ಈ 5 ರಾಶಿಗಳಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ..! ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಹೆಚ್ಚಲಿದೆ ವೇತನ

ಕಳೆದ 23 ದಿನಗಳಿಂದ, ಬುಧ ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದ. ನಾಳೆಯಿಂದ ಅಂದರೆ ಜೂನ್ 3 ರಿಂದ ಬುಧನ ನಡೆ ಮತ್ತೆ ಬದಲಾಗಲಿದೆ.  

Written by - Ranjitha R K | Last Updated : May 31, 2022, 09:17 AM IST
  • ವೃಷಭ ರಾಶಿಯಲ್ಲಿ ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ಶುಭ
  • ಉದ್ಯೋಗದಲ್ಲಿ ಸಿಗಲಿದೆ ಬಡ್ತಿ
  • ಆರ್ಥಿಕವಾಗಿ ಆಗಲಿದೆ ಭಾರೀ ಲಾಭ
 ಈ 5 ರಾಶಿಗಳಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ..!  ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಹೆಚ್ಚಲಿದೆ ವೇತನ  title=
Budh Margi 2022 (file photo)

ಬೆಂಗಳೂರು : ಬುಧದ ಚಲನೆಯಲ್ಲಿನ ಬದಲಾವಣೆಯು ಹಣ, ಸಂವಹನ, ವ್ಯವಹಾರದಂತಹ ಪ್ರಮುಖ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಕಳೆದ 23 ದಿನಗಳಿಂದ, ಬುಧ ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದ. ನಾಳೆಯಿಂದ ಅಂದರೆ ಜೂನ್ 3 ರಿಂದ ಬುಧನ ನಡೆ ಮತ್ತೆ ಬದಲಾಗಲಿದೆ.  ವೃಷಭ ರಾಶಿಯಲ್ಲಿ ಬುಧದ ನೇರ ಚಲನೆ ನಾಳೆಯಿಂದ ಆರಂಭವಾಗಲಿದೆ. ಇದು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ವೃತ್ತಿಜೀವನದಲ್ಲಿ ಬಹು ದೊಡ್ಡ ಯಶಸ್ಸು ಸಿಗಲಿದೆ. ಅಲ್ಲದೆ, ಆರ್ಥಿಕ ಸ್ಥಿತಿಯಲ್ಲಿಯೂ ಉತ್ತಮ ಬದಲಾವಣೆಯಾಗಲಿದೆ. 

ವೃಷಭ ರಾಶಿಯಲ್ಲಿ ಬುಧ ಸಂಕ್ರಮಣದಿಂದ  ಈ ರಾಶಿಯವರಿಗೆ ಶುಭ :
ಮೇಷ ರಾಶಿ : ಮೇಷ ರಾಶಿಯವರಿಗೆ ಬುಧ ಗ್ರಹದ ನೇರ ಚಲನೆ ಬಹಳಷ್ಟು ಲಾಭವನ್ನು ತಂದೊಡ್ಡಲಿದೆ. ಈ ಬದಲಾವಣೆ ಅವರ ಜೀವನದಲ್ಲಿ ಸುವರ್ಣ ದಿನಗಳನ್ನು ತೆರೆಯುತ್ತದೆ. ಜೀವನದಲ್ಲಿ ದೊಡ್ಡ ಮಟ್ಟಿನ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ : Vastu Tips: ಊಟ ಮಾಡುವಾಗ ನೀವು ಈ ತಪ್ಪುಗಳನ್ನು ಮಾಡುತ್ತಿದ್ದರೆ, ಇಂದೇ ನಿಲ್ಲಿಸಿ! ಕಾರಣ ಇಲ್ಲಿದೆ

ವೃಷಭ ರಾಶಿ : ಬುಧನು ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ಈ ರಾಶಿಯವರಿಗೆ ಶುಭ ಫಲ ನೀಡುತ್ತಾನೆ. ಕೆಲಸದಲ್ಲಿ ಒಂದರ ನಂತರ ಒಂದರಂತೆ ತ್ವರಿತ ಯಶಸ್ಸು ಸಿಗುತ್ತದೆ. ಉತ್ತಮ ವೇತನದ ಕೆಲಸ ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವವರಿಗೆ ಯಶಸ್ಸು ಸಿಗಲಿದೆ. ಲವ್ ಮ್ಯಾರೇಜ್ ಮಾಡಲು ಬಯಸುವವರಿಗೆ ಈ ಸಮಯ ತುಂಬಾ ಒಳ್ಳೆಯದು.  

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಬುಧನು ಅದೃಷ್ಟವನ್ನು ತರುತ್ತಾನೆ. ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಬಡ್ತಿ- ವೇತನದಲ್ಲಿ ಹೆಚ್ಚಳ ಅಥವಾ ಹೊಸ ಉದ್ಯೋಗ ಸಿಗಬಹುದು. ಜನರು ನಿಮ್ಮ ಕೆಲಸವನ್ನು ಇಷ್ಟಪಡುತ್ತಾರೆ. ಕುಟುಂಬದಲ್ಲಿಯೂ ಸಂತೋಷ ಇರುತ್ತದೆ. 

ಇದನ್ನೂ ಓದಿ : Lucky by Name Astrology : ಈ ಅಕ್ಷರದಿಂದ ಹೆಸರು ಆರಂಭವಾಗುವವರು ರಾಜನಂತೆ ಬದುಕುತ್ತಾರೆ.! ನಿಮ್ಮ ಹೆಸರೂ ಇದರಲ್ಲಿದೆಯಾ?

ತುಲಾ ರಾಶಿ: ತುಲಾ ರಾಶಿಯವರಿಗೆ ಬುಧನು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆ ಇರುವವರಿಗೆ ಬಡ್ತಿ ಸಿಗಲಿದೆ. ಉದ್ಯೋಗ ಬದಲಾಯಿಸಲು ಬಯಸುವ ಜನರ ಆಸೆಯೂ ಈ ತಿಂಗಳು ಈಡೇರಲಿದೆ. ಹೂಡಿಕೆದಾರರಿಗೆ ಲಾಭವಾಗಲಿದೆ. ಆದಾಯ ಹೆಚ್ಚಲಿದೆ. 

ವೃಶ್ಚಿಕ ರಾಶಿ: ಬುಧ ಸಂಕ್ರಮಣ ವೃಶ್ಚಿಕ ರಾಶಿಯವರಿಗೆ ಅದೃಷ್ಟ ನೀಡಲಿದ್ದಾನೆ. ವೃತ್ತಿಯಲ್ಲಿ ಶುಭ ಫಲಿತಾಂಶ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಆದಾಯ ಹೆಚ್ಚಲಿದೆ. ವಿಶೇಷವಾಗಿ ಈ ರಾಶಿಯ ಉದ್ಯಮಿಗಳಿಗೆ ಈ ಸಮಯವು ಉತ್ತಮವಾಗಿರುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News