Palmistry: ಕೈಯಲ್ಲಿ ‘ವಿಷ್ಣು ರೇಖೆ’ ಹೊಂದಿರುವವರು ತುಂಬಾ ಅದೃಷ್ಟವಂತರು!
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ವಿಶೇಷ ರೇಖೆಗಳು ಮತ್ತು ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಮಂಗಳಕರ ವಿಷ್ಣು ರೇಖೆಯನ್ನು ಕೈಯಲ್ಲಿ ಹೊಂದಿರುವವರು ಜೀವನದಲ್ಲಿ ಸಂಪತ್ತು, ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತಾರೆ.
ನವದೆಹಲಿ: ಕೈಯಲ್ಲಿ ವಿಷ್ಣು ರೇಖೆ ಇದ್ದರೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿ ವಿಷ್ಣು ರೇಖೆಯಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲಾ ಸಂತೋಷ ಪಡೆಯುತ್ತಾನೆ. ಈ ರೇಖೆಯು ಜನರ ಕೈಯಲ್ಲಿ ವಿರಳ, ಆದರೆ ಈ ರೇಖೆ ಹೊಂದಿರುವವರ ಅದೃಷ್ಟವು ಹೊಳೆಯುತ್ತದೆ. ಈ ಜನರು ತಮ್ಮ ಜೀವನದಲ್ಲಿ ಬಹಳಷ್ಟು ಸಂಪತ್ತು, ಖ್ಯಾತಿ, ಗೌರವ ಮತ್ತು ಎಲ್ಲವನ್ನೂ ಪಡೆಯುತ್ತಾರೆ.
ಅಂಗೈಯಲ್ಲಿ ವಿಷ್ಣು ರೇಖೆ ಎಲ್ಲಿರುತ್ತದೆ?
ಅಂಗೈಯಲ್ಲಿರುವ ಹೃದಯ ರೇಖೆಯಿಂದ ಹೊರಬರುವ ರೇಖೆಯು ಗುರುಗ್ರಹದ ಪರ್ವತಕ್ಕೆ ಹೋದರೆ ಹೃದಯ ರೇಖೆಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ, ಆಗ ಅದನ್ನು ವಿಷ್ಣು ರೇಖೆ ಎಂದು ಕರೆಯಲಾಗುತ್ತದೆ. ಸ್ಪಷ್ಟ ಮತ್ತು ಆಳವಾದ ವಿಷ್ಣು ರೇಖೆಯು ತುಂಬಾ ಮಂಗಳಕರವಾಗಿದೆ. ಭಗವಾನ್ ವಿಷ್ಣುವು ಈ ರೇಖೆ ಹೊಂದಿರುವ ಜನರನ್ನು ಯಾವಾಗಲೂ ಆಶೀರ್ವದಿಸುತ್ತಾನೆ ಮತ್ತು ಅದೃಷ್ಟವು ಪ್ರತಿ ಹಂತದಲ್ಲೂ ಇವರನ್ನು ಬೆಂಬಲಿಸುತ್ತದೆ. ಅದಕ್ಕಾಗಿಯೇ ಈ ಜನರು ತಮ್ಮ ಕೆಲಸದಲ್ಲಿ ಸುಲಭವಾಗಿ ಯಶಸ್ಸನ್ನು ಪಡೆಯುತ್ತಾರೆ. ಆದರೆ ಅಸ್ಪಷ್ಟ ವಿಷ್ಣು ರೇಖೆಯು ಶುಭ ಫಲಿತಾಂಶ ನೀಡುವುದಿಲ್ಲ.
ಇದನ್ನೂ ಓದಿ: Eclipse 2023: ಸೂರ್ಯಗ್ರಹಣ-ಚಂದ್ರಗ್ರಹಣದಿಂದ ನಿಮ್ಮ ಜೀವನದ ಮೇಲೆ ಬಹುದೊಡ್ಡ ಪರಿಣಾಮ!
ಉನ್ನತ ಸ್ಥಾನ & ಅಪಾರ ಪ್ರತಿಷ್ಠೆ!
ಕೈಯಲ್ಲಿ ವಿಷ್ಣು ರೇಖೆ ಇದ್ದರೆ ಆ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಾನೆ. ಈ ಜನರು ತಮ್ಮ ಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಅವರು ಸಾಕಷ್ಟು ಗೌರವ ಮತ್ತು ಜನಪ್ರಿಯತೆ ಪಡೆಯುತ್ತಾರೆ. ಅವರು ತುಂಬಾ ಶ್ರೀಮಂತರಾಗುತ್ತಾರೆ ಎಂಬುದು ಸ್ಪಷ್ಟವಾಗಿದೆ. ಇವರಿಗೆ ಯಾವುದೇ ಆರ್ಥಿಕ ತೊಂದರೆ ಎದುರಾಗುವುದಿಲ್ಲ. ಇವರು ಧೈರ್ಯ ಮತ್ತು ನಿರ್ಭಯತೆಯಿಂದ ಇರುತ್ತಾರೆ. ಹೀಗಾಗಿಯೇ ಅವರು ಸವಾಲುಗಳಿಗೆ ಹೆದರುವುದಿಲ್ಲ ಮತ್ತು ಪ್ರತಿ ಸಂದರ್ಭದಲ್ಲೂ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ. ಅಲ್ಲದೆ ಈ ಜನರು ತುಂಬಾ ಧಾರ್ಮಿಕರು ಮತ್ತು ಉತ್ತಮ ವರ್ತನೆ ಹೊಂದಿರುತ್ತಾರೆ. ಸದಾ ಸತ್ಯ-ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುತ್ತಾರೆ.
ಇದನ್ನೂ ಓದಿ: Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.