Hasta Samudrika Shastra: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ರೇಖೆಗಳು ಮತ್ತು ಚಿಹ್ನೆಗಳ ಸ್ಥಾನಗಳಿಂದ ವ್ಯಕ್ತಿಯ ಸ್ವಭಾವ, ನಡವಳಿಕೆ ಮತ್ತು ಭವಿಷ್ಯ ಇತ್ಯಾದಿಗಳನ್ನು ಲೆಕ್ಕಹಾಕಲಾಗುತ್ತದೆ. ಒಬ್ಬ ವ್ಯಕ್ತಿಯು ಯಾವ ರೀತಿಯ ಜೀವನವನ್ನು ನಡೆಸುತ್ತಾನೆ ಎಂಬುದನ್ನು ಕೈಗಳಲ್ಲಿರುವ ಈ ರೇಖೆಗಳ ಮೂಲಕ ತಿಳಿಯಬಹುದು. ಉದಾಹರಣೆಗೆ, ಆ ವ್ಯಕ್ತಿಯ ಆರ್ಥಿಕ ಸ್ಥಿತಿ, ವೃತ್ತಿ ಜೀವನ, ವೈವಾಹಿಕ ಜೀವನ, ಖ್ಯಾತಿ, ಕುಟುಂಬ, ಆರೋಗ್ಯ ಇತ್ಯಾದಿಗಳನ್ನು ಲೆಕ್ಕಹಾಕಬಹುದು. ಆತನ ಶ್ರಮಕ್ಕೆ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನೂ ಕೂಡ ಲೆಕ್ಕಹಾಕಬಹುದು.


COMMERCIAL BREAK
SCROLL TO CONTINUE READING

ಈ ರೀಖೆಗಳ ವಿಶೇಷ ಸ್ಥಿತಿ ಭಾಗ್ಯವನ್ನು ಬೆಳಗುತ್ತದೆ
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲ ರೇಖೆಗಳನ್ನು ತುಂಬಾ  ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ರೇಖೆಗಳಲ್ಲಿ - ಹೃದಯ ರೇಖೆ, ಜೀವನ ರೇಖೆ, ಮದುವೆ ರೇಖೆ ಮತ್ತು ಅದೃಷ್ಟ ರೇಖೆ ಇತ್ಯಾದಿಗಳು ಶಾಮೀಲಾಗಿವೆ. ಈ ರೇಖೆಗಳ ಸ್ಥಾನದಿಂದ ಅವು ಶುಭ ಫಲ ನೀಡುತ್ತವೆಯೋ ಅಥವಾ ಅಶುಭ ನೀಡುತ್ತವೆಯೋ ಎಂಬುದು ತಿಳಿಯುತ್ತದೆ. ಆದರೆ, ಪ್ರತಿಯೊಬ್ಬರ ಕೈಯಲ್ಲಿ ಈ ಎಲ್ಲಾ ರೇಖೆಗಳು ಇರುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಒಬ್ಬರ ಕೈಯಲ್ಲಿ ಈ ರೇಖೆಗಳು ಇರುವುದು ಮತ್ತು ಅದೂ ಕೂಡ ಶುಭ ಸ್ಥಾನದಲ್ಲಿರುವುದು ಅತ್ಯಂತ ವಿರಳ. ಇಂದು ನಾವು ಕೆಲವೇ ಜನರ ಕೈಯಲ್ಲಿ ಇರುವ ಅದೃಷ್ಟದ ರೇಖೆಯ ಬಗ್ಗೆ ತಿಳಿದುಕೊಳ್ಳೋಣ. ಇದು ಯಾವುದೇ ವ್ಯಕ್ತಿಯ ಕೈಯಲ್ಲಿದ್ದು ಮತ್ತು ಅದೂ ಕೂಡ ಶುಭ ಸ್ಥಾನದಲ್ಲಿದ್ದರೆ, ಅವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸೌಕರ್ಯಗಳು ಲಭಿಸುತ್ತವೆ. 


ಇಂತಹ ಭಾಗ್ಯರೇಖೆ ವ್ಯಕ್ತಿಯ ಭಾಗ್ಯವನ್ನು ಬೆಳಗುತ್ತದೆ
ಅಂಗೈಯ ಕೆಳಗಿನ ಭಾಗದಿಂದ ಆರಂಭಗೊಂಡು ಮಧ್ಯದ ಬೆರಳಿನ ಕೆಳಗೆ ಇರುವ ಶನಿಯ ಪರ್ವತಕ್ಕೆ ತಲುಪುವ ರೇಖೆಯನ್ನು ಭಾಗ್ಯ ರೇಖೆ ಎನ್ನುತ್ತಾರೆ. ಈ ರೇಖೆಯು ಒಂದು ವೇಳೆ ಕಂಕಣದಿಂದ ಪ್ರಾರಂಭವಾಗಿ ನೇರವಾಗಿ ಶನಿ ಪರ್ವತಕ್ಕೆ ಹೋದರೆ ಅಥವಾ ಮಧ್ಯದ ಬೆರಳಿನ ಮೂಲವನ್ನು ಸ್ಪರ್ಶಿಸಿದರೆ, ಅಂತಹ ರೇಖೆಯನ್ನು ತುಂಬಾ ಅದೃಷ್ಟಕರ ಎಂದು ಪರಿಗಣಿಸಲಾಗುತ್ತದೆ. ಈ ರೇಖೆಯು ಮಧ್ಯದಲ್ಲಿ ಎಲ್ಲಿಯೂ ಕೂಡ ಕಡಿತಗೊಳ್ಳದೆ ಗಾಧವಾಗಿದ್ದರೆ, ವ್ಯಕ್ತಿ ತನ್ನ ಜೀವನದಲ್ಲಿ ಕೇವಲ ಅಪಾರ ಸಂಪತ್ತನ್ನು ಅಷ್ಟೇ ಅಲ್ಲ ಉನ್ನತ ಸ್ಥಾನಮಾನ ಮತ್ತು ಅಪಾರ ಗೌರವವನ್ನು ಪಡೆಯುತ್ತಾನೆ. ಇಂತಹ ವ್ಯಕ್ತಿ ಎಲ್ಲಿ ಹೋದರು ಕೂಡ ಅಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನ ಪಡೆದುಕೊಳ್ಳುತ್ತಾರೆ.


ಇದನ್ನೂ ಓದಿ-ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಬೇಕೆ? ಹಾಗಾದ್ರೆ ಐದು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಿ


ಅದೃಷ್ಟ ರೇಖೆಯು ಒಂದು ವೇಳೆ ಅಂಗಯಲ್ಲಿರುವ ಚಂದ್ರನಿಂದ ಆರಂಭಗೊಂದು ಶನಿಯ ಪರ್ವತಕ್ಕೆ ಹೋದರೆ, ವ್ಯಕ್ತಿಯು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಇಂತಹ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಗೌರವವನ್ನು ನೀಡುತ್ತಾರೆ. ಇದೇ ಕಾರಣದಿಂದ ಈ ಸಾಕಷ್ಟು ಜನಪ್ರಿಯತೆಯನ್ನು ಕೂಡ ಪಡೆಯುತ್ತಾರೆ.


ಇದನ್ನೂ ಓದಿ-ಈ 5 ರಾಶಿಗಳಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ..! ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಹೆಚ್ಚಲಿದೆ ವೇತನ


ಒಂದು ವೇಳೆ, ಅದೃಷ್ಟ ರೇಖೆಯು ಅಂಗೈಯಲ್ಲಿರುವ ಜೀವನದ ರೇಖೆಯಿಂದ ಪ್ರಾರಂಭವಾಗಿ ಶನಿ ಪರ್ವತವನ್ನು ತಲುಪಿದರೆ, ಅಂತಹ ವ್ಯಕ್ತಿಗೆ ಜೀವನದಲ್ಲಿ ಎಂದಿಗೂ ಹಣದ ಎದುರಾಗುವುದಿಲ್ಲ. ಈ ಜನರು ಯಾವಾಗಲೂ ಸಾಕಷ್ಟು ಹಣವನ್ನು ಹೊಂದಿರುತ್ತಾರೆ ಮತ್ತು ಅವರು ಅತ್ಯಂತ ಸಮೃದ್ಧ ಜೀವನವನ್ನು ನಡೆಸುತ್ತಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.