ನವದೆಹಲಿ:  Hasta Rekha Shastra - ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಕಠಿಣ ಪರಿಶ್ರಮ, ಬುದ್ಧಿವಂತಿಕೆಯ ಜೊತೆಗೆ ಅದೃಷ್ಟವೂ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಜ್ಯೋತಿಷ್ಯಶಾಸ್ತ್ರದಂತೆ ಹಸ್ತ ರೇಖೆಗಳು (Hastrekha) ಕೂಡ ಭವಿಷ್ಯ ಹೇಳುತ್ತವೆ. ಜೀವನದಲ್ಲಿ ಹಣ ಎಷ್ಟೊಂದು ಮಹತ್ವದ್ದಾಗಿದೆ ಈ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನಮ್ಮ ಜೀವನದಲ್ಲಿ ಹಣ ಇದೆಯೋ ಇಲ್ಲವೋ ಎಂಬ ಉತ್ಸುಕತೆ ಎಲ್ಲರಿಗೂ ಇದ್ದೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ತಾವು ಎಷ್ಟು ಅದೃಷ್ಟಶಾಲಿಗಳಾಗಿದ್ದೇವೆ ಎಂಬುದನ್ನು ಎಲ್ಲರೂ ತಿಳಿಯಲು ಬಯಸುತ್ತಾರೆ. ಅಂಗೈಯಲ್ಲಿನ ರೇಖೆಗಳನ್ನು ಕಂಡು ಈ ಕುರಿತು ನೀವು ತಿಳಿಯಬಹುದು. ಇದಕ್ಕಾಗಿ ನೀವು ಕೆಲಸ ಮಾಡುವ ಕೈಯಲ್ಲಿರುವ ರೇಖೆಗಳನ್ನು ನೋಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರು ಕೆಲಸಕ್ಕಾಗಿ ತಮ್ಮ ಬಲಗೈಯನ್ನು ಬಳಸುತ್ತಾರೆ. ಆದರೆ ಕೆಲವರು ತಮ್ಮ ಎಡಗೈಯನ್ನೂ ಕೂಡ ಬಳಸುತ್ತಾರೆ.


COMMERCIAL BREAK
SCROLL TO CONTINUE READING

ಅಂಗೈಯ ಈ ಭಾಗದಲ್ಲಿರುತ್ತದೆ ಧನರೇಖೆ
>> ಒಂದು ವೇಳೆ ಕೈಯಲ್ಲಿರುವ ಮಸ್ತಿಷ್ಕ ರೇಖೆ, ಜೀವನ ರೇಖೆ ಹಾಗೂ ಭಾಗ್ಯರೇಖೆಗಳು ಒಂದುಗೂಡಿ 'M' ಆಕೃತಿಯನ್ನು (M Sign In Hand) ನಿರ್ಮಿಸಿದರೆ, ಇಂತಹ ಜನರ ಜೀವನದಲ್ಲಿ ಅಪಾರ ಧನ-ಸಂಪತ್ತು ಇರುತ್ತದೆ. ಆದರೆ, ಅವರ ಆರ್ಥಿಕ ಸ್ಥಿತಿಯಲ್ಲಿ ಈ ದೊಡ್ಡ ಬದಲಾವಣೆ ಮದುವೆಯ ಬಳಿಕ ಅದೂ ಕೂಡ ಕನಿಷ್ಠ ಅಂದರೆ, 30 ವರ್ಷದ ಬಳಿಕ ಬರುತ್ತದೆ.


ಇದನ್ನೂ ಓದಿ- Benefits Of Green Leaves: ಆರೋಗ್ಯಕ್ಕೆ ವರದಾನವಾಗಿದೆ ಮೆಂತ್ಯೆ, ಪಾಲಕ್ ಸೇರಿದಂತೆ ಈ 5 ಸೊಪ್ಪುಗಳು


>> ಕೆಲವು ಜಾತಕದ ಜನರಲ್ಲಿ ಹಣ ಹಲವು ಮೂಲಗಳಿಂದ ಬರುತ್ತದೆ. ಅಂಗೈಯಲ್ಲಿ ಮಸ್ತಿಷ್ಕ ರೇಖೆ, ಜೀವನ ರೇಖೆ ಹಾಗೂ ಹೃದಯ ರೇಖೆ ಒಂದುಗೂಡಿ ತ್ರಿಕೊನಾಕೃತಿ ನಿರ್ಮಾಣಗೊಂಡ ಬಹುತೇಕ ಜನರಲ್ಲಿ ಇದು ಸಾಧ್ಯ.


>> ಯಾರ ಕೈಯಲ್ಲಿ ಗುರು ಪರ್ವತದಿಂದ ತೋರುಬೆರಳಿನ ಕೆಳಗೆ ಒಂದು ಗೆರೆ ಹೊರಬರುತ್ತದೆಯೋ ಮತ್ತು ಹೆಬ್ಬೆರಳಿಗೆ ಹೋಗುತ್ತದೆ (Dhan Rekha), ಅಂತಹ ಜನರು ತುಂಬಾ ಬುದ್ಧಿವಂತರು ಮತ್ತು ತಮ್ಮ ಬುದ್ಧಿಯಿಂದ ಹಣವನ್ನು ಗಳಿಸುತ್ತಾರೆ.


ಇದನ್ನೂ ಓದಿ-Benefits Of Curd: ಈ ಪದಾರ್ಥಗಳೊಂದಿಗೆ ಮೊಸರನ್ನು ಸೇವಿಸಿ, ಹಲವು ರೋಗಗಳಿಂದ ದೂರವಿರಿ


>> ಒಂದು ವೇಳೆ ಯಾವುದೇ ಓರ್ವ ವ್ಯಕ್ತಿಯ ಕೈಯಲ್ಲಿನ ರೇಖೆ ಸೂರ್ಯ ಪರ್ವತದಿಂದ ಹೊರಬಂದು, ಭಾಗ್ಯ ರೇಖೆಯನ್ನು ಸ್ಪರ್ಶಿಸಿದರೆ, ಅಂತಹ ವ್ಯಕ್ತಿಗಳು ಸಿರಿವಂತರಾಗುವುದರ ಜೊತೆಗೆ ಸಮಾಜದಲ್ಲಿ ವರ್ಚಸ್ಸನ್ನು ಹೊಂದಿರುತ್ತಾರೆ.


(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯಾನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Shukra Rashi Parivartan: ಈ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಶುಕ್ರನ ರಾಶಿ ಪರಿವರ್ತನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ