Shukra Rashi Parivartan: ಈ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಶುಕ್ರನ ರಾಶಿ ಪರಿವರ್ತನೆ

ತನ್ನದೇ ರಾಶಿಚಕ್ರವಾದ ತುಲಾ ರಾಶಿಯಲ್ಲಿ ಶುಕ್ರ ಗ್ರಹದ ಪ್ರವೇಶವು 2 ರಾಶಿಗಳಿಗೆ ಬಹಳ ಮಂಗಳಕರವಾಗಿದೆ. ಈ 2 ರಾಶಿಯ ಜನರಿಗೆ, ಈ ಸಮಯವು ದೊಡ್ಡ ಆರ್ಥಿಕ ಲಾಭಗಳನ್ನು ತರುತ್ತದೆ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ತರುತ್ತದೆ ಎಂದು ಹೇಳಲಾಗುತ್ತಿದೆ.  

Written by - Yashaswini V | Last Updated : Aug 30, 2021, 01:45 PM IST
  • ಶುಕ್ರ ಗ್ರಹದ ರಾಶಿ ಬದಲಾವಣೆ
  • ಎರಡು ರಾಶಿಯವರಿಗೆ ಬಹಳ ಶುಭ
  • ಈ ರಾಶಿಯವರಿಗೆ ಆರ್ಥಿಕ ಲಾಭವಾಗುವ ಸಾಧ್ಯತೆ
Shukra Rashi Parivartan: ಈ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಶುಕ್ರನ ರಾಶಿ ಪರಿವರ್ತನೆ  title=
Shukra Rashi Parivartan Effect

ಬೆಂಗಳೂರು: ಶುಕ್ರ ಗ್ರಹವು ಸಂತೋಷ, ಪ್ರೀತಿ, ಮದುವೆ ಮತ್ತು ಸಂತೋಷದ ಗ್ರಹವಾಗಿದೆ. ಕುಂಡಲಿಯಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದರೆ ಅಂತಹ ಜನರು ಜೀವನದಲ್ಲಿ  ಸುಖ-ಶಾಂತಿಯನ್ನು ಹೊಂದಿರುತ್ತಾರೆ. ಅವರು ಐಷಾರಾಮಿ ಜೀವನವನ್ನು ನಡೆಸುವ ಯೋಗವನ್ನೂ ಹೊಂದಿರುತ್ತಾರೆ ಎಂಬ ನಂಬಿಕೆ ಇದೆ. ಸಂಪತ್ತಿನ ಅಧಿಪತಿಯಾದ ಶುಕ್ರನು ಸೆಪ್ಟೆಂಬರ್ 5 ರ ಭಾನುವಾರ ರಾತ್ರಿ 12:00 ಗಂಟೆಗೆ ರಾಶಿ ಚಕ್ರವನ್ನು ಬದಲಾಯಿಸಲಿದ್ದಾನೆ (Shukra Rashi Parivartan). ಶುಕ್ರನು ಕನ್ಯಾ ರಾಶಿಯನ್ನು ಬಿಟ್ಟು ತನ್ನದೇ ರಾಶಿಚಕ್ರವಾದ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ತುಲಾ ರಾಶಿಯ ಅಧಿಪತಿ ಆಗಿದ್ದಾನೆ. ಇದರ ಹೊರತಾಗಿ, ವೃಷಭ ರಾಶಿಗೂ ಶುಕ್ರನೇ ಅಧಿಪತಿ. ಅಕ್ಟೋಬರ್ 1 ರವರೆಗೆ ಶುಕ್ರನು ತುಲಾ ರಾಶಿಯಲ್ಲಿ ನೆಲೆಸಲಿದ್ದಾನೆ. ಈ ಸಮಯದಲ್ಲಿ ಈ ಎರಡೂ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತಿದೆ.

ಶುಕ್ರನ ರಾಶಿ ಪರಿವರ್ತನೆ: ಈ 2 ರಾಶಿಯವರಿಗೆ ಸಂಪತ್ತು ಪ್ರಾಪ್ತಿ:
ವೃಷಭ ರಾಶಿ :
ಶುಕ್ರನ ರಾಶಿ ಪರಿವರ್ತನೆ (Shukra Rashi Parivartan) ಯು ವೃಷಭ ರಾಶಿಯ ಜನರಿಗೆ ಬಹಳ ಮಂಗಳಕರವಾಗಿದೆ. ಈ ಜನರು ಕೆಲಸದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ನೀವು ಬಯಸಿದ ಕೆಲಸವನ್ನು ಪಡೆಯುವ ಯೋಗವಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಇದಲ್ಲದೆ ಉತ್ತಮ ಆದಾಯದ ಮೂಲಗಳನ್ನೂ ಪಡೆಯುತ್ತೀರಿ.  ಒಟ್ಟಾರೆಯಾಗಿ, ಈ ಸಮಯವು ನಿಮಗೆ ವೃತ್ತಿ ಮತ್ತು ಹಣದ ವಿಷಯದಲ್ಲಿ ಅತ್ಯುತ್ತಮವಾಗಿರುತ್ತದೆ. 

ಇದನ್ನೂ ಓದಿ- Guru Rashi Parivartan: 15 ದಿನಗಳಲ್ಲಿ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ

ತುಲಾ ರಾಶಿ: ಈ ರಾಶಿಚಕ್ರದ ಜನರಿಗೆ, ಶುಕ್ರ ತನ್ನದೇ ರಾಶಿ (Venus Transit) ತುಲಾ ರಾಶಿಯಲ್ಲಿ ಬರುವುದು ಆರ್ಥಿಕವಾಗಿ ಅದೃಷ್ಟದ ಸಮಯ ಎಂದು ಸಾಬೀತಾಗುತ್ತದೆ. ಈ ಜನರ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ, ಅದು ದೀರ್ಘಕಾಲ ಉಳಿಯುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ- Sri Krishnajanmashtami: ಶ್ರೀಕೃಷ್ಣನನ್ನು ಸಂತೋಷಪಡಿಸಲು ಜನ್ಮಾಷ್ಟಮಿಯಂದು ಈ ಕೆಲಸ ಮಾಡಿ

ಇವು ಶುಕ್ರ ಗ್ರಹ ದುರ್ಬಲಗೊಳ್ಳುವ ಲಕ್ಷಣಗಳಾಗಿವೆ:
ತಮ್ಮ ಜಾತಕದಲ್ಲಿ ಶುಕ್ರ ಗ್ರಹವನ್ನು ದುರ್ಬಲವಾಗಿರುವ ಜನರು, ಅವರ ಜೀವನದಲ್ಲಿ ಭೌತಿಕ ಸಂತೋಷಗಳ ಕೊರತೆಯನ್ನು ಎದುರಿಸುತ್ತಾರೆ. ಅಂತಹ ಪುರುಷರು ಪ್ರಣಯದಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಶುಕ್ರನ ಕೆಟ್ಟ ಸ್ಥಾನವು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ತರುತ್ತದೆ ಎಂದೂ ಕೂಡ ಹೇಳಲಾಗುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News