Government Job Yog - ಸರ್ಕಾರಿ ನೌಕರಿ ಸಿಗುವುದು ಸುಲಭದ ಮಾತಲ್ಲ. ಆದರೆ, ಸರ್ಕಾರಿ ನೌಕರಿಯನ್ನೇ ಮಾಡಬೇಕು ಎಂಬ ದೃಢ ನಿಶ್ಚಯ ಹೊಂದಿದವರು ಹಲವಾರು ವರ್ಷಗಳವರೆಗೆ ಕಷ್ಟಪಡುತ್ತಲೇ ಇರುತ್ತಾರೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈಯಲ್ಲಿರುವ ರೇಖೆಗಳು, ಚಿಹ್ನೆಗಳು ಹಾಗೂ ಪರ್ವತಗಳ ಆಧಾರದ ಸರ್ಕಾರಿ ನೌಕರಿಯ ಭಾಗ್ಯ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಬಹುದು. 

COMMERCIAL BREAK
SCROLL TO CONTINUE READING

ಹಸ್ತರೇಖೆಗಳಿಂದ ಭಾಗ್ಯದಲ್ಲಿ ಸರ್ಕಾರಿ ನೌಕರಿ ಇದೆಯೋ/ಇಲ್ಲವೋ ತಿಳಿದುಕೊಳ್ಳಿ
ಭಾಗ್ಯದಲ್ಲಿ ಗವರ್ನಮೆಂಟ್ ಜಾಬ್ ಇದೆಯೋ/ಇಲ್ಲವೋ ಎಂಬುದನ್ನು ಅಂಗಯಲ್ಲಿರುವ ರೇಖೆಗಳಿಂದ ತಿಳಿದುಕೊಳ್ಳಬಹುದು. ಯಾರ ಭಾಗ್ಯದಲ್ಲಿ ಸರ್ಕಾರಿ ನೌಕರಿ ಇರುತ್ತದೆಯೋ ಅವರ ಕೈಯಲ್ಲಿ ಕೆಲ ವಿಶೇಷ ಚಿಹ್ನೆಗಳಿರುತ್ತವೆ. ಅಷ್ಟೇ ಅಲ್ಲ ಅವರ ಕೈಯಲ್ಲಿನ ಸೂರ್ಯ ತುಂಬಾ ಬಲಿಷ್ಠನಾಗಿರುತ್ತಾನೆ. ಅಂಗೈಯಲ್ಲಿನ ಸೂರ್ಯಬಲ ವ್ಯಕ್ತಿಗೆ ಸರ್ಕಾರಿ ನೌಕರಿಯ ಸುಖ ನೀಡುವುದರ ಜೊತೆಗೆ ಉನ್ನತ ಹುದ್ದೆಯನ್ನು ಕೂಡ ದಯಪಾಲಿಸುತ್ತಾನೆ. 

>> ಯಾರ ಅಂಗೈಯಲ್ಲಿ ಎರಡು ಸೂರ್ಯರೇಖೆಗಳಿರುತ್ತವೆ ಮತ್ತು ಗುರು ಪರ್ವತದ ಮೇಲೆ ಕ್ರಾಸ್ ಚಿಹ್ನೆ ಇದ್ದರೆ, ಇಂದ್ತಹ ಜನರಿಗೆ ಸರ್ಕಾರಿ ನೌಕರಿ ಸಿಗುವ ಯೋಗ ಹೆಚ್ಚಾಗಿರುತ್ತದೆ ಮತ್ತು ಬಹುಬೇಗನೆ ಅವರಿಗೆ ಸರ್ಕಾರಿ ನೌಕರಿ ಪ್ರಾಪ್ತಿಯಾಗುತ್ತದೆ. 

>> ಇನ್ನೊಂದೆಡೆ, ಅಂಗೈಯಲ್ಲಿನ ಗುರುಪರ್ವತದ ಬಳಿ ತ್ರಿಶೂಲದ ಚಿಹ್ನೆ ಇರುವವರಿಗೆ ಸರ್ಕಾರಿ ನೌಕರಿ ಸಿಗುವುದರ ಜೊತೆಗೆ ಉನ್ನತ ಹುದ್ದೆ ಕೂಡ ಪ್ರಾಪ್ತಿಯಾಗುತ್ತದೆ. ಈ ಜನರು ತಮ್ಮ ಕೆಲಸ ಕಾರ್ಯಗಳಿಂದ ಹಾಗೂ ಮುಂದಾಳತ್ವದ ಗುಣಗಳ ಕಾರಣ ಸಮಾಜದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ.



>> ಯಾರ ಅಂಗೈಯಲ್ಲಿ ಉಂಗುರ ಬೆರಳಿನ ಕೆಳಗಿರುವ ಸೂರ್ಯ ಪರ್ವತ ಬಲಿಷ್ಟವಾಗಿರುವುದರ ಜೊತೆಗೆ ಅದರಿಂದ ಒಂದು ರೇಖೆ ನೇರವಾಗಿ ಹೊರಹೊಮ್ಮಿದ್ದರೆ, ಅಂತಹ ಜನರಿಗೆ ಸರ್ಕಾರಿ ನೌಕರಿ ಸಿಗುತ್ತದೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವರು ಖಾಸಗಿ ನೌಕರಿ ಸೇರಿಕೊಂಡರೂ ಕೂಡ ತಡವಾದರೂ ಕೂಡ ಅವರಿಗೆ ಸರ್ಕಾರಿ ಕ್ಷೇತ್ರದಲ್ಲಿ ನೌಕರಿ ಸಿಕ್ಕೆ ಸಿಗುತ್ತದೆ. 

>> ಯಾರ ಅಂಗೈಯಲ್ಲಿ ಗುರು ಪರ್ವತ ಮೇಲಕ್ಕೆ ಎದ್ದಿರುತ್ತದೆಯೋ ಅವರ ಗುರುಬಲ ತುಂಬಾ ಬಲಿಷ್ಠವಾಗಿರುತ್ತದೆ. ಬಲಿಷ್ಠ ಗುರು ಭಾಗ್ಯ ಯಶಸ್ಸನ್ನು ನೀಡುತ್ತದೆ. ಇಂತಹ ಜನರು ಸುಲಭವಾಗಿ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸುತ್ತಾರೆ. 


ಇದನ್ನೂ ಓದಿ-Nirjala Ekadashi 2022: ಐದು ರಾಶಿಯವರಿಗೆ ತುಂಬಾ ಮಂಗಳಕರ ನಿರ್ಜಲ ಏಕಾದಶಿ

>> ಒಂದು ವೇಳೆ ಭಾಗ್ಯರೇಖೆಯಿಂದ ಹೊರ ಹೊಮ್ಮುವ ಯಾವುದೇ ಒಂದು ರೇಖೆ ಸೂರ್ಯ ಪರ್ವತವನ್ನು ತಲುಪಿದರೆ, ಅಂತಹ ಜನರು ಕೂಡ ತುಂಬಾ ಲಕ್ಕಿ ಆಗಿರುತ್ತಾರೆ. ಇವರು ಕೂಡ ಸರ್ಕಾರಿ ನೌಕರಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ.


ಇದನ್ನೂ ಓದಿ-Sun Transit 2022: ಜೂನ್ 15ರ ನಂತರ ಸೂರ್ಯನಂತೆ ಬೆಳಗಲಿದೆ ಈ ರಾಶಿಯವರ ಭವಿಷ್ಯ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.