ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಬಹಳ ಮುಖ್ಯ. ಪ್ರತಿಯೊಂದು ದಿಕ್ಕು ನಮ್ಮ ಜೀವನದ ಒಂದಲ್ಲ ಒಂದು ಅಂಶಗಳಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಪ್ರತಿಯೊಂದು ಕೆಲಸವನ್ನು ಮಾಡುವಾಗಲೂ ದಿಕ್ಕಿನತ್ತ ಗಮನ ಹರಿಸುವುದು ಬಹಳ ಮುಖ್ಯ. ಇನ್ನು ಇಡೀ ದಿನ ಕೆಲಸ ಮಾಡಲು ಅಗತ್ಯವಾದ ಶಕ್ತಿಯನ್ನು ಪಡೆಯಬೇಕಾದರೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡುವುದು ಅವಶ್ಯಕ. ಇದಕ್ಕಾಗಿ, ನೀವು ಸರಿಯಾದ ದಿಕ್ಕಿಗೆ ತಲೆ ಹಾಕಿ ಮಲಗಬೇಕು. ಹೀಗಾದಾಗ ಮಾತ್ರ ರಾತ್ರಿ ಸಂಪೂರ್ಣ ನಿದ್ದೆಯಾಗಿ ಮರುದಿನ ಬೆಳಿಗ್ಗೆ ಪೂರ್ಣ ಶಕ್ತಿಯಿಂದ  ಎಚ್ಚೆತ್ತುಕೊಳ್ಳುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಮಲಗಲು ಸರಿಯಾದ ದಿಕ್ಕು : 
ವಾಸ್ತು ಶಾಸ್ತ್ರದ ಪ್ರಕಾರ ಮಲಗುವಾಗ ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ. ಮತ್ತೊಂದೆಡೆ, ಇದಕ್ಕೆ ವಿರುದ್ಧವಾಗಿ, ಅಂದರೆ ಪೂರ್ವ ಅಥವಾ ದಕ್ಷಿಣಕ್ಕೆ ಪಾದಗಳನ್ನು ಇಟ್ಟು ಮಲಗುವುದು ಅಥವಾ ಪಶ್ಚಿಮ ಮತ್ತು ಉತ್ತರಕ್ಕೆ ತಲೆಯಿಟ್ಟು ಮಲಗುವುದರಿಂದ  ಬಹಳಷ್ಟು ಹಾನಿಯಾಗುತ್ತದೆ. ಇದರ ಹಿಂದಿನ ಕಾರಣವನ್ನು ವಾಸ್ತು ಶಾಸ್ತ್ರ ಅಥವಾ ಧರ್ಮದಲ್ಲಿ ಹೇಳಲಾಗಿದೆ. ದಕ್ಷಿಣ ದಿಕ್ಕನ್ನು ಯಮ ಮತ್ತು ನಕಾರಾತ್ಮಕ ಶಕ್ತಿಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಬದಿಗೆ ಪಾದಗಳನ್ನು ಇಟ್ಟು ಮಲಗುವುದು ಅನೇಕ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ. ಹಾಗೆಯೇ ಪೂರ್ವದಲ್ಲಿ ಅಂದರೆ ಸೂರ್ಯ ಉದಯಿಸುವ ದಿಕ್ಕಿನಲ್ಲಿ ಪಾದಗಳನ್ನು ಇಟ್ಟು ಮಲಗುವುದು ಕೂಡಾ ತುಂಬಾ ಅಶುಭ. ಇದು ಜೀವನದಲ್ಲಿ ಅನೇಕ ಅಡೆತಡೆಗಳನ್ನು ತರುತ್ತದೆ. 


ಇದನ್ನೂ ಓದಿ : Astro Tips : ಕೈಗೆ ಕೆಂಪು ದಾರ ಕಟ್ಟಿಕೊಳ್ಳುವುದರಿಂದ ನಿಮ್ಮ ಪ್ರತಿಯೊಂದು ಆಸೆಗಳು ಈಡೇರುತ್ತವೆ!


ದಕ್ಷಿಣಕ್ಕೆ ತಲೆ ಇಟ್ಟು ಮಲಗುವ ಹಿಂದಿನ ವೈಜ್ಞಾನಿಕ ಕಾರಣ  : 
ವಾಸ್ತವವಾಗಿ ಭೂಮಿಯಲ್ಲಿ ಕಾಂತೀಯ ಶಕ್ತಿ ಇದೆ. ಕಾಂತೀಯ ಪ್ರವಾಹವು ದಕ್ಷಿಣದಿಂದ ಉತ್ತರದ ಕಡೆಗೆ ನಿರಂತರವಾಗಿ ಹರಿಯುತ್ತದೆ. ನಾವು ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಿದಾಗ, ಈ ಶಕ್ತಿಯು ನಮ್ಮ ತಲೆಯ ಭಾಗದಿಂದ ಪ್ರವೇಶಿಸುತ್ತದೆ ಮತ್ತು ಪಾದಗಳ ಬದಿಯಿಂದ ಹೊರಬರುತ್ತದೆ. ಇಲ್ಲವಾದಲ್ಲಿ ಕಾಂತೀಯ ಪ್ರವಾಹವು ಪಾದಗಳಿಂದ ಪ್ರವೇಶಿಸಿ, ತಲೆಯಿಂದ ನಿರ್ಗಮಿಸುತ್ತದೆ. ಹೀಗಾದಾಗ ಇದು ನಮ್ಮಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಅನೇಕ ರೋಗಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಬೆಳಿಗ್ಗೆ ಎದ್ದ ನಂತರ, ವ್ಯಕ್ತಿಗೆ ದಣಿದ ಮತ್ತು ಶಕ್ತಿಹೀನತೆಯ  ಅನುಭವವಾಗುತ್ತದೆ. 


ಇದನ್ನೂ ಓದಿ : Gold Luck: ಈ ರಾಶಿಯವರು ಚಿನ್ನ ಧರಿಸಿದರೆ ತುಂಬಿ ತುಳುಕುವುದು ಅದೃಷ್ಟ; ರಾತ್ರೋರಾತ್ರಿ ಶ್ರೀಮಂತಿಕೆ ಒಲಿದು ಬರುವುದು!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.