ಈ ಐದು ಸಮಸ್ಯೆಗಳಿರುವವರು ಪಪ್ಪಾಯ ಹಣ್ಣಿನಿಂದ ದೂರವಿರಬೇಕು
ಪಪ್ಪಾಯಿಯನ್ನು ಜೀರ್ಣಕಾರಿ ಕಾಯಿಲೆಗಳಿಗೆ ರಾಮಬಾಣ ಎಂದು ಹೇಳಲಾಗಿದ್ದರೂ, ಈ ಹಣ್ಣು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವೊಂದು ಸಮಸ್ಯೆಗಳಿರುವವರು ಈ ಹಣ್ಣನ್ನು ತಿನ್ನಬಾರದು.
ಬೆಂಗಳೂರು : ಪಪ್ಪಾಯಿಯು ಭಾರತದಲ್ಲಿ ವ್ಯಾಪಕವಾಗಿ ತಿನ್ನುವ ಮತ್ತು ಇಷ್ಟಪಡುವ ಹಣ್ಣಾಗಿದೆ. ಈ ಹಣ್ಣಿನ ನಿಯಮಿತ ಸೇವನೆಯನ್ನು ಆರೋಗ್ಯ ತಜ್ಞರು ಸಹ ಶಿಫಾರಸು ಮಾಡುತ್ತಾರೆ. ಆದರೆ ಅದನ್ನು ಅತಿಯಾಗಿ ಸೇವಿಸಿದರೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಬದಲು ಹಾನಿಕಾರಕವಾಗಲಿದೆ. ಕೆಲವು ರೋಗದಿಂದ ಬಳಲುತ್ತಿರುವವರು ಈ ಹಣ್ಣಿನಿಂದ ದೂರವಿರುವಂತೆ ಸಲಹೆ ನೀಡಲಾಗುತ್ತದೆ. ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ ಸಿ ಯಂತಹ ಸಮೃದ್ಧ ಪೋಷಕಾಂಶಗಳಿರುತ್ತವೆ. ಆದರೂ ಈ ಹಣ್ಣು ಕೆಲವು ಸಮಸ್ಯೆಗಳಿದ್ದವರಿಗೆ ಹಾನಿಕಾರಕವಾಗಿರುತ್ತದೆ.
ಈ ಜನರು ಪಪ್ಪಾಯಿ ತಿನ್ನಬಾರದು :
1. ಕಿಡ್ನಿ ಸ್ಟೋನ್ ರೋಗಿಗಳು :
ಪಪ್ಪಾಯವು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶವನ್ನು ಕ್ಯಾಲ್ಸಿಯಂನೊಂದಿಗೆ ಬೆರೆಸಿದರೆ, ಅದು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬಾರದು.
2. ಈ ರೀತಿಯ ಔಷಧಿಯನ್ನು ತೆಗೆದುಕೊಳ್ಳುವವರು :
ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಪಪ್ಪಾಯಿಯು ಹಾನಿಕಾರಕವಾಗಿ ಪರಿಣಮಿಸಬಹುದು. ರಕ್ತ ಪರಿಚಲನೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಈ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಇಂಥಹ ರೋಗಿಗಳು ಪಪ್ಪಾಯ ಹಣ್ಣನ್ನು ಸೇವಿಸಿದರೆ, ತೊಂದರೆ ಎದುರಾಗಬಹುದು. ಇವರಿಗೆ ಗಾಯವಾದಾಗ ರಕ್ತಡ ಹರಿವನ್ನು ನಿಲ್ಲಿಸುವುದು ಕಷ್ಟವಾಗುತ್ತದೆ.
ಇದನ್ನೂ ಓದಿ : Diabetes: ಸಕ್ಕರೆ ಕಾಯಿಲೆಯಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗಬಹುದು
3. ಅಸ್ತಮಾ ರೋಗಿಗಳು :
ಉಸಿರಾಟದ ತೊಂದರೆ ಇದ್ದರೆ, ಪಪ್ಪಾಯಿಯಿಂದ ದೂರವಿರುವುದು ಒಳ್ಳೆಯದು. ಈ ಹಣ್ಣಿನಲ್ಲಿರುವ ಕಿಣ್ವಗಳು ಅಸ್ತಮಾ ರೋಗಿಗಳಿಗೆ ಹಾನಿಕಾರಕವಾಗಿರುತ್ತದೆ.
4. ಗರ್ಭಿಣಿಯರು:
ಅನೇಕ ಆರೋಗ್ಯ ತಜ್ಞರ ಪ್ರಕಾರ, ಗರ್ಭಿಣಿಯರು ಪಪ್ಪಾಯಿಯನ್ನು ತಿನ್ನಬಾರದು. ಈ ಹಣ್ಣು ಗರ್ಭಿಣಿಯರಿಗೆ ಹಾನಿಕಾರಕ ಎಂದು ಹೇಳಲಾಗಿದೆ.
5. ಅಲರ್ಜಿ ಹೊಂದಿರುವವರು :
ಅಲರ್ಜಿಯಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪಪ್ಪಾಯಿಯನ್ನು ತಿನ್ನಬಾರದು. ಅದರಲ್ಲಿರುವ ಪಪೈನ್ ಅಂಶಗಳು ಸಮಸ್ಯೆಯನ್ನು ಹೆಚ್ಚಿಸಬಹುದು ಮತ್ತು ನಿಮಗೆ ಚರ್ಮದಲ್ಲಿ ತುರಿಕೆ ಅಥವಾ ಉರಿ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ : Cholesterol Lowering Diet: ಈ ಡ್ರೈ ಫ್ರೂಟ್ ತಿಂದರೆ ಹೆಚ್ಚಾಗುವುದಿಲ್ಲ ಕೊಲೆಸ್ಟ್ರಾಲ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.