ಕಣ್ಣುಗಳೇ ಹೇಳುತ್ತದೆ ನಿಮ್ಮ ಅದೃಷ್ಟ , ಹೀಗಿದೆಯೇ ನಿಮ್ಮ ಅಕ್ಷಿ ಒಮ್ಮೆ ನೋಡಿಕೊಳ್ಳಿ
ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯ ಹೇಗಿದೆ ಎನ್ನುವುದನ್ನು ಕಣ್ಣುಗಳ ವಿನ್ಯಾಸದಿಂದಲೇ ತಿಳಿದುಕೊಳ್ಳಬಹುದು.
ನವದೆಹಲಿ : ಸಮುದ್ರ ಋಷಿ ಬರೆದಿರುವ ಸಾಮುದ್ರಿಕ ಶಾಸ್ತ್ರದಲ್ಲಿ (Samudrik Shastra) ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಆತನ ದೇಹದ ರಚನೆಯ ಆಧಾರದ ಮೇಲೆ ಹೇಳಲಾಗಿದೆ. ಇದರಲ್ಲಿ ದೇಹದ ವಿವಿಧ ಭಾಗಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ ಕಣ್ಣುಗಳೂ ಸೇರಿವೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯ ಹೇಗಿದೆ ಎನ್ನುವುದನ್ನು ಕಣ್ಣುಗಳ ವಿನ್ಯಾಸದಿಂದಲೇ ತಿಳಿದುಕೊಳ್ಳಬಹುದು.
ನಿಮ್ಮ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು ಭವಿಷ್ಯ :
ಸಮುದ್ರಶಾಸ್ತ್ರದ ಪ್ರಕಾರ, ಯಾರ ಕಣ್ಣುಗಳು ಕಡಿಮೆ ತೆರೆದಿರುತ್ತವೆಯೋ ಅಂತಹ ಜನರು ತುಂಬಾ ಕರುಣಾಮಯಿಯಾಗಿರುತ್ತಾರೆ ( Know Future By Eyes). ಅವರು ಎಂದಿಗೂ ಯಾರ ಹೃದಯವನ್ನು ನೋಯಿಸುವುದಿಲ್ಲ. ಸದಾ ಇನ್ನೊಬ್ಬರ ಸಂತೋಷವನ್ನು ಬಯಸುತ್ತಾರೆ. ಈ ಜನರು ಬಹಳ ಭಾವನಾತ್ಮಕವಾಗಿರುತ್ತಾರೆ. ಹಾಗೆಯೇ ಬುದ್ಧಿವಂತರಾಗಿರುತ್ತಾರೆ.
ಇದನ್ನೂ ಓದಿ : ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಇಂಥಹ ಕನಸುಗಳು
ದಪ್ಪ ಕಣ್ಣುಗಳನ್ನು (Eye shape) ಹೊಂದಿರುವವರು ಕಡಿಮೆ ಭಾವನಾತ್ಮಕವಾಗಿರುತ್ತಾರೆ. ಈ ಜನರು ಯಾವಾಗಲೂ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಸಾಮಾನ್ಯವಾಗಿ ಅವರು ವ್ಯಾಪಾರದಲ್ಲಿ ಬಹಳಷ್ಟು ಹಣವನ್ನು ಗಳಿಸುತ್ತಾರೆ.
ಇನ್ನು ಸಣ್ಣ ಕಣ್ಣುಗಳನ್ನು ಹೊಂದಿರುವವರು, ಜೀವನದಲ್ಲಿ ಸಾಕಷ್ಟು ಹೋರಾಟ ಮಾಡುತ್ತಾರೆ. ಈ ಜನರು ಕಡಿಮೆ ಶಿಕ್ಷಣವನ್ನು ಪಡೆಯುತ್ತಾರೆ (Personality By Eye).
ಕಮಲದಂತಹ ಸುಂದರವಾದ ಕಣ್ಣುಗಳನ್ನು ಹೊಂದಿರುವವರು ತುಂಬಾ ಅದೃಷ್ಟವಂತರಾಗಿರುತ್ತಾರೆ (Most Lucky People). ಅವರ ಬಳಿ ಸಾಕಷ್ಟು ಸಂಪತ್ತು ಇರುತ್ತದೆ. ಇದರೊಂದಿಗೆ ಅವರಿಗೆ ಜೀವನದಲ್ಲಿ ಗೌರವವೂ ಸಿಗುತ್ತದೆ.
ಇದನ್ನೂ ಓದಿ : Garuda Purana: ಗರುಡ ಪುರಾಣದ ಪ್ರಕಾರ ಇವು ಅತ್ಯಂತ ಅಪಾಯಕಾರಿ 'ತಪ್ಪುಗಳು'
ಯಾರ ಕಣ್ಣುಗಳು ಹಿಂಭಾಗದಿಂದ ಮೇಲಕ್ಕೆ ಎತ್ತಲ್ಪಟ್ಟಿವೆಯೋ ಅಂತಹ ಜನರು ಬುದ್ಧಿವಂತಿಕೆಯ ವಿಷಯದಲ್ಲಿ ಅಷ್ಟಕಷ್ಟೇ. ಆದರೆ, ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಇವರು ಬಹಳಷ್ಟು ಉತ್ತಮರು. ಇವರು ಸದಾ ಸಂತೋಷವಾಗಿರುತ್ತಾರೆ.
ಕಣ್ಣುಗಳಲ್ಲಿ ಕೆಂಪು ಎಳೆಗಳನ್ನು ಹೊಂದಿರುವ ಜನರು, ಕಾಮುಕ ಸ್ವಭಾವದವರಾಗಿರುತ್ತಾರೆ. ಇಂತಹ ಜನರು ಸುಖ ಭೋಗಿಗಳು. ಇವರು ಜೀವನದಲ್ಲಿ ಯಾವುದೇ ವಿಶೇಷ ಉದ್ದೇಶವನ್ನು ಹೊಂದಿರುವುದಿಲ್ಲ. ಈ ಜನರನ್ನು ನಂಬುವ ಮೊದಲು ಒಮ್ಮೆ ಯೋಚಿಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.