Optical illusion: ಒಗಟನ್ನು ಸಾಲ್ವ್‌ ಮಾಡಲು ನಿಮಗೆ ಇಷ್ಟಾನಾ? ಹಾಗಾದರೆ ಈ ಸ್ಟೋರಿ ಓದಿ..ನಿಮಗೆ ಈ ಆಪ್ಟಿಕಲ್‌ ಇಲ್ಯೂಶನ್‌ ಚಿತ್ರವನ್ನು ಸಾಲ್ವ್‌ ಮಾಡುವುದು ಒಳ್ಳೆ ಕಿಕ್‌ ಕೊಡುತ್ತೆ. ನೋಡುವುದಕ್ಕೆ ಈ ಚಿತ್ರ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತದೆ, ಬಹಳ ಸುಲಭವಾಗಿ ಇದನ್ನು ಪರಿಹರಿಸಿ ಬಿಡಬಹುದು ಎಂದು ನೀವು ಭಾವಿಸಬಹುದು, ಆದರೆ ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಹಾಗೂ ಇದು ನಿಮಗೆ ಅಷ್ಟು ಸುಲಭ ಎನಿಸಿದರೆ,  10 ಸೆಕೆಂಡುಗಳಲ್ಲಿ ಈ ಒಗಟನ್ನು ಪರಿಹರಿಸಿ. 


COMMERCIAL BREAK
SCROLL TO CONTINUE READING

ಇದೊಂದು ಕಾರ್ಟೂನ್ ಚಿತ್ರ. ಒಬ್ಬ ವ್ಯಕ್ತಿ ದೊಡ್ಡ ಮನೆಯ ಹಾಲ್‌ನಲ್ಲಿದ್ದಾನೆ. ಆ ಹಾಲ್‌ನಲ್ಲಿ ಅನೇಕ ರೀತಿಯ ವಸ್ತುಗಳಿವೆ. ದುಂಡು ಮೇಜು, ಅದರ ಮೇಲೆ ಒಂದಿಷ್ಟು ವಸ್ತುಗಳು, ಪಕ್ಕದಲ್ಲಿ ದೊಡ್ಡ ಸೋಫಾ, ಪಕ್ಕದಲ್ಲಿ ದೊಡ್ಡ ಕುರ್ಚಿ ಹೀಗೆ ಹಲವು ವಸ್ತುಗಳು ಇರುವುದು ಈ ಚಿತ್ರದಲ್ಲಿ ಕಾಣಬಹುದು. ಆದರೆ ಈ ಕಾರ್ಟೂನ್‌ ಚಿತ್ರದಲ್ಲಿ ಒಬ್ಬ ಮನುಷ್ಯ ನಟಯಿ ಮರಿಯನ್ನು ಹುಡುಕುತ್ತಿರುವುದನ್ನು ಕಾಣಬಹುದು.ಈ ಚಿತ್ರದಲ್ಲಿ ನಾಯಿ ಮರಿ ಎಲ್ಲಿಯೋ ಅವಿತು ಕುಳಿತಿದೆ. ಕೈಯಲ್ಲಿ ಸರಪಳಿ ಹಿಡಿದಿರುವ ಮನುಷ್ಯ ನಾಯಿ ಮರಿಯನ್ನು ಹುಡುಕಾಡುತ್ತಿದ್ದಾನೆ. ಹೀಗೆ ಕಾಣೆಯಾಗಿರುವ, ಈ ಚಿತ್ರದಲ್ಲಿ ಅಡಗಿರುವ ನಾಯಿಮರಿಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ಕೊಡುವುದೇ ನಿಮ್ಮ ಮುಂದಿರುವ ಚಾಲೆಂಜ್‌. 


ಈ ರೀತಿಯ ಆಪ್ಟಿಕಲ್ ಭ್ರಮೆಗಳು ಮಾನವನ ಮೆದುಳನ್ನು ಪರೀಕ್ಷಿಸುತ್ತವೆ. ಇವು ನಮ್ಮ ಕಣ್ಣೆದುರಿನ ವಸ್ತುಗಳನ್ನು ಗುರುತಿಸದಂತೆ ಮಾಡುವ ಭ್ರಮೆಯನ್ನು ನೀಡುತ್ತವೆ. ಹೆಚ್ಚಿನ ಮಾನಸಿಕ ಸಾಮರ್ಥ್ಯಗಳು, ವೀಕ್ಷಣಾ ಕೌಶಲ್ಯ ಮತ್ತು ಗಮನವನ್ನು ಹೊಂದಿರುವವರು ಮಾತ್ರ ಈ ಪ್ರಶ್ನೆಗಳಿಗೆ ಉತ್ತರಿಸಬಹುದು. ಚಿತ್ರದಲ್ಲಿ ನಾಯಿಮರಿಯನ್ನು ಹುಡುಕಲು, ಅದು ಎಲ್ಲಿ ಅಡಗಿಕೊಂಡಿರಬಹುದು ಎಂಬುದನ್ನು ನೋಡಿ. ಅಂತಹ ಪ್ರದೇಶಗಳನ್ನು ಹುಡುಕಿ.


ನಿರ್ದಿಷ್ಟ ಸಮಯದಲ್ಲಿ ನೀವು ಒಗಟು ಪರಿಹರಿಸಿದರೆ, ಅಭಿನಂದನೆಗಳು. ನೀವು ಇನ್ನೂ ನಾಯಿಮರಿಯನ್ನು ನೋಡದಿದ್ದರೆ, ಸಮಯವನ್ನು ಲೆಕ್ಕಿಸದೆ ಮತ್ತೆ ಮತ್ತೆ ನೋಡಿ. ಈ ಚಿತ್ರದಲ್ಲಿ ಅನೇಕ ವಸ್ತುಗಳು ಗೋಚರಿಸುತ್ತವೆ. ಹತ್ತೇ ಸೆಕೆಂಡ್ ಗಳಲ್ಲಿ ನಾಯಿ ಮರಿ ಎಲ್ಲಿ ಅಡಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಅದಕ್ಕಾಗಿಯೇ ನಾವು ನಿಮಗೆ ಸುಳಿವು ನೀಡುತ್ತಿದ್ದೇವೆ. ಅದೇನೆಂದರೆ.. ಚಿತ್ರದಲ್ಲಿ ನಾಯಿ ಮರಿ ಹಳದಿಯಾಗಿದೆ.


ಈ ಸುಳಿವುಗಳೊಂದಿಗೆ ಒಗಟು ಸುಲಭವಾಗಿ ಪರಿಹರಿಸಬಹುದು. ಹಲವಾರು ಪ್ರಯತ್ನಗಳ ನಂತರ ನಾಯಿಮರಿ ಈ ಮನೆಯಲ್ಲಿ ಎಲ್ಲಿ ಅಡಗಿದೆ ಎಂಬುದನ್ನು ನೀವು ಕಂಡುಹಿಡಿಯಲಾಗದಿದ್ದರೆ, ಕೆಳಗಿನ ಪರಿಹಾರ ಚಿತ್ರವನ್ನು ನೋಡಿ.


[[{"fid":"453077","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.