Bhagyonnati Mantra: ಯಾವುದೇ ಓರ್ವ ವ್ಯಕ್ತಿಗೆ ಜೀವನದಲ್ಲಿ ಆತನ ಕರ್ಮಕ್ಕೆ ಅನುಗುಣವಾಗಿ ಫಲಗಳು ಪ್ರಾಪ್ತಿಯಾಗುತ್ತವೆ. ಕೆಲ ಜನರ ಭಾಗ್ಯ ಎಷ್ಟೊಂದು ಬಲವಾಗಿರುತ್ತದೆ ಎಂದರೆ, ಅವರಿಗೆ ಯಾವುದೇ ವಿಶೇಷ ಪರಿಶ್ರಮವಿಲ್ಲದೆಯೇ ಯಶಸ್ಸು ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಕಲೆ ಪರಿಹಾರಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಅವು ಅದೃಷ್ಟವನ್ನು ಬದಲಾಯಿಸಲು ಅಥವಾ ಅದೃಷ್ಟವನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಅಂತಹುದೇ ಒಂದು ಅದ್ಭುತ ಮಂತ್ರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದ್ದು, ಅದು ಅದೃಷ್ಟವನ್ನು ಬೆಳಗಿಸುವ ಕೆಲಸ ಮಾಡುತ್ತದೆ. ಈ ಮಂತ್ರವು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಅದರ ಪಠಣದಿಂದ ಎಲ್ಲಾ ದುಃಖಗಳು ನಿವಾರಣೆಯಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬಂದು ನೆಲೆಸುತ್ತದೆ. ಈ ಮಂತ್ರವನ್ನು ಕ್ರಮಬದ್ಧವಾಗಿ ಪಠಿಸುವುದರಿಂದ, ಅದ್ಭುತ ಸಂಪತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತದೆ. ಈ ಭಾಗ್ಯೋನ್ನತಿ ಮಂತ್ರ ಯಾವುದು ಮತ್ತು ಅದನ್ನು ಪಠಿಸುವ ವಿಧಾನ ಯಾವುದು ತಿಳಿಯೋಣ ಬನ್ನಿ,
ಭಾಗ್ಯೋನ್ನತಿ ಮಂತ್ರ ಮತ್ತು ಅದರ ಪಠಣ ವಿಧಾನ
ಮುಚ್ಚಿದ ಅದೃಷ್ಟದ ಬಾಗಿಲು ತೆರೆಯುವಲ್ಲಿ ಭಾಗ್ಯೋನ್ನತಿ ಮಂತ್ರವು ಅತ್ಯಂತ ಪರಿಣಾಮಕಾರಿ ಮಂತ್ರ ಸಾಬೀತಾಗುತ್ತದೆ. ಇದು ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಸರಿಪಡಿಸುತ್ತದೆ ಮತ್ತು ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. ಈ ಭಾಗ್ಯೋನ್ನತಿ ಮಂತ್ರ ಈ ಕೆಳಗಿನಂತಿದೆ,
ಓಂ ಶ್ರೀಂ ಭಾಗ್ಯೋದಯಂ ಕುರು ಕುರು ಶ್ರೀ ಐಂ ಫಟ್ ।
ಇದನ್ನೂ ಓದಿ-Swapna Shastra: ಕನಸಿನಲ್ಲಿ ಹಲ್ಲಿ ಕಾಣಿಸಿಕೊಂಡರೆ ಶುಭವೋ? ಅಶುಭವೋ!!
ಈ ಮಂತ್ರವು ತುಂಬಾ ಶಕ್ತಿಶಾಲಿ ಮಂತ್ರವಾಗಿದೆ ಮತ್ತು ಅದ್ಭುತ ಪರಿಣಾಮಗಳನ್ನು ನೀಡುತ್ತದೆ. ಆದರೆ ಇದನ್ನು ಪಠಿಸಲು ಸರಿಯಾದ ವಿಧಾನವೊಂದನ್ನು ಕೂಡ ಸೂಚಿಸಲಾಗಿದೆ. ಈ ಮಂತ್ರವನ್ನು ಸರಿಯಾಗಿ ಜಪಿಸದಿದ್ದರೆ ಅದು ವ್ಯರ್ಥವಾಗುತ್ತದೆ. ಮಲಗುವ ಮುನ್ನ ಈ ಮಂತ್ರವನ್ನು ಯಾವಾಗಲೂ ಪಠಿಸಬೇಕು. ಈ ಮಂತ್ರವನ್ನು ಕನಿಷ್ಠ 11 ಬಾರಿ ಪಠಿಸಿ. ನಿಮ್ಮ ಇಚ್ಛೆಗೆ ಅನುಗುಣವಾಗಿ ನೀವು ಇದನ್ನು 21 ಅಥವಾ 51 ಬಾರಿ ಪಠಿಸಬಹುದು. ಈ ಭಾಗ್ಯೋನ್ನತಿ ಮಂತ್ರವನ್ನು 21 ದಿನಗಳ ಕಾಲ ನಿರಂತರವಾಗಿ ಜಪಿಸಬೇಕು. ಈ ಮಂತ್ರವನ್ನು ಪಠಿಸುವ ಮೊದಲು ನಿಮ್ಮ ಕೈ ಕಾಲುಗಳನ್ನು ತೊಳೆಯಿರಿ. ಈ ಮಂತ್ರವನ್ನು ಪಠಿಸಿದ ನಂತರ, ದೇವರಿಗೆ ನಮಸ್ಕರಿಸಿ.
ಇದನ್ನೂ ಓದಿ-Relationship Tips: ಸಂಬಂಧ ಬೆಳೆಸುವ ಮೊದಲು ಜೋಡಿ ಆರೋಗ್ಯಕ್ಕೆ ಸಂಬಂಧಿಸಿ ಈ ಪರೀಕ್ಷೆ ನಡೆಸಲೇಬೇಕು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.