ರಾಹುವಿನ ಅನುಗ್ರಹದಿಂದ ಇದ್ದಕ್ಕಿದ್ದಂತೆ ಸಿರಿವಂತರಾಗುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು
ಮೂಲಾಂಕ 4 ರ ಜನರ ಮೇಲೆ ರಾಹುವಿನ ವಿಶೇಷ ಅನುಗ್ರಹ ಇರುತ್ತದೆ. ಈ ಕಾರಣದಿಂದಾಗಿ ಇವರು ಐಶಾರಾಮಿ ಜೀವನ ನಡೆಸುತ್ತಾರೆ.
ಬೆಂಗಳೂರು : ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ವ್ಯಕ್ತಿಯ ಮೂಲಾಂಕ 4 ಆಗಿರುತ್ತದೆ. ಮೂಲಾಂಕ ಎಂಬುದು ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 4 ರಾಹುವಿನ ಸಂಖ್ಯೆ. ಆದ್ದರಿಂದ, ಮೂಲಾಂಕ 4 ರ ಜನರ ಮೇಲೆ ರಾಹುವಿನ ವಿಶೇಷ ಅನುಗ್ರಹ ಇರುತ್ತದೆ. ಈ ಕಾರಣದಿಂದಾಗಿ ಇವರು ಐಶಾರಾಮಿ ಜೀವನ ನಡೆಸುತ್ತಾರೆ.
ರಾಹು ರಾಡಿಕ್ಸ್ 4 ರ ಅಧಿಪತಿ :
ರಾಡಿಕ್ಸ್ 4 ರ ಅಧಿಪತಿ ಗ್ರಹ ರಾಹು. ರಾಹುವನ್ನು ಛಾಯಾ ಗ್ರಹವೆಂದು ಕರೆಯಲಾಗುತ್ತದೆ. ಆದ್ದರಿಂದ ಇದನ್ನು ಉತ್ತಮ ಗ್ರಹವೆಂದು ಪರಿಗಣಿಸಲಾಗುವುದಿಲ್ಲ. ರಾಹುವಿನ ಪ್ರಭಾವದಿಂದಾಗಿ, ಮೂಲಾಂಕ 4 ರ ಜನರು ಹಠಮಾರಿ ಸ್ವಭಾವದವರಾಗಿರುತ್ತಾರೆ. ಇದರಿಂದ ಹಲವು ಬಾರಿ ನಷ್ಟ ಕೂಡಾ ಅನುಭವಿಸುತ್ತಾರೆ. ಆದರೆ, ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಕೂಡಾ ಬಹಳ ಸುಲಭವಾಗಿ ಮಾಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ತಮ್ಮ ಕೆಲಸಗಳಿಂದ ಜನರನ್ನು ಆಶ್ಚರ್ಯಗೊಳಿಸುತ್ತಾರೆ.
ಇದನ್ನೂ ಓದಿ : ಎರಡು ರಾಶಿಯವರ ಮೇಲಿರಲಿದೆ ಶನೀಶ್ವರನ ಕೃಪೆ, ಸಿಗುವುದು ಹಿಂದೆಂದೂ ಕಾಣದ ಯಶಸ್ಸು
ಮೂಲಾಂಕ 4 ರ ಜನರು ಅಹಂಕಾರಿಗಳಾಗಿರುತ್ತಾರೆ :
ಮೂಲಾಂಕ 4 ರ ಜನರಿಗೆ ಯಾವುದೇ ವಿಷಯದಲ್ಲಿ ಭಯ ಇರುವುದಿಲ್ಲ. ಇವರು ಧೈರ್ಯಶಾಲಿಗಳು. ಆದರೆ ದುರಹಂಕಾರವುಳ್ಳವರೂ ಆಗಿರುತ್ತಾರೆ. ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ. ತಮ್ಮ ಆಯ್ಕೆಯ ಪ್ರಕಾರವೇ ಬದುಕುತ್ತಾರೆ. ಅನೇಕ ಬಾರಿ ಕೆಟ್ಟ ಜನರಿಂದ ಪ್ರಭಾವಿತರಾಗುತ್ತಾರೆ. ಅನೈತಿಕ ಅಥವಾ ತಪ್ಪು ಕೆಲಸಗಳನ್ನು ಮಾಡುತ್ತಾರೆ.
ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ :
ಮೂಲಾಂಕ 4 ರ ಜನರು ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ. ಆದರೂ ಅವರ ಜೀವನದಲ್ಲಿ ಏರಿಳಿತಗಳು ಇರುತ್ತವೆ. ಈ ಜನರು ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಹವ್ಯಾಸಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇದರಿಂದ ಹಲವು ಬಾರಿ ನಷ್ಟವನ್ನೂ ಅನುಭವಿಸುತತ್ತಾರೆ.
ಸಂಬಂಧಗಳಲ್ಲಿ ದುರ್ಬಲರು :
ಮೂಲಾಂಕ 4 ರ ಜನರು ತಮ್ಮ ಕುಟುಂಬಗಳೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ದುರ್ಬಲರಾಗಿರುತ್ತಾರೆ. ಅವರು ತಮ್ಮ ಒಡಹುಟ್ಟಿದವರ ಜೊತೆ ಅಷ್ಟಾಗಿ ಬೆರೆಯುವುದಿಲ್ಲ. ಬದಲಿಗೆ, ಕೆಲವೊಮ್ಮೆ ದೊಡ್ಡ ವಿವಾದ ಮಾಡಿಕೊಳ್ಳುತ್ತಾರೆ. ಮಹಿಳೆಯರ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಆದರೆ ಯಾರೊಂದಿಗೂ ಅವರ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ.
ಇದನ್ನೂ ಓದಿ : Shukra Asta 2022: ಸಿಂಹ ರಾಶಿಯಲ್ಲಿ ಶುಕ್ರ ಅಸ್ತನಗಲಿದ್ದಾನೆ, 4 ರಾಶಿಗಳ ಜನರು ಜಾಗ್ರತೆವಹಿಸಿ
ಮೂಲಾಂಕ 4 ರ ಜನರಿಗೆ 4, 13, 22 ಮತ್ತು 31 ಶುಭ ದಿನ. ಮತ್ತೊಂದೆಡೆ, ನೀಲಿ, ಖಾಕಿ ಮತ್ತು ಕಂದು ಬಣ್ಣಗಳು ಅವರಿಗೆ ಮಂಗಳಕರವಾಗಿವೆ. ಭಾನುವಾರ, ಸೋಮವಾರ, ಶನಿವಾರ ಮತ್ತು ಬುಧವಾರ ಅವರಿಗೆ ಶುಭ ದಿನಗಳು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.