Ganesh Chaturthi 2021: ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು, ಇಲ್ಲಿದೆ ಕಾರಣ

Ganesh Chaturthi 2021: ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ತುಂಬಾ ಅಶುಭಕರ. ಈ ದಿನ ಚಂದ್ರನನ್ನು ನೋಡುವ ವ್ಯಕ್ತಿಯು ಸುಳ್ಳು ಆರೋಪದಲ್ಲಿ ಸಿಲುಕುತ್ತಾನೆ ಎಂದು ನಂಬಲಾಗಿದೆ. ಈ ದೋಷವನ್ನು ತೆಗೆದುಹಾಕಲು ಪರಿಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು.    

Written by - Yashaswini V | Last Updated : Sep 7, 2021, 10:13 AM IST
  • ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು
  • ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡುವುದರಿಂದ ಸುಳ್ಳು ಆರೋಪ ನಿಮ್ಮ ಮೇಲೆ ಬರಲಿದೆ
  • ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಿದರೆ ದೋಷವನ್ನು ಈ ರೀತಿ ನಿವಾರಿಸಿ
Ganesh Chaturthi 2021: ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು, ಇಲ್ಲಿದೆ ಕಾರಣ title=
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದು ಏಕೆ ಅಶುಭಕರ

ಬೆಂಗಳೂರು: Ganesh Chaturthi 2021- ದೇಶಾದ್ಯಂತ ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 10, 2021ರಂದು ಗಣಪತಿ ಹಬ್ಬವನ್ನು ಆಚರಿಸಲಾಗುವುದು. ಆದರೆ ಗಣೇಶ ಚತುರ್ಥಿಯ ದಿನದಂದು ಮರೆತೂ ಕೂಡ ಚಂದ್ರನನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಧಾರ್ಮಿಕ-ಪುರಾಣಗಳಲ್ಲಿ, ಗಣೇಶ ಚತುರ್ಥಿಯ ದಿನದಂದು ಚಂದ್ರ ದರ್ಶನವನ್ನು ನಿಷೇಧಿಸಲಾಗಿದೆ. ಅಲ್ಲದೆ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದರಿಂದ ವಿನಾಕಾರಣ ಅಪರಾಧ ಹೊರಬೇಕಾಗಬಹುದು ಎಂದೂ ಕೂಡ ಹೇಳಲಾಗುತ್ತದೆ. ಅದಾಗ್ಯೂ, ಅಪ್ಪಿ-ತಪ್ಪಿ ಚಂದ್ರನನ್ನು ನೋಡಿದ್ದೇ ಆದರೆ ಅದರಿಂದ ಉಂಟಾಗುವ ದೋಷವನ್ನು ತಪ್ಪಿಸಲು ಪರಿಹಾರವನ್ನು ಮಾಡಿಕೊಳ್ಳಬೇಕು.

ಗಣೇಶ ಚತುರ್ಥಿಯಂದು ಏಕೆ ಚಂದ್ರನನ್ನು ನೋಡಬಾರದು:
ಗಣೇಶ ಚತುರ್ಥಿಯಂದು (Ganesh Chaturthi) ಚಂದ್ರನನ್ನು ಏಕೆ ನೋಡಬಾರದು ಎಂಬುದರ ಬಗ್ಗೆ ಪುರಾಣಗಳಲ್ಲಿ ಹಲವು ಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ಮಹಾದೇವನ ಕೋಪಕ್ಕೆ ತುತ್ತಾದ ಗಣಪತಿಯ ತಲೆಯನ್ನು ಕತ್ತರಿಸಲಾಯಿತು. ನಂತರ ಚತುರ್ಥಿಯ ದಿನದಂದು ಗಣೇಶನಿಗೆ (Lord Ganesha) ಆನೆಯ ತಲೆಯನ್ನು ಇರಿಸಲಾಯಿತು ಮತ್ತು ಅದರ ನಂತರ ಭೂಮಿಯನ್ನು ಸುತ್ತಿದ ಬಳಿಕ ವಿಘ್ನ ವಿನಾಶಕ ಗಣಪತಿಗೆ ಮೊದಲ ಪೂಜೆ ಮಾಡುವಂತೆ ನಿಶ್ಚಯಿಸಲಾಯಿತು. ನಂತರ ಎಲ್ಲಾ ದೇವ-ದೇವತೆಗಳು ಗಣೇಶನನ್ನು ಪೂಜಿಸಿದರು. ಆದರೆ ಚಂದ್ರದೇವ ಮಾತ್ರ ಹಾಗೆ ಮಾಡಲಿಲ್ಲ.

ಇದನ್ನೂ ಓದಿ- Ganeshotsav 2021: ಗಣೇಶೋತ್ಸವದ ಸಮಯದಲ್ಲಿ ಮರೆತು ಕೂಡ ಈ ಕೆಲಸವನ್ನು ಮಾಡಬೇಡಿ

ಚಂದ್ರನು ತನ್ನ ನೋಟದ (Chandra Darshan) ಬಗ್ಗೆ ಹೆಮ್ಮೆಪಟ್ಟನು. ಮಾತ್ರವಲ್ಲ ಗಜ ಮುಖನನ್ನು ಕಂಡು ಕೇಕೆ ಹಾಕಿ ನಕ್ಕನು. ಇದರಿಂದ ಕೋಪಗೊಂಡ ಗಣಪತಿ ಇಂದಿನಿಂದ ಚಂದ್ರನನ್ನು ಯಾರೂ ನೋಡದಂತಾಗಲಿ ಎಂದು ಶಪಿಸಿದನು. ಇದರಿಂದ ಹೆದರಿದ ಚಂದ್ರ ದೇವನು ಗಣೇಶನನ್ನು ಕ್ಷಮೆ ಕೋರಿದನು. ಬಳಿಕ ಗಣೇಶನು ಚಂದ್ರನ ಮೇಲೆ ಕರುಣೆ ತೋರಿದನು. ಆದರೆ, ತನ್ನ ಶಾಪವನ್ನು ಪೂರ್ತಿಯಾಗಿ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ ಗಣೇಶ, ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನವನ್ನು (Chandra Darshan On Ganesha Chaturthi) ಯಾರೂ ಮಾಡಬಾರದು. ಒಂದೊಮ್ಮೆ ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡುದರೆ ಅಂತಹ ವ್ಯಕ್ತಿಯು ಪಾಪವನ್ನು ಅನುಭವಿಸುತ್ತಾನೆ. ಭವಿಷ್ಯದಲ್ಲಿ ಅವನ ಮೇಲೆ ದೊಡ್ಡ ಆರೋಪ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ- Tuesday Astro Tips: ಜೀವನವು ದುಃಖಗಳಿಂದ ತುಂಬಿದೆಯೇ? ಹನುಮನನ್ನು ಈ ರೀತಿ ಪೂಜಿಸಿ ನಿಮ್ಮ ಸಂಕಷ್ಟ

ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಿದರೆ ದೋಷವನ್ನು ಈ ರೀತಿ ನಿವಾರಿಸಿ:
ಅದಾಗ್ಯೂ, ನೀವು ಆಕಸ್ಮಿಕವಾಗಿ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ, ಅದರ ದೋಷವನ್ನು ನಿವಾರಿಸಲು, ಪೂರ್ಣ ಭಕ್ತಿಯಿಂದ 'ಸಿಂಹಃ ಪ್ರಸೇನ  ಮಮ ಧೇ: ಸಿಂಹೋ ಜಾಂಬವತಾ ಹತಃ'. ಸುಕುಮಾರಕ ಮಾ ರೋದೀ:  ತವ ಹ್ಯೇಷಃ ಶ್ಯಮಂತಕಃ.. ' ಮಂತ್ರವನ್ನು ಜಪಿಸಿ. ಈ ಕಾರಣದಿಂದಾಗಿ, ಚಂದ್ರ ದೋಷದ ಕೆಟ್ಟ ಪರಿಣಾಮವು ವ್ಯಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಮೇಲೆ ಯಾವುದೇ ರೀತಿಯ ಸುಳ್ಳು ಆರೋಪ ಬರುವುದಿಲ್ಲ. ಈ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುವುದರಿಂದ ವ್ಯಕ್ತಿಯು ದೋಷದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News