ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಭವಿಷ್ಯದ (Future)  ಚಿಂತೆ ಕಾಡದೇ ಇರದು. ಪ್ರತಿಯೊಬ್ಬರೂ ತಮ್ಮ  ಭವಿಷ್ಯದ ವೃತ್ತಿ, ಮದುವೆ, ಆರ್ಥಿಕ ಸ್ಥಿತಿಗತಿಗಳ (Financial Condition) ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಜೀವನದಲ್ಲಿ ಹಣ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹಣದ ಕೊರತೆ ಎದುರಾದರೆ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಹೀಗಿರುವಾಗ, ವ್ಯಕ್ತಿಯ ಆರ್ಥಿಕ ಸ್ಥಿತಿಯ ಬಗ್ಗೆ ಅವನು ತಿಳಿದುಕೊಳ್ಳಲು ಬಯಸುತ್ತಾನೆ. ಹಸ್ತರೇಖೆಗಳಿಂದ  (Palmistry) ಈ ಮಾಹಿತಿಯನ್ನು ಪಡೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಈ ರೇಖೆಗಳು ಆರ್ಥಿಕ ಬಿಕ್ಕಟ್ಟನ್ನು ಸೂಚಿಸುತ್ತವೆ : 
ಯಾರ ಹಸ್ತದಲ್ಲಿ ಮಸ್ತಿಷ್ಕ ರೇಖೆ ಅರ್ಧಕ್ಕೆ ತುಂಡಾದ ಸ್ಥಿತಿಯಲ್ಲಿರುತ್ತದೆಯೋ, ಅಥವಾ ಜೇಡೆ ಬಲೆಯಂತೆ ಕಾಣಿಸುತ್ತದೆಯೋ ಅವರಿಗೆ ಜೀವನದಲ್ಲಿ ಆರ್ಥಿಕ ತೊಂದರೆ (Financial problem) ಎದುರಾಗುತ್ತದೆ. ಇವರ ಕೈಗೆ ಎಷ್ಟೇ ಹಣ ಬಂದರೂ ಅದು ಉಳಿಯುವುದೇ ಇಲ್ಲವಂತೆ. 


ಇದನ್ನೂ ಓದಿ : ಸುಖ, ಶಾಂತಿಗಾಗಿ ಮನೆಯಲ್ಲಿರಬೇಕು ಬುದ್ದನ ಮೂರ್ತಿ..ಆದರೆ ಎಲ್ಲಿ ಇಡಬೇಕು.?


ಉಂಗುರದ ಬೆರಳಿನಲ್ಲಿ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆಯಿದ್ದರೆ ಅದು ಕೂಡಾ ಹಣಕಾಸಿನ ಸಮಸ್ಯೆಯನ್ನು ತೋರಿಸುತ್ತದೆ. ಇವರಿಗೆ ಕೂಡಾ ಎಷ್ಟೇ ಹಣ ಸಿಕ್ಕಿದರೂ ಅದು ಖರ್ಚಾಗಿಯೇ ಹೋಗುತ್ತದೆ. ಹಣ ಕೂಡಿಡುವ (Money saving) ಬಗ್ಗೆ ಎಷ್ಟೇ ಯೋಚಿಸಿದರೂ ಸಾಧ್ಯವಾಗುವುದೇ ಇಲ್ಲವಂತೆ. ಸದಾ ಹಣದ ಕೊರತೆ ಎದುರಾಗುತ್ತದೆಯಂತೆ. 


ಜೀವನ ರೇಖೆಯ ಮೇಲೆ ಮಚ್ಚೆ ಇರುವುದು ಕೂಡಾ ಅಶುಭ ಸಂಕೇತವಂತೆ. ಇವರ ಜೀವನದಲ್ಲಿಯೂ  ಆರ್ಥಿಕ ಸ್ಥಿರತೆ ಎನ್ನುವುದು ಇರುವುದಿಲ್ಲವಂತೆ. ಹಣ ಬರುವುದು ಖರ್ಚಾಗುವುದು ನಡೆಯುತ್ತಲೇ ಇರುತ್ತದೆಯಂತೆ. 


ಇದನ್ನೂ ಓದಿ : Tulsi Plant: ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ 


ಯಾರ ಹಸ್ತದ ಸೂರ್ಯನ ರೇಖೆಯಲ್ಲಿ (Palmistry) ಮಚ್ಚೆ ಇರುತ್ತದೆಯೋ, ಅವರಿಗೆ ಹಣದ ಬಿಕ್ಕಟ್ಟು ಎದುರಾಗುತ್ತಲೇ ಇರುತ್ತದೆಯಂತೆ. ಈ ಜನರು ಹೆಚ್ಚಾಗಿ ಸಾಲದ ಸುಳಿಯಲ್ಲೇ ಸಿಲುಕಿರುತ್ತಾರಂತೆ. ಈ ಕಾರಣದಿಂದಾಗಿ ಮಾನಸಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.


ಮಣಿಗಂಟಿನಿಂದ ಆರಂಭವಾದ ರೇಖೆ ಮಧ್ಯ ಬೆರಳಿನವರೆಗೆ ಹೋದರೆ, ಅವರ ಜೀವನದಲ್ಲೂ ಆರ್ಥಿಕ ಸಮಸ್ಯೆಗಳು (Financial problem) ಎದುರಾಗುತ್ತದೆಯಂತೆ. ಇವರ ಜೀವನದಲ್ಲಿ ಹಣಕಾಸಿನ ಕೊರತೆ ಕಾಡುತ್ತಲೇ ಇರುತ್ತದೆಯಂತೆ. 


ಇದನ್ನೂ ಓದಿ : Vastu Shastra: ನಿತ್ಯ ಪೂಜೆ ಮತ್ತು ಇತರೆಡೆ ಬಳಕೆಯಾಗುವ ಈ ವಸ್ತುಗಳನ್ನು ನೇರವಾಗಿ ನೆಲದ ಮೇಲಿರಿಸಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.