Papaya Leaf Juice: ಈ ಋತುವಿನಲ್ಲಿ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರದ ಅಪಾಯವು ತುಂಬಾ ಹೆಚ್ಚಿರುತ್ತದೆ. ಡೆಂಗ್ಯೂ ಜ್ವರದ ಸಂದರ್ಭದಲ್ಲಿ ಪ್ಲೇಟ್‌ಲೆಟ್‌ಗಳು ಬಹಳ ಬೇಗ ಇಳಿಮುಖವಾಗುತ್ತವೆ. ಇದು ಹಲವು ಬಾರಿ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಆದರೆ ಪ್ಲೇಟ್ಲೆಟ್ ಹೆಚ್ಚಿಸಲು ಬೇರೆ ಔಷಧಿಗಳಿಗಿಂತ ಪರಂಗಿ ಎಲೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತದೆ.  ಇದು ರಕ್ತವನ್ನು ಆರೋಗ್ಯಕರವಾಗಿಸುವುದಲ್ಲದೆ, ಡೆಂಗ್ಯೂ ರೋಗಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಆಯುರ್ವೇದ ತಜ್ಞರ ಪ್ರಕಾರ ಡೆಂಗ್ಯೂನಿಂದ ಬೇಗ ಗುಣಮುಖರಾಗಲು ಪಪ್ಪಾಯಿ ಎಲೆಗಳ ರಸವು (Papaya Leaf Juice) ಬಹಳ ಪ್ರಯೋಜನಕಾರಿ ಆಗಿದೆ. ಕೇವಲ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸುವುದು ಮಾತ್ರವಲ್ಲ ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದರಿಂದ ಇನ್ನೂ ಹಲವು ಪ್ರಯೋಜನಗಳು ಲಭ್ಯವಿದೆ. ಹಾಗಿದ್ದರೆ, ಪಪ್ಪಾಯಿ ಎಲೆಯ ರಸ ತಯಾರಿಸುವುದು ಹೇಗೆ ಮತ್ತು ಅದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ...


ಇದನ್ನೂ ಓದಿ- Hair Care Tips: ಕೂದಲು ಉದುರುವಿಕೆಗೆ ಪರಿಹಾರ ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ


ಪಪ್ಪಾಯಿ ಎಲೆಗಳ ಗುಣಲಕ್ಷಣಗಳು ಮತ್ತು ಅದರ ರಸವನ್ನು ಹೇಗೆ ಮಾಡುವುದು?  (Papaya Leaf Juice Recipe) :
ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿಯವರ ಪ್ರಕಾರ, ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ ಸಿ (Vitamin C), ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ ಮತ್ತು ವಿಟಮಿನ್-ಕೆ ಸಮೃದ್ಧವಾಗಿದೆ. ಇದರೊಂದಿಗೆ, ಪರಂಗಿಯು ಪ್ಯಾಪೈನ್, ಚೈಮೊಪಪೈನ್, ಆಲ್ಕಲಾಯ್ಡ್ ಸಂಯುಕ್ತಗಳಂತಹ ಗುಣಗಳನ್ನು ಹೊಂದಿದೆ. ಪಪ್ಪಾಯಿ ಎಲೆಗಳ ರಸವನ್ನು ತಯಾರಿಸಲು, ಎಲೆಗಳನ್ನು ತೊಳೆದು ತುಂಡುಗಳಿಂದ ಕತ್ತರಿಸಿ. ಇದರ ನಂತರ, ಬ್ಲೆಂಡರ್‌ನಲ್ಲಿ ಸ್ವಲ್ಪ ನೀರು ಸೇರಿಸಿ ಮತ್ತು ಅವುಗಳನ್ನು ಮಿಶ್ರಣ ಮಾಡಿ. ನಿಮಗೆ ಅಗತ್ಯವಿದ್ದರೆ ಉಪ್ಪು ಅಥವಾ ಸಕ್ಕರೆ ಸೇರಿಸಿ ಸೇವಿಸಬಹುದು.


ಇದನ್ನೂ ಓದಿ- Benefits of Cabbage: ನಿಮ್ಮ ಡಯಟ್ನಲ್ಲಿ ಈ ಆಹಾರವನ್ನು ಸೇರಿಸಿ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ


ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಆಗುವ ಲಾಭಗಳು (Papaya Leaf Juice Benefits):
ಜನರು ಪಪ್ಪಾಯಿ ಎಲೆಗಳ ರಸವನ್ನು ವಿಶೇಷವಾಗಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು (Increase platelets count)  ಸೇವಿಸುತ್ತಾರೆ. ಆದರೆ, ಈ ರಸವನ್ನು ಬಳಸುವುದರಿಂದ ಇತರ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಅವರಿಗೆ ತಿಳಿದಿಲ್ಲ ಎಂದು ಡಾ.ಅಬ್ರಾರ್ ಮುಲ್ತಾನಿಯವರು ಹೇಳುತ್ತಾರೆ.


1. ಡೆಂಗ್ಯೂ ಜ್ವರದ ಸಂದರ್ಭದಲ್ಲಿ ಪ್ಲೇಟ್ಲೆಟ್ ಕಡಿಮೆ ಆಗುವ ಅಪಾಯವಿದೆ.  ಇದು ಸಂಭವಿಸಿದಾಗ ಅಧಿಕ ರಕ್ತಸ್ರಾವ ಸಂಭವಿಸಬಹುದು. ಇದು ಮಾರಕ ಎಂದು ಸಹ ಸಾಬೀತುಪಡಿಸಬಹುದು. ಆದ್ದರಿಂದ, ಡೆಂಗ್ಯೂನಲ್ಲಿ ಪಪ್ಪಾಯಿ ಎಲೆಗಳ ರಸವನ್ನು ಕುಡಿಯಿರಿ, ಇದು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿರಿಸುವುದಲ್ಲದೆ, ಜ್ವರ, ಆಯಾಸ, ವಾಂತಿಯಂತಹ ಡೆಂಗ್ಯೂ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ.
2. ವ್ಯಕ್ತಿಯ ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಮತ್ತು ಆತನಿಗೆ ಗ್ಯಾಸ್, ಎದೆಯುರಿ, ಅಜೀರ್ಣ, ವಾಂತಿ ಇತ್ಯಾದಿ ಸಮಸ್ಯೆಗಳಿದ್ದರೆ, ಅವನು ಈ ಜ್ಯೂಸ್ ಕೂಡ ಕುಡಿಯಬೇಕು. ಪಪ್ಪಾಯಿ ಎಲೆಗಳಲ್ಲಿರುವ ಪಪೈನ್, ಕೈಮೋಪಪೈನ್ ಮತ್ತು ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3. ಆಯುರ್ವೇದ ತಜ್ಞರ ಪ್ರಕಾರ, ಮಧುಮೇಹಿಗಳು ಕೂಡ ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಲಾಭ ಪಡೆಯಬಹುದು. ಏಕೆಂದರೆ ಇದರಲ್ಲಿರುವ ಗುಣಗಳು ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
4. ನೀವು ಇದನ್ನು ನಂಬಲು ಕಷ್ಟವಾಗಬಹುದು, ಆದರೆ ಪಪ್ಪಾಯಿ ಎಲೆಗಳ ರಸವು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಇದನ್ನು ಅನೇಕ ಸಂಶೋಧನೆಗಳಲ್ಲಿ ಹೇಳಿಕೊಳ್ಳಲಾಗಿದೆ. ಸಂಶೋಧನೆಯ ಪ್ರಕಾರ, ಆಕ್ಸಿಡೇಟಿವ್ ಒತ್ತಡದಿಂದಾಗಿ ಕೂದಲು ಬೆಳವಣಿಗೆ ಅಥವಾ ಕೂದಲು ಉದುರುವ ಸಮಸ್ಯೆಯನ್ನು ಈ ರಸದಿಂದ ನಿವಾರಿಸಬಹುದು. ಏಕೆಂದರೆ, ಈ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.
5. ಈ ಎಲೆಗಳ ರಸವನ್ನು ಬಳಸುವುದರಿಂದ ಚರ್ಮವನ್ನು ಆರೋಗ್ಯಕರವಾಗಿಸಬಹುದು. ಏಕೆಂದರೆ, ಇದು ಮುಚ್ಚಿಹೋಗಿರುವ ರಂಧ್ರಗಳನ್ನು ತೆರೆಯುವುದು, ಮೊಡವೆ ಇತ್ಯಾದಿ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಸ್ಥಳೀಯವಾಗಿ ಅನ್ವಯಿಸಿದಾಗ, ಪಪ್ಪಾಯಿ ಎಲೆಗಳಲ್ಲಿರುವ ಪಪೈನ್ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ.


ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.