ನವದೆಹಲಿ : ಶನಿವಾರದ ದಿನವನ್ನು ಶನಿ ದೇವರಿಗೆ (Shani dev) ಸಮರ್ಪಿಸಲಾಗುತ್ತದೆ. ಆತನನ್ನು ಅತ್ಯಂತ ಕ್ರೂರ ದೇವರು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಶನಿವಾರ, ಕೆಲವು ಕೆಲಸಗಳನ್ನು ಮಾಡಲೇಬಾರದು. ಈ ವಸ್ತುಗಳನ್ನು ಶನಿವಾರ ಖರೀದಿಸಿದರೆ, ಶನಿ ದೇವರಿಗೆ ಕಿರಿಕಿರಿ ಉಂಟಾಗುತ್ತದೆ ಎನ್ನಲಾಗಿದೆ. ಮತ್ತೊಂದೆಡೆ, ಯಾರ ಜಾತಕದಲ್ಲಿ ಶನಿಯ ಸ್ಥಾನ ಉತ್ತಮವಾಗಿಲ್ಲವೋ, ಅವರು ಈ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಜ್ಯೋತಿಷ್ಯದಲ್ಲಿ, ಶನಿವಾರದಂದು (things not to do on saturday) ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಇದರಲ್ಲಿ ಕಬ್ಬಿಣವನ್ನು ಖರೀದಿಸದಿರುವುದು ಮುಖ್ಯವಾದುದು. ಆದರೆ ಕಬ್ಬಿಣದ ಹೊರತಾಗಿ, ಶನಿಗೆ ಸಂಬಂಧಿಸಿದ ಅನೇಕ ವಸ್ತುಗಳಿವೆ. ಅವುಗಳನ್ನು ಶನಿವಾರ ಖರೀದಿಸಬಾರದು.


COMMERCIAL BREAK
SCROLL TO CONTINUE READING

ಶನಿವಾರ ಈ ವಸ್ತುಗಳನ್ನು ಖರೀದಿಸಬೇಡಿ :
ಶನಿವಾರ ಶನಿಗೆ (Shani dev) ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಆರ್ಥಿಕ ಬಿಕ್ಕಟ್ಟು ಅಥವಾ ಜೀವನದಲ್ಲಿ ಇತರ ಸಮಸ್ಯೆಗಳನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು, ಆದರೆ ಶನಿವಾರಕ್ಕಿಂತ  (Saturday) ಮೊದಲೇ ಅವುಗಳನ್ನು ಖರೀದಿಸುವುದು ಉತ್ತಮ.


ಇದನ್ನೂ ಓದಿ : Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ


೧. ಶನಿವಾರ ಎಣ್ಣೆ (oil) ಖರೀದಿಸಬಾರದು. ತಪ್ಪಿಯೂ ಶನಿವಾರ ಎಳ್ಳೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಖರೀದಿಸಲು ಹೋಗಬೇಡಿ. ಶನಿವಾರ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನ  (Mustard oil) ಖರೀದಿಸಿದರೆ  ಜೀವನದಲ್ಲಿ ದೊಡ್ಡ ಬಿಕ್ಕಟ್ಟು ಉಂಟಾಗಬಹುದು ಎನ್ನಲಾಗಿದೆ.


೨. ಉಪ್ಪು (salt) ಮತ್ತು ಕಪ್ಪು ಎಳ್ಳನ್ನು ಕೂಡಾ ಶನಿವಾರ ಖರೀದಿಸಬಾರದು. ಕಪ್ಪು ಎಳ್ಳನ್ನು ಶನಿವಾರ ದಾನ ನೀಡಿದರೆ ಶನಿದೇವ ಪ್ರಸನ್ನನಾಗುತ್ತಾನೆಯಂತೆ. ಆದರೆ ಅದನ್ನು ಶನಿವಾರ ಖರೀದಿ ಮಾತ್ರ ಮಾಡಬಾರದು. ದಾನ ನೀಡಬೇಕೆಂದಿದ್ದರೆ ಮೊದಲೇ ಖರೀದಿಸಿ ಇಟ್ಟುಕೊಳ್ಳಿ.
 
೩.ಕಪ್ಪು ಬಟ್ಟೆಗಳನ್ನು (Black cloth) ಶನಿವಾರ ಧರಿಸಬಹುದು. ಆದರೆ ಕಪ್ಪು ಬಟ್ಟೆಗಳನ್ನು ಖರೀದಿಸಬಾರದು. ಆದಷ್ಟು ಶನಿವಾರ ಕಪ್ಪು ಬಣ್ಣವನ್ನು ಧರಿಸುವುದನ್ನು ತಪ್ಪಿಸುವುದು ಒಳಿತು. 


ಇದನ್ನೂ ಓದಿ: Feng Shui Tips : ನಿಮ್ಮ ಅದೃಷ್ಟದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಮನೆಯಲ್ಲಿ ಹಾಕಿದ 'ಕನ್ನಡಿ' ; ಈ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ!


ಶನಿಗೂ ಪೊರಕೆಗೂ ಸಂಬಂಧವಿದೆ, ಹಾಗಾಗಿ ಶನಿವಾರ ಪೊರಕೆ ಖರೀದಿಸಬಾರದು. ಬುಧವಾರ ಪೊರಕೆ (broom) ಖರೀದಿಸಲು ಉತ್ತಮ ದಿನ.


ಶನಿವಾರ ಕತ್ತರಿಯನ್ನು ಎಂದಿಗೂ ಖರೀದಿಸಬೇಡಿ. ಇದು ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ