Baldness Treatment, Health Tips in Kannada: ಸಾಮಾನ್ಯವಾಗಿ ವಯಸ್ಸಾದಂತೆ ಬೋಳು ತಲೆ ಕಾಣಿಸಿಕೊಳ್ಳುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ 20 ರಿಂದ 25 ವರ್ಷ ವಯಸ್ಸಾದಂತೆ ಕೂದಲು ಉದುರುವಿಕೆ ಪ್ರಾರಂಭವಾಗಿ ಬೋಳು ತಲೆ ಸಮಸ್ಯೆ ಕಾಡಲು ಪ್ರಾರಂಭವಾಗುತ್ತದೆ. ಇದರ ಹಿಂದಿನ ಕಾರಣ ತಪ್ಪು ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿಯಾಗಿರಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಬ್ಬದ ದಿನದಂದು ಪ್ರತಿ ಮನೆಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್: ಈ ನಿಯಮ ಪಾಲನೆ ಕಡ್ಡಾಯ


ಕೂದಲು ಉದುರುವುದು ಕೆಲವು ದೀರ್ಘಕಾಲದ ಅನಾರೋಗ್ಯ, ದೈಹಿಕ ಮತ್ತು ಮಾನಸಿಕ ಒತ್ತಡ, ಔಷಧಿಗಳ ಅಡ್ಡಪರಿಣಾಮಗಳು ಅಥವಾ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗಬಹುದು. ಆದ್ದರಿಂದ ಈ ಮನೆಮದ್ದುಗಳನ್ನು ಪ್ರಯೋಗಿಸಿದರೆ, ಶೀಘ್ರವೇ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.


ನೆಲ್ಲಿಕಾಯಿ-ಬೇವು:


ನೆಲ್ಲಿಕಾಯಿ ಮತ್ತು ಬೇವಿನ ಸಹಾಯದಿಂದ ನೀವು ಬೋಳು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇವು ಕೂದಲನ್ನು ಮರಳಿ ತರಲು ಸಹಾಯ ಮಾಡುತ್ತದೆ. ಸ್ವಲ್ಪ ನೆಲ್ಲಿಕಾಯಿಪುಡಿ ಮತ್ತು ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಮತ್ತು ವಾರಕ್ಕೆ ಎರಡು ಬಾರಿ ಈ ನೀರಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಇದು ಕೂದಲು ಉದುರುವುದನ್ನು ತಡೆದು, ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ


ಲೈಕೋರೈಸ್:


ಕೂದಲು ಮತ್ತೆ ಬೆಳೆಯಲು ಹಾಗೂ ಬೋಳುತಲೆ ಸಮಸ್ಯೆಯನ್ನು ತಡೆಯಲು ನೀವು ಲೈಕೋರೈಸ್ ಅನ್ನು ಬಳಸಬಹುದು. ಇದಕ್ಕಾಗಿ, ಸ್ವಲ್ಪ ಲೈಕೋರೈಸ್ ತೆಗೆದುಕೊಂಡು ಅದಕ್ಕೆ ಕೊಂಚ ಹಾಲು, ಒಂದು ಚಿಟಿಕೆ ಕೇಸರಿ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಮತ್ತು ರಾತ್ರಿ ಮಲಗುವ ಮೊದಲು ಈ ಪೇಸ್ಟ್ ಅನ್ನು ನಿಮ್ಮ ತಲೆಗೆ ಹಚ್ಚಿ. ಬಳಿಕ ಬೆಳಗ್ಗೆ ಶಾಂಪೂ ಬಳಸಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಲು ಶುರುವಾಗುತ್ತದೆ.


ಈರುಳ್ಳಿ ರಸ:


ಈರುಳ್ಳಿಯನ್ನು ಸಿಪ್ಪೆ ಸುಲಿದು, ಅದನ್ನು ಮಧ್ಯದಿಂದ ಎರಡು ಭಾಗಗಳಾಗಿ ಕತ್ತರಿಸಿ. ಪ್ರತಿದಿನ ಐದು-ಏಳು ನಿಮಿಷಗಳ ಕಾಲ ಕೂದಲು ಹೆಚ್ಚು ಉದುರುವ ಸ್ಥಳದಲ್ಲಿ ನಿಧಾನವಾಗಿ ಉಜ್ಜಿ ಅಥವಾ ಅದರ ರಸವನ್ನು ಹಚ್ಚಿ. ಇದು ಕೂದಲು ಉದುರುವುದನ್ನು ತಡೆದು, ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ವಿಶ್ವಕಪ್ ಮಧ್ಯೆ ಕ್ಯಾಪ್ಟನ್ಸಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದು ಹೀಗೆ…


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.