ಬೆಂಗಳೂರು : ಜ್ಯೋತಿಷ್ಯದಲ್ಲಿ ರಾಶಿಗನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವವನ್ನು ಹೇಳಲಾಗುತ್ತದೆ. ಅದೇ ರೀತಿ ಸಂಖ್ಯಾಶಾಸ್ತ್ರದಲ್ಲಿ, ಮೂಲಾಂಕದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಹೇಳಲಾಗುತ್ತದೆ. ಜ್ಯೋತಿಷ್ಯದಂತೆಯೇ, ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಗೆ ಒಂದು ಅಧಿಪತಿ ಗ್ರಹ ಇರುತ್ತದೆ. ಮೂಲಾಂಕ 1 ಹೊಂದಿರುವವರ ಅಧಿಪತಿ ಗ್ರಹ ಸೂರ್ಯ. ಈ ಕಾರಣಕ್ಕಾಗಿ, ಸೂರ್ಯನ ಪ್ರಭಾವವು ರಾಡಿಕ್ಸ್ 1 ಅಥವಾ ಮೂಲಾಂಕ ಒಂದರ ಜನರ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದವರ ಮೂಲಾಂಕ 1 ಆಗಿರುತ್ತದೆ. 


COMMERCIAL BREAK
SCROLL TO CONTINUE READING

ಮೂಲಾಂಕ 1ರ ಜನರು ಹುಟ್ಟುತ್ತಲೇ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ : 
ಮೂಲಾಂಕ 1 ಹೊಂದಿರುವ ಜನರು, ನಾಯಕತ್ವದ ಅದ್ಭುತ ಗುಣವನ್ನು ಹೊಂದಿರುತ್ತಾರೆ. ಈ  ಮೂಲಾಂಕದ ಜನರು ಸ್ವತಂತ್ರ ಮನೋಭಾವದವರು ಮತ್ತು ತಮ್ಮದೇ ಆದ ನಿಯಮಗಳ ಮೇಲೆ ಬದುಕಲು ಇಷ್ಟಪಡುತ್ತಾರೆ. ತಾವು ಮಾಡುವ ಕೆಲಸದಲ್ಲಿ ಯಾರ ಹಸ್ತಕ್ಷೇಪವನ್ನೂ ಇವರು ಸಹಿಸುವುದಿಲ್ಲ. ಇನ್ನು ತಾವು ಮಾಡುವ ಕೆಲಸದ ಬಗ್ಗೆ ಬೇರೆಯವರು ಸಲಹೆ ನೀಡುವುದು ಅಥವಾ ಆರ್ಡರ್ ಮಾಡುವುದನ್ನು ಇವರು ಒಪ್ಪುವುದಿಲ್ಲ. ಏನಾದರೊಂದು ಹೊಸ ಕೆಲಸ ಮಾಡುವ ಹುಮ್ಮಸ್ಸು ಹೊಂದಿರುತ್ತಾರೆ. 


ಇದನ್ನೂ ಓದಿ : Saturn Transit: 2023ರಲ್ಲಿ ಶನಿ ಮಹಾಪುರುಷ ಯೋಗದಿಂದ ಬೆಳಗಲಿದೆ ಈ ರಾಶಿಯವರ ಜೀವನ


ಚುರುಕು ಬುದ್ದಿ ಅತಿಯಾದ ಆತ್ಮವಿಶ್ವಾಸ :  
ಮೂಲಾಂಕ 1ರ ಜನರು, ತೀಕ್ಷ್ಣ ಮನಸ್ಸಿನವರಾಗಿದ್ದು, ಅತ್ಯಂತ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಜೀವನದ ಸವಾಲುಗಳಿಗೆ ಹೆದರುವುದಿಲ್ಲ. ಯಾವಾಗಲೂ ಅವುಗಳನ್ನು ದೃಢವಾಗಿ ಎದುರಿಸುತ್ತಾರೆ. ಯಾವಾಗಲೂ ಒಳ್ಳೆಯ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ.


ಮಹತ್ವಾಕಾಂಕ್ಷೆಯುಳ್ಳವರು :  
ಮೂಲಾಂಕ 1 ಹೊಂದಿರುವವರಿಗೆ  ತಾವು ಸಾಧಿಸುವ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಅವರು ಬಹಳ ಮಹತ್ವಾಕಾಂಕ್ಷೆಯುಳ್ಳವರು. ಯಾವಾಗಲೂ ದೊಡ್ಡ ಮಟ್ಟದ ಕನಸು ಕಾಣುತ್ತಾರೆ. ಆದರೆ, ಇವರಿಗೆ ಬೇಜಾರಾಗುವುದು ಬೇಗ. ಈ ಕಾರಣದಿಂದ ಹಲವು ಬಾರಿ ದಾರಿ ತಪ್ಪುವುದೂ ಇದೆ. ಎಷ್ಟೇ ಸ್ನೇಹಿತರನ್ನು ಹೊಂದಿದ್ದರೂ ತಮ್ಮ ಜೀವನದ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. 


ಇದನ್ನೂ ಓದಿ : December Graha Gochar: ಶನಿಯ ನಕ್ಷತ್ರ ಪುಂಜದಲ್ಲಿ 3 ಶಕ್ತಿಶಾಲಿ ಗ್ರಹಗಳ ಸಂಯೋಗ, ಈ ರಾಶಿಯವರಿಗೆ ಹಣದ ಮಳೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.