Valentine Week 2024 : ಈ ಮೂಲಾಂಕದಲ್ಲಿ ಜನಿಸಿದವರು ಪ್ರೀತಿಯಲ್ಲಿ ಮೋಸ ಹೋಗುವುದೇ ಹೆಚ್ಚಂತೆ !ಆದರೆ...
Valentine Week 2024 :ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದೆ. ಈ ಕಾರಣದಿಂದಾಗಿ ಯಾವ ರಾಡಿಕ್ಸ್ ಸಂಖ್ಯೆಯ ಜನರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ ಅಥವಾ ಯಾರ ಜೀವನದಲ್ಲಿ ಪ್ರೀತಿ ವೈಫಲ್ಯವನ್ನೇ ಕಾಣುತ್ತದೆ ಅನ್ನುವುದನ್ನು ನೋಡೋಣ.
Valentine Week 2024 : ಫೆಬ್ರವರಿಯನ್ನು ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ವ್ಯಾಲೆಂಟೈನ್ ವೀಕ್ ಅನ್ನು ಫೆಬ್ರವರಿ 7 ರಿಂದ 14 ರವರೆಗೆ ಆಚರಿಸಲಾಗುತ್ತದೆ. ಜೀವನದಲ್ಲಿ ಪ್ರೀತಿ ಯಾರ ಕೈ ಹಿಡಿಯುತ್ತದೆ ಅಥವಾ ಯಾರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ ಎನ್ನುವುದರ ಹಿಂದೆಯೂ ಜ್ಯೋತಿಷ್ಯ ಲೆಕ್ಕಾಚಾರ ಅಡಗಿದೆಯಂತೆ. ಸಂಖ್ಯಾಶಾಸ್ತ್ರದಲ್ಲಿ ಒಟ್ಟು 9 ಮೂಲ ಸಂಖ್ಯೆಗಳಿವೆ.ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕದಿಂದ ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವನ್ನು ತಿಳಿಯಬಹುದು. ಸಂಖ್ಯಾಶಾಸ್ತ್ರದ ಪ್ರಕಾರ,ವ್ಯಕ್ತಿಯ ರಾಡಿಕ್ಸ್ ಸಂಖ್ಯೆಯನ್ನು ಹುಟ್ಟಿದ ದಿನಾಂಕದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದೆ. ಈ ಕಾರಣದಿಂದಾಗಿ ಯಾವ ರಾಡಿಕ್ಸ್ ಸಂಖ್ಯೆಯ ಜನರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ ಅಥವಾ ಯಾರ ಜೀವನದಲ್ಲಿ ಪ್ರೀತಿ ವೈಫಲ್ಯವನ್ನೇ ಕಾಣುತ್ತದೆ ಅನ್ನುವುದನ್ನು ನೋಡೋಣ.
ರಾಡಿಕ್ಸ್ 3:
ಯಾವುದೇ ತಿಂಗಳ 3, 12, 21 ಮತ್ತು 30 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 3 ಅನ್ನು ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಡಿಕ್ಸ್ ಸಂಖ್ಯೆಯ ಅಧಿಪತಿ ಗುರು. ಈ ರಾಡಿಕ್ಸ್ ಸಂಖ್ಯೆಯ ಜನರು ಅನೇಕ ಗುಣಗಳನ್ನು ಹೊಂದಿರುತ್ತಾರೆ. ಅವರು ಜೀವನದಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ. ಆದರೆ, ಪ್ರೀತಿಯ ವಿಷಯದಲ್ಲಿ ಮಾತ್ರ ಅವರು ಅದೃಷ್ಟವಂತರಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಜಾತಕದಲ್ಲಿ ಕಾಲ ಸರ್ಪ ದೋಷವಿದೆಯೇ..! ಅದರ ಪರಿಣಾಮಗಳು ಮತ್ತು ಪರಿಹಾರಗಳೇನು ಎಂದು ತಿಳಿಯಿರಿ..
ಸಂಬಂಧಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ :
ರಾಡಿಕ್ಸ್ ಸಂಖ್ಯೆ 3ರ ಜನರ ಗುಣಗಳ ಬಗ್ಗೆ ಹೇಳುವುದಾದರೆ ಈ ಜನರು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಪ್ರತಿ ಕೆಲಸವನ್ನೂ ಕಠಿಣ ಪರಿಶ್ರಮದಿಂದ ಮಾಡಿ ಮುಗಿಸುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ರಾಡಿಕ್ಸ್ ಸಂಖ್ಯೆಯ ಜನರು ತಮ್ಮ ಪ್ರೀತಿಯ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ನಂಬರ್ 3 ಇರುವವರು ಪ್ರೀತಿಯಲ್ಲಿ ಮೋಸ ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವೊಮ್ಮೆ ಸಂಬಂಧಗಳು ತುಂಬಾ ಹದಗೆಡುತ್ತವೆ, ಮದುವೆಗಳು ಮುರಿಯುವ ಹಂತಕ್ಕೆ ಬರುತ್ತವೆ.ಇಂಥವರ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಆಗುವ ಸಾಧ್ಯತೆಗಳಿರುತ್ತವೆ.
ಈ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದಿಸುತ್ತಾರೆ :
ಸಂಖ್ಯೆ 3 ಹೊಂದಿರುವ ಜನರು ಅಧ್ಯಯನವನ್ನು ತುಂಬಾ ಇಷ್ಟಪಡುತ್ತಾರೆ. ಗುರು ಅಧಿಪತಿಯಾಗಿರುವುದರಿಂದ ಈ ಜನರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ, ಹೆಸರ್, ಖ್ಯಾತಿ ಪಡೆಯುತ್ತಾರೆ. ಇವರು ವೈದ್ಯ, ಪತ್ರಕರ್ತರು ಮತ್ತು ಬೋಧನಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.
ಇದನ್ನೂ ಓದಿ : Vastu Tips: ಮನೆಯಲ್ಲಿ ಕೊಳಲು ಇಡುವುದರಿಂದ ಆಗುವ ಅದ್ಭುತ ಲಾಭಗಳು..!ಅದೃಷ್ಟದ ಬಾಗಿಲು ತೆರೆದಂತೆ
ಸ್ವಭಾವ ಹೇಗಿರುತ್ತದೆ ? :
ರಾಡಿಕ್ಸ್ ಸಂಖ್ಯೆ 3 ರೊಂದಿಗಿನ ಜನರ ಸ್ವಭಾವದ ಬಗ್ಗೆ ಹೇಳುವುದಾದರೆ ಈ ಜನರು ತಮ್ಮ ಕೆಲಸದಲ್ಲಿ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಯಾರಿಂದಲೂ ಸಹಾಯ ತೆಗೆದುಕೊಳ್ಳುವುದು ಇವರಿಗೆ ಇಷ್ವವಿರುವುದಿಲ್ಲ. ಇದಲ್ಲದೆ, ಅವರು ಸ್ವತಂತ್ವಾಗಿ ಬದುಕುವುದನ್ನು ಇಷ್ಟಪಡುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.