ನವದೆಹಲಿ: ಜ್ಯೋತಿಷ್ಯದಲ್ಲಿ ಶನಿ ಗ್ರಹವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹಾಗೆಯೇ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿಯೂ ಶನಿ ಪರ್ವತ ಮತ್ತು ಅಂಗೈಯಲ್ಲಿನ ಶನಿ ರೇಖೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶನಿ ಪರ್ವತದ ಸ್ಥಾನ ಮತ್ತು ಕೈಯಲ್ಲಿ ಶನಿ ರೇಖೆಯು ವ್ಯಕ್ತಿಯ ಜೀವನ, ಅವನ ಆರ್ಥಿಕ ಸ್ಥಿತಿ, ವೃತ್ತಿಜೀವನ ಹೇಗಿರುತ್ತದೆ ಎಂಬುದನ್ನು ಹೇಳುತ್ತದೆ.


COMMERCIAL BREAK
SCROLL TO CONTINUE READING

ಅಂಗೈನಲ್ಲಿ ಶನಿರೇಖೆ ಹೊಂದಿರುವವರು ಜೀವನದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಈ ಮೂಲಕ ಅವರು ಉನ್ನತ ಸ್ಥಾನಕ್ಕೆ ಏರಲಿದ್ದು, ಬಹಳಷ್ಟು ಹಣ ಗಳಿಸುತ್ತಾರೆ. ಅಂಗೈಯಲ್ಲಿ ಶನಿಯು ಮಂಗಳಕರಾಗಿದ್ದರೆ, ಆ ವ್ಯಕ್ತಿಗೆ ಗೌರವ ಮತ್ತು ಪ್ರತಿಷ್ಠೆ ಸಿಗುತ್ತದೆ. ಇದಲ್ಲದೆ ಶನಿ ಪರ್ವತದ ಮೇಲಿನ ಗುರುತುಗಳು ಭವಿಷ್ಯದ ಬಗ್ಗೆ ಬಹಳ ಮುಖ್ಯವಾದ ಸೂಚನೆಗಳನ್ನು ನೀಡುತ್ತವೆ ಎಂದು ನಂಬಲಾಗಿದೆ.


ಇದನ್ನೂ ಓದಿ: ಈ ರಾಶಿಯವರು ತಮ್ಮ ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ


ಶನಿ ಪರ್ವತದ ಮೇಲಿನ ಗುರುತುಗಳ ಅರ್ಥ


  • ಶನಿ ಪರ್ವತವು ಅಂಗೈಯ ಮಧ್ಯದ ಬೆರಳಿನ ಕೆಳಗೆ ಇದೆ, ಅಂದರೆ ದೊಡ್ಡ ಬೆರಳು. ಶನಿ ಪರ್ವತವು ಉತ್ತಮವಾಗಿ ಅಭಿವೃದ್ಧಿಗೊಂಡಿದ್ದರೆ ಅಂದರೆ ಬೆಳೆದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟವಂತರು. ಇಂತಹ ಜನರು ಶ್ರಮಜೀವಿಗಳು ಮತ್ತು ಸಾಕಷ್ಟು ಅದೃಷ್ಟವನ್ನು ಸಹ ಪಡೆಯುತ್ತಾರೆ. ಅವರು ತಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸುತ್ತಾರೆ.

  • ಶನಿ ಪರ್ವತ ಹೆಚ್ಚು ಅಭಿವೃದ್ಧಿ ಹೊಂದಿದ್ದಲ್ಲಿ, ವ್ಯಕ್ತಿಯು ತನ್ನ ಜೀವನದಲ್ಲಿ ಅಪಾರ ಸಂಪತ್ತು, ವೈಭವ ಮತ್ತು ಖ್ಯಾತಿಯನ್ನು ಪಡೆಯುತ್ತಾನೆ. ಅವರು ಜೀವನದಲ್ಲಿ ಎಲ್ಲವನ್ನೂ ಸಾಧಿಸುತ್ತಾರೆ. ಆದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಇಂತಹವರು ತಮ್ಮ ದುಡಿಮೆಯಿಂದ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ.

  • ಶನಿ ಪರ್ವತದ ಮೇಲೆ ಅಡ್ಡ ಅಥವಾ ದ್ವೀಪದ ಚಿಹ್ನೆ ಇದ್ದರೆ, ಅಂತಹ ವ್ಯಕ್ತಿಯು ಜೀವನದಲ್ಲಿ ನರಳುತ್ತಾನೆ. ಇಂತಹ ಜನರು ಸಮಸ್ಯೆಗಳಲ್ಲಿಯೇ ಜೀವನ ನಡೆಸುತ್ತಾರೆ. ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಿದರೂ ಜೀವನದಲ್ಲಿ ಮತ್ತೆ ಮತ್ತೆ ಏಳುಬೀಳುಗಳನ್ನು ಎದುರಿಸಬೇಕಾಗುತ್ತದೆ.

  • ಯಾರ ಕೈಯಲ್ಲಿ ಶನಿಗ್ರಹವಿಲ್ಲವೋ ಅಂತಹವರು ಶನಿಗ್ರಹದ ತೊಂದರೆಗಳಿಂದ ಮುಕ್ತಿ ಪಡೆಯಲು ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಶನಿ ಮಂತ್ರವನ್ನು ಪಠಿಸಬೇಕು, ಶನಿವಾರದಂದು ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು.


ಇದನ್ನೂ ಓದಿ: Surya Gochar 2022: ಇಂದಿನಿಂದ ‘ಸೂರ್ಯ’ ಈ ಜನರಿಗೆ ಹಣ ನೀಡಲಿದ್ದಾನೆ, ಅದೃಷ್ಟವೇ ಬದಲಾಗಲಿದೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.