳಿ ಎಸಳಿನೊಂದಿಗೆ ಆಲಿವ್ ಎಣ್ಣೆಯನ್ನು ಬೆರೆಸಿ ಕುದಿಸಿ. ಈ ಎಣ್ಣೆಯನ್ನು ಬೆಚ್ಚಗಿರುವಾಗಲೇ ಕೂದಲಿನ ಬುಡದಿಂದ ಹಚ್ಚಿ ಮೂರು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿ. 

* ಮೆಂತ್ಯ: 
ನೈಸರ್ಗಿಕವಾಗಿ ಉದ್ದವಾದ ಕೂದಲನ್ನು ಪಡೆಯಲು ಮೆಂತ್ಯ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇದಕ್ಕಾಗಿ ಮೆಂತ್ಯವನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ನುಣ್ಣಗೆ ರುಬ್ಬಿ ಹೇರ್ ಪ್ಯಾಕ್ ಆಗಿ ಅನ್ವಯಿಸಿ. ಅರ್ಧಗಂಟೆ ಬಳಿಕ ಕೂದಲನ್ನು ತೊಳೆಯಿರಿ. 

ಇದನ್ನೂ ಓದಿ- Mouthwash: ಪ್ರತಿದಿನ ಮೌತ್ ವಾಶ್ ಬಳಸುತ್ತಿದ್ದೀರಾ? ಆದರೆ ಇದನ್ನು ತಿಳಿದರೆ ಶಾಕ್ ಆಗುತ್ತೀರಿ

* ಈರುಳ್ಳಿ ರಸ: 
ಹೇರಳವಾದ ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿರುವ ಈರುಳ್ಳಿ ರಸ ಕೂಡ ಕೂದಲಿನ ನೆತ್ತಿಯನ್ನು ಆರೋಗ್ಯಕರವಾಗಿರಿಸುವ ಮೂಲಕ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕಾಗಿ ಈರುಳ್ಳಿ ಸಿಪ್ಪೆ ತೆಗೆದು ಅದನ್ನು ಕತ್ತರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದರ ರಸವನ್ನು ಹಿಂಡಿ ಕೂದಲಿಗೆ ಅನ್ವಯಿಸಿ. 30 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ನೀವು ಶೀಘ್ರದಲ್ಲೇ ಉದ್ದನೆಯ ಕೂದಲನ್ನು ಪಡೆಯಬಹುದು. 

* ಹರಳೆಣ್ಣೆ: 
ವಿಟಮಿನ್ ಇ, ಒಮೆಗಾ -9 ಕೊಬ್ಬಿನಾಮ್ಲಗಳನ್ನು ಹೊಂದಿರುವ ಹರಳೆಣ್ಣೆ ತಲೆಹೊಟ್ಟು, ಕೂದಲುದುರುವಿಕೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ವಾರಕ್ಕೊಮ್ಮೆಯಾದರೂ ಹರಳೆಣ್ಣೆ ಹಚ್ಚಿ ತಲೆಗೆ ಸ್ನಾನ ಮಾಡುವುದರಿಂದ ನೈಸರ್ಗಿಕವಾಗಿ ಉದ್ದನೆಯ ದಪ್ಪವಾದ ಕೂದಲನ್ನು ನಿಮ್ಮದಾಗಿಸಬಹುದು. 

* ಅಲೋವೆರಾ: 
ಪೋಷಕಾಂಶಗಳ ಆಗರ ಎಂದಲೇ ಪರಿಗಣಿಸಲಾಗಿರುವ ಅಲೋವೆರಾ ಕೂಡ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಾತ್ರವಲ್ಲ ಇದು ಕೂದಲನ್ನು ಉತ್ತಮವಾಗಿ ಕಂಡೀಷನಿಂಗ್ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಮೊಟ್ಟೆಯ ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ಹಾಕಿ ಇದರಲ್ಲಿ ಎರಡು ಚಮಚ  ತಾಜಾ ಅಲೋವೆರಾ ಜೆಲ್‌ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. 15-20 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಕೂದಲನ್ನು ಬುಡದಿಂದಲೇ ಸ್ಟ್ರಾಂಗ್ ಮಾಡಬಹುದು. 

*  ಆಲೂಗಡ್ಡೆ ರಸ: 
ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ವಿಟಮಿನ್ ಎ, ಬಿ ಮತ್ತು ಸಿಗಳಿಂದ ಸಮೃದ್ಧವಾಗಿರುವ ಆಲೂಗಡ್ಡೆ ರಸ\ದೊಂದಿಗೆ ಒಂದು ಚಮಚ ಜೇನುತುಪ್ಪ, ನೀರು ಮತ್ತು ಮೊಟ್ಟೆಯ ಹಳದಿ ಲೋಳೆಯನ್ನು ಬೆರೆಸಿ ಕೂದಲಿಗೆ ಹಚ್ಚಿ. ಅರ್ಧಗಂಟೆ ಬಳಿಕ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ನಿರೀಕ್ಷಿತ ಫಲಿತಾಂಶವನ್ನು ನೀವು ಕಾಣುವಿರಿ. 

ಇದನ್ನೂ ಓದಿ- Hair Fall Control Tips: ಕೂದಲುದುರುವಿಕೆಗೆ ತಡೆಗಟ್ಟಲು ಮನೆಯಲ್ಲಿಯೇ ತಯಾರಿಸಬಹುದಾದ ಈ ಎಣ್ಣೆ ಬಳಸಿ ನೋಡಿ!

* ಕರಿಬೇವಿನ ಎಣ್ಣೆ: 
ಕರಿಬೇವು ಕೂದಲಿನ ಬೆಳವಣಿಗೆಯಲ್ಲಿ ಅತ್ಯುತ್ತಮ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಕೂದಲಿನ ಬುಡದಿಂದ ಕರಿಬೇವಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News