ನವದೆಹಲಿ : ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿಯನ್ನು (Ganesh Chaturthi) ಆಚರಿಸಲಾಗುತ್ತದೆ. ಗಣೇಶ ಸ್ಥಾಪನೆ  ಅನ್ನು ಈ ದಿನದಂದು ಮಾಡಲಾಗುತ್ತದೆ. ಗಣೇಶ ಪ್ರತಿಷ್ಟಾಪಿಸಿದ ನಂತರ ವಿಸರ್ಜನೆವರೆಗೆ ಗಣಪತಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಬೇಕಾಗುತ್ತದೆ. ಈ ಸಮಯದಲ್ಲಿ, ಗಣೇಶನಿಗೆ ವಿಶೇಷ ಪೂಜೆ (Ganesha pooja)  ಸಲ್ಲಿಸಲಾಗುತ್ತದೆ. ಅವನಿಗೆ ವಿವಿಧ ರೀತಿಯ ಭೋಗವನ್ನು ಅರ್ಪಿಸಲಾಗುತ್ತದೆ. ಗಣೇಶ ಚತುರ್ಥಿ ಮತ್ತು ಗಣೇಶೋತ್ಸವದ ಸಮಯದಲ್ಲಿ ಈ ವಸ್ತುಗಳನ್ನು ಅರ್ಪಿಸಿದರೆ ಗಣೇಶ ಸಂತೃಪ್ತನಾಗುತ್ತಾನೆ ಮತ್ತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ವಸ್ತುಗಳನ್ನು ಗಣಪತಿಗೆ ಅರ್ಪಿಸಿ  :
ಸೆಪ್ಟೆಂಬರ್ 10 ರಿಂದ ಆರಂಭವಾಗುವ ಗಣೇಶೋತ್ಸವದ  (Ganesh Chaturthi)  ಸಮಯದಲ್ಲಿ, ಗಣಪತಿಯನ್ನು ವಿಧಿ ವತ್ತಾಗಿ ಪೂಜಿಸಬೇಕು. ಇದರಿಂದ  ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.  ಇದರ ಹೊರತಾಗಿ, ಗಣೇಶನಿಗೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸಬೇಕು. 


ಇದನ್ನೂ ಓದಿ :  ತೆಂಗಿನಕಾಯಿ ಇಲ್ಲದೆ ಯಾವ ಪೂಜೆಯು ಪೂರ್ಣವಲ್ಲ ಯಾಕೆ ಎನ್ನುವುದಕ್ಕೆ ಉತ್ತರ ಇಲ್ಲಿದೆ


ಸಿಂಧೂರ : ಗಣೇಶನನ್ನು (Lord Ganesha) ಪೂಜಿಸುವಾಗ ಆತನಿಗೆ ಸಿಂಧೂರ ತಿಲಕವನ್ನು ಹಚ್ಚಬೇಕು. ದೇವರಿಗೆ ತಿಲಕ ಹಾಕಿದ ನಂತರ ನಿಮಗೆ ತಿಲಕ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ, ವ್ಯಕ್ತಿ ಯಶಸ್ಸು-ಸಮೃದ್ಧಿಯನ್ನು ಪಡೆಯುತ್ತಾನೆ. 


ಮೋದಕ: ಮೋದಕ ಮತ್ತು ಲಡ್ಡೂಗಳೆಂದರೆ  ಗಣಪತಿಗೆ ಬಹಳ ಪ್ರಿಯವಾದವು.  ಮೋದಕ ಮತ್ತು ಲಡ್ಡುಗಳನ್ನು ಅರ್ಪಿಸಿ  ಗಣೇಶನ ಕೃಪೆಗೆ ಪಾತ್ರರಾಗಬಹುದು. 


ಬಾಳೆಹಣ್ಣು: ಗಣಪತಿಗೆ ಬಾಳೆಹಣ್ಣು (Banana) ಕೂಡ ತುಂಬಾ ಪ್ರಿಯವಾದುದು, ಹಾಗಾಗಿ ಅವನಿಗೆ ಅರ್ಪಿಸುವ ಭಕ್ಷ್ಯಗಳಲ್ಲಿ  ಬಾಳೆಹಣ್ಣನ್ನು ಅರ್ಪಿಸಬೇಕು. ಆದರೆ, ಬಾಳೆಹಣ್ಣು ಅರ್ಪಿಸುವಾಗ ಒಟ್ಟಿಗೆ ಜೋಡಿಕೊಂಡಿರುವ ಎರಡು ಬಾಳೆಹಣ್ಣನ್ನು ಅರ್ಪಿಸಿದರೆ ವಿಘ್ನ ವಿನಾಶಕ ಇನ್ನಷ್ಟು ಸಂತೋಷಗೊಳ್ಳುತ್ತಾನಂತೆ.    


ಇದನ್ನೂ ಓದಿ :  Year 2021 Horoscope: ಮುಂದಿನ 4 ತಿಂಗಳವರೆಗೆ ಈ ರಾಶಿಯವರ ಜೀವನದಲ್ಲಿ ಖುಷಿಯೋ ಖುಷಿ, ನಿಮ್ಮ ರಾಶಿ ಯಾವುದು ?


ಪಾಯಸ : ಗಣೇಶನಿಗೆ ಪಾಯಸ (payasam for lord ganesha) ಎಂದರೂ ಅತ್ಯಂತ ಪ್ರಿಯವಾದದ್ದು. ಗಣಪತಿ ಆಶೀರ್ವಾದ ಪಡೆಯಬೇಕಾದರೆ, ಭೋಗದಲ್ಲಿ ಖೀರ್ ಅರ್ಪಿಸುವುದು ಅಗತ್ಯವಾಗಿರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.