ದೆಹಲಿ: Money Line In Hand - ಹಸ್ತಸಾಮುದ್ರಿಕ (Palmistry) ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನಾಗುತ್ತಾನೆ ಮತ್ತು ಅವನ ಆರ್ಥಿಕ ಸ್ಥಿತಿ ಹೇಗಿರುತ್ತದೆ ಎಂಬುದರ ಕುರಿತು ಆತನ ಅಂಗೈಯಲ್ಲಿರುವ ರೇಖೆಗಳಿಂದಲೇ ತಿಳಿದುಕೊಳ್ಳಬಹುದು. ಇದರೊಂದಿಗೆ, ವ್ಯಕ್ತಿಯ ವರ್ತಮಾನ, ಭೂತ ಮತ್ತು ಭವಿಷ್ಯದ ಬಗೆಗಿನ ಮಾಹಿತಿಯನ್ನು ಕೂಡ ಹಸ್ತದ ರೇಖೆಗಳಿಂದ ಪಡೆದುಕೊಳ್ಳಬಹುದು. ಹಸ್ತ ರೇಖೆಗಳು ಶಿಕ್ಷಣ (Job Success) ಮತ್ತು ಆರೋಗ್ಯದ ಬಗ್ಗೆಯೂ ಮಾಹಿತಿಯನ್ನು ನೀಡುತ್ತವೆ. ಹಸ್ತದ ಅದೃಷ್ಟದ ರೇಖೆಯು ಧನ-ವೈಭವ, ಸುಖ, ಸಂಪತ್ತು ಹಾಗೂ ಉನ್ನತ ಸ್ಥಾನಮಾನದ ಕುರಿತು ಸಂಕೇತಗಳನ್ನು ನೀಡುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ,

COMMERCIAL BREAK
SCROLL TO CONTINUE READING

ಅದೃಷ್ಟ ರೇಖೆಯನ್ನು ಹೀಗೆ ಗುರುತಿಸಿ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರೇಖೆಯು ಅಂಗೈಯ ಮೂಲ (ಮಣಕಟ್ಟಿನಿಂದ) ಭಾಗದಿಂದ  ಪ್ರಾರಂಭವಾಗಿ, ಮಧ್ಯದ ಬೆರಳಿಗೆ ನೇರವಾಗಿ ಹೋದಾಗ ಅದನ್ನು ಭಾಗ್ಯ ರೇಖೆ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಅಂಗೈಯಲ್ಲಿ ಅದೃಷ್ಟದ ರೇಖೆಯು ವಿಭಿನ್ನವಾಗಿರುತ್ತದೆ. ಕೆಲವರ ಅಂಗೈಯಲ್ಲಿ ಈ ಅದೃಷ್ಟ ರೇಖೆ ನೇರವಾಗಿದ್ದರೆ, ಇನ್ನೂ ಕೆಲವರ ಕೈಯಲ್ಲಿ ಇದು ಮಧ್ಯದಲ್ಲಿಯೇ ಮುರಿದಿರುತ್ತದೆ.ಈ ಎಲ್ಲಾ ರೀತಿಯ ಭಾಗ್ಯ ರೇಖೆಗಳನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತದೆ.

ಇಂತಹ ಜನರು ಅಪಾರ ಸಂಪತ್ತಿನ ಒಡೆಯರಾಗಿರುತ್ತಾರೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾರ ಅಂಗೈಯಲ್ಲಿ ಅದೃಷ್ಟ ರೇಖೆಯು ನೇರವಾಗಿ ಶನಿ ಪರ್ವತಕ್ಕೆ ಹೋಗುತ್ತದೆ, ಅವರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಇದೇ ವೇಳೆ ಇಂತಹ  ವ್ಯಕ್ತಿಯು ತುಂಬಾ ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ. ಅವರ ಕಣ್ಣು ಸದಾ ಅವರ ಗುರಿಯ ಮೇಲಿರುತ್ತದೆ. ಇದಲ್ಲದೇ ಇಂತಹ ವ್ಯಕ್ತಿ ಅಪಾರ ಸಂಪತ್ತಿನ ಒಡೆಯರಾಗಿರುತ್ತಾರೆ. ಈ ಜನರು ತಮ್ಮ ಕೆಲಸದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸುತ್ತಾರೆ ಮತ್ತು ಅಪಾರ ಘನತೆ-ಗೌರವವನ್ನು ಪಡೆದುಕೊಳ್ಳುತ್ತಾರೆ.


ಇದನ್ನೂ ಓದಿ-ಈ ಗುಣಗಳಿದ್ದರೆ ಯಾರ ಪ್ರೀತಿಗೂ ಅರ್ಹರಾಗುವುದಿಲ್ಲ, ಪ್ರತಿ ಹಂತದಲ್ಲೂ ದ್ವೇಷವನ್ನೇ ಎದುರಿಸಬೇಕಾಗುತ್ತದೆ

ಮಧ್ಯದಲ್ಲಿಯೇ ಮುರಿದ ಭಾಗ್ಯ ರೇಖೆ ಕಷ್ಟಗಳನ್ನು ತರುತ್ತದೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಶನಿಯ ಪರ್ವತವನ್ನು ತಲುಪಿದ ನಂತರ ಯಾವುದೇ ಒಂದು ರೇಖೆಯು ವಿಭಜನೆಯಾಗಿ,  ಗುರುವಿನ ಪರ್ವತವನ್ನು (ತೋರುಬೆರಳಿನ ಕೆಳಗೆ) ತಲುಪಿದರೆ, ವ್ಯಕ್ತಿಯು ಪರೋಪಕಾರಿ ಮತ್ತು ದಾನವಂತನಾಗುತ್ತಾನೆ. ಇನ್ನೊಂದೆಡೆ ಅಂಗೈನ ಯಾವ ಭಾಗದಲ್ಲಿ ಅದೃಷ್ಟ ರೇಖೆ ಮುರಿದಿರುತ್ತದೆಯೋ, ವ್ಯಕ್ತಿಯ ಜೀವನದ ಅದೇ ಹಂತದಲ್ಲಿ ಆತನಿಗೆ ಕಷ್ಟಗಳು ಎದುರಾಗುತ್ತವೆ.


ಇದನ್ನೂ ಓದಿ-ಬಿಳಿ ಕೂದಲು ಕಂಡ ಕೂಡಲೇ ಕೀಳುವ ಬದಲು ಈ ಟ್ರಿಕ್ ಬಳಸಿ, ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದು

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-ಬೇಸಿಗೆಯಲ್ಲಿ ಈರುಳ್ಳಿ ತಿಂದರೆ ಹೀಟ್ ಸ್ಟ್ರೋಕ್ ಸೇರಿ ಈ ಸಮಸ್ಯೆಗಳಿಂದ ಸಿಗುತ್ತದೆ ಪರಿಹಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.