Palm Astrology: ಕೈಯಲ್ಲಿರುವ ರೇಖೆಗಳು ನಮ್ಮ ಜೀವನದ ಕುರಿತಾದ ಸಾಕಷ್ಟು ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ಅವು ನಮ್ಮ ಭಾಗ್ಯದಿಂದ ಹಿಡಿದು ವೃತ್ತಿಜೀವನದವರೆಗೆ ಎಲ್ಲಾ ಸಂಗತಿಗಳನ್ನು ಬಹಿರಂಗಪಡಿಸುತ್ತವೆ. ಯಾವ ವ್ಯಕ್ತಿಯ ಐಶ್ವರ್ಯದಿಂದ ಕೂಡಿರುತ್ತದೆ ಮತ್ತು ಯಾರ ಜೀವನ ಸಂಘರ್ಷಗಳಿಂದ ಕೂಡಿರುತ್ತದೆ ಎಂಬುದನ್ನು ಕೂಡ ಕೈಗಳಲ್ಲಿರುವ ರೇಖೆಗಳು ಹೇಳುತ್ತವೆ. ಇವು ನಮ್ಮ ಸ್ವಭಾವ, ವ್ಯಕ್ತಿತ್ವ ಹಾಗೂ ವ್ಯವಹಾರದ ಕುರಿತಾದ ರಹಸ್ಯಗಳನ್ನು ಕೂಡ ಹೇಳುತ್ತವೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ನಮ್ಮ ತೋರ್ಬೆರಳಿನ ಕೆಳಗೆ ಗುರು ಪರ್ವತ ಇರುತ್ತದೆ. ಯಾರ ಕೈಯಲ್ಲಿ ಗುರುಪರ್ವದ ಮೇಲಕ್ಕೆ ಎದ್ದಿರುವಂತೆ ಕಾಣಿಸುತ್ತದೆಯೋ, ಅಂತಹ ಜನರು ಶಿಕ್ಷಣ, ಚಿಕಿತ್ಸೆ, ಮ್ಯಾನೆಜ್ಮೆಂಟ್ ಹಾಗೂ ಸರ್ಕಾರಿ ನೌಕರಿಯನ್ನು ಸೇರುತ್ತಾರೆ ಎನ್ನಲಾಗುತ್ತದೆ.
ನಡುವಿನ ಬೆರಳಿನ ಕೆಳಗಿರುತ್ತದೆ ಶನಿ ಪರ್ವತ. ಹಸ್ತ ಸಾಮುದ್ರಿಕ ಸಾಷ್ಟ್ರದ ಪ್ರಕಾರ ಯಾವ ವ್ಯಕ್ತಿಯ ಅಂಗೈಯಲ್ಲಿ ಶನಿ ಪರ್ವತ ಮೇಲಕ್ಕೆ ಎದ್ದಿರುವಂತೆ ಕಾಣುತ್ತಿರುತ್ತದೆಯೋ, ಅಂತಹ ಜನರ ಜೀವನ ಅಪಾರ ಸಂಕಷ್ಟಗಳಿಂದ ಕೂಡಿರುತ್ತದೆ. ಈ ಜನರು ಗುತ್ತಿಗೆಯ ಕೆಲಸ ಮಾಡಬಹುದು.

ಉಂಗುರು ಬೆರಳಿನ ಕೆಳಗೆ ಸೂರ್ಯ ಪರ್ವತವಿರುತ್ತದೆ. ಯಾವ ವ್ಯಕ್ತಿಯ ಅಂಗೈಯಲ್ಲಿ ಸೂರ್ಯ ಹಾಗೂ ಬುಧ ಪರ್ವತ ಮೇಲಕ್ಕೆ ಎದ್ದಂತೆ ಕಾಣುತ್ತದೆಯೋ, ಅಂತಹ ಜನರು ಚಿಕಿತ್ಸಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನ ಸಾಗಿಸುತ್ತಾರೆ ಮತ್ತು ಇವರು ಅಪಾರ ಗೌರವವನ್ನು ಸಂಪಾದಿಸುತ್ತಾರೆ. 


ಇದನ್ನೂ ಓದಿ-Big Planet Transit: ಈ ಮಾಸದ ಅತಿದೊಡ್ಡ ರಾಶಿ ಪರಿವರ್ತನೆ ನಾಳೆ, ಈ ರಾಶಿಗಳ ಜನರಿಗೆ ಎಚ್ಚರಿಕೆ!

ಯಾವ ವ್ಯಕ್ತಿಯ ಕೈಯಲ್ಲಿ ಚಂದ್ರ ಮೇಲಕ್ಕೆ ಎದ್ದಿರುವಂತೆ ಕಾಣುತ್ತದೆಯೋ, ಅಂತಹ ಜನರು ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಕಲೆಯ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಂಪಾದಿಸುತ್ತಾರೆ.


ಇದನ್ನೂ ಓದಿ-Sun Transit 2022: ನಾಳೆ ಧನು ಸಂಕ್ರಾಂತಿ, ರಾಶಿಗನುಗುಣವಾಗಿ ಈ ಉಪಾಯ ಮಾಡಿ, ಚಿನ್ನದಂತೆ ಹೊಳೆಯುತ್ತೆ ಅದೃಷ್ಟ

(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.