ನವದೆಹಲಿ: Palmistry - ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯ  ರೇಖೆಗಳು ಓರ್ವ ವ್ಯಕ್ತಿಯ ಜೀವನದ ಪ್ರತಿಯೊಂದು ರಹಸ್ಯವನ್ನು ಬಹಿರಂಗಪಡಿಸುತ್ತವೆ. ಹಸ್ತದ ಈ ರೇಖೆಗಳು ನಮ್ಮ ಭವಿಷ್ಯವು ಹೇಗೆ ಇರಲಿದೆ ಎಂಬುದರ ಬಗ್ಗೆಯೂ ಹೇಳುತ್ತವೆ. ಹಸ್ತದ ಈ ರೆಖೆಗಳಲ್ಲಿನ ಒಂದು ರೇಖೆಯು ಒಬ್ಬ ವ್ಯಕ್ತಿಯು ಪ್ರೇಮವಿವಾಹವನ್ನು ಹೊಂದಿದ್ದಾನೆಯೇ ಅಥವಾ ನಿಯೋಜಿತ ವಿವಾಹ ಹೊಂದ್ದಾನೆಯೇ ಎಂಬುದನ್ನು ಸಹ ಹೇಳುತ್ತದೆ. ಅಲ್ಲದೆ ಪ್ರೇಮ ವಿವಾಹ ಯಾವಾಗ ನಡೆಯಲಿದೆ ಎಂಬುದನ್ನೂ ಕೂಡ ಸಂಕೇತಿಸುತ್ತದೆ. 


COMMERCIAL BREAK
SCROLL TO CONTINUE READING

ಮದುವೆ ರೇಖೆ ಮತ್ತು ಲವ್ ಲೈನ್  (Marriage Line and Love Line)
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ಯಾರ ಅಂಗೈಯಲ್ಲಿ ಮದುವೆಯ ರೇಖೆ ಮತ್ತು ಹೃದಯ ರೇಖೆಯ ನಡುವಿನ ಅಂತರವು ತುಂಬಾ ಕಡಿಮೆಯಾಗಿರುತ್ತದೆಯೋ, ಅವರು  ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಇದಲ್ಲದೇ ಮದುವೆಯ ರೇಖೆಯ ಆರಂಭದಲ್ಲಿ ಪರ್ವತದ ಗುರುತು ಇದ್ದರೆ ಅಥವಾ ಅದು ಪರ್ವತವಾಗಿದ್ದರೆ, ಅಂತಹ ಮಹಿಳೆಯನ್ನು ಮೋಸದಿಂದ ಮದುವೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 


ಚಿಕ್ಕ ವಯಸ್ಸಿನಲ್ಲೇ ಪ್ರೇಮ ವಿವಾಹ (Love Marriage in Early Age)
ಮದುವೆಯ ರೇಖೆಯು (Marriage Line) ಹೃದಯ ರೇಖೆಗೆ (Heart Line) ಹತ್ತಿರವಾಗಿದ್ದರೆ, ವ್ಯಕ್ತಿಯ ಮದುವೆಯು 20 ವರ್ಷಕ್ಕಿಂತ ಮೊದಲು ಪ್ರೇಮ ವಿವಾಹವಾಗುತ್ತದೆ. ಮತ್ತೊಂದೆಡೆ, ವ್ಯಕ್ತಿಯ ಅಂಗೈಯಲ್ಲಿರುವ ಮದುವೆಯ ರೇಖೆಯು ಹೃದಯ ರೇಖೆಯನ್ನು ಕತ್ತರಿಸುವ ಮೂಲಕ ಕೆಳಕ್ಕೆ ಜಾರಿದ್ದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಯಾವಾಗಲೂ ಪ್ರೇಮ ವಿವಾಹವನ್ನು ಮಾಡಿಕೊಳ್ಳುವ  ಮೂಲಕ ತೊಂದರೆಗೊಳಗಾಗುತ್ತಾನೆ.


ಇದನ್ನೂ ಓದಿ-Angarak Dosha: ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಪಾಯಕಾರಿ ಅಂಗಾರಕ ಯೋಗ, ನಿಮ್ಮ ರಾಶಿ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತಾ?


ಮದುವೆಯ ರೇಖೆಯಲ್ಲಿ  ತ್ರಿಶೂಲ್ (Trishul on Marriage Line)
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಮದುವೆ ರೇಖೆಯ ಬಳಿ ತ್ರಿಶೂಲ ಅಥವಾ ಇನ್ನಾವುದೇ ಚಿಹ್ನೆ ಇದ್ದರೆ, ಒಬ್ಬ ವ್ಯಕ್ತಿಯು ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾನೆ. ಅಲ್ಲದೆ, ಆ ವ್ಯಕ್ತಿ ತನ್ನ ಜೀವನ ಸಂಗಾತಿಗೆ ತುಂಬಾ ಪ್ರೀತಿಯನ್ನು ನೀಡುತ್ತಾನೆ. ಇದಲ್ಲದೇ ಮದುವೆಯ ರೇಖೆಯ ಮೇಲೆ ಯಾವುದೇ ರೀತಿಯ ಚೌಕಾಕಾರದ ಗುರುತು ಇದ್ದರೂ ಕೂಡ ಪ್ರೇಮ ವಿವಾಹದ ಸಾಧ್ಯತೆ ಬಲವಾಗಿರುತ್ತದೆ. ಆದರೆ ಜೀವನ ಸಂಗಾತಿಯ ಆರೋಗ್ಯ ಕೆಲವೊಮ್ಮೆ ಕೆಟ್ಟದಾಗಿರಲುಬಹುದು. 


ಇದನ್ನೂ ಓದಿ-Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-ಶನಿಯ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಜೀವನದಲ್ಲಿ ಏರುಪೇರು ಉಂಟಾಗಲಿದೆ: ನಿಮ್ಮ ಸ್ಥಿತಿ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.