ಬೆಂಗಳೂರು : ಜ್ಯೋತಿಷ್ಯದಂತೆಯೇ, ಸಂಖ್ಯಾಶಾಸ್ತ್ರವು ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ಅವನ ಆರ್ಥಿಕ ಸ್ಥಿತಿಗಳ ಬಗ್ಗೆ ಸುಳಿವು ನೀಡುತ್ತದೆ. ಯಾವುದೇ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ, ಸಂಖ್ಯಾಶಾಸ್ತ್ರವು ವ್ಯಕ್ತಿಯ ಸ್ವಭಾವಗಳನ್ನು ಲೆಕ್ಕ ಹಾಕಲಾಗುತ್ತದೆ. ಹುಟ್ಟಿದ ದಿನಾಂಕದ ಮೊತ್ತವನ್ನು ಮೂಲಾಂಕ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು 13 ರಂದು ಜನಿಸಿದರೆ, ಅವನ ರಾಡಿಕ್ಸ್  ಅಥವಾ ಮೂಲಾಂಕ 4 ಆಗಿರುತ್ತದೆ. 


COMMERCIAL BREAK
SCROLL TO CONTINUE READING

 ಇಂದು ನಾವು ರಾಡಿಕ್ಸ್ 7 ರ ಜನರ ಬಗ್ಗೆ ತಿಳಿಸಲಿದ್ದೇವೆ. ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 7 ಅನ್ನು ಹೊಂದಿರುತ್ತಾರೆ. ಇವರ ಮೇಲೆ ಕುಬೇರನ ಆಶೀರ್ವಾದ ಹೆಚ್ಚಿರುತ್ತದೆ. ಕುಬೇರನ ಕೃಪೆಯಿಂದ ಅವರ ಬಳಿ ಯಾವತ್ತೂ ಹಣದ ಕೊರತೆಯಾಗುವುದಿಲ್ಲ. 


ಇದನ್ನೂ ಓದಿ :  Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಯಿದೆಯೇ? ಹಾಗಾದ್ರೆ ನಿಮ್ಮ ಬಳಿ ಆಗಮಿಸಲಿದೆ ಅದೃಷ್ಟ!


ರಾಡಿಕ್ಸ್ 7 ರ ಗುಣಲಕ್ಷಣಗಳು :  
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 7 ಹೊಂದಿರುವ ಜನರು ಅದೃಷ್ಟದಿಂದ  ಶ್ರೀಮಂತರಾಗುತ್ತಾರೆ. ಈ ಜನರು ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು  ಪಡೆಯುತ್ತಾರೆ. ಇವರು ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಷ್ಟಪಡಬೇಕಾಗಿಲ್ಲ. ಆದರೂ ಇವರು ಯಾವುದಾದರೂ ಕೆಲಸವನ್ನು ಆರಂಭಿಸಿದರೆ ಅದನ್ನು ಪೂರ್ಣಗೊಲಿಸುವವರೆಗೆ ಸುಮ್ಮನಿರುವುದಿಲ್ಲ. 


ಈ ಜನರು ಬಹಳ ಸುಲಭವಾಗಿ ಯಶಸ್ಸನ್ನು ಪಡೆಯುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಅವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಯಾರ ನಿರ್ಬಂಧವನ್ನೂ ಅವರು ಇಷ್ಟಪಡುವುದಿಲ್ಲ. ಒತ್ತಡದಲ್ಲಿ ಬದುಕಲು ಇಷ್ಟಪಡುವುದಿಲ್ಲ. 


ಇದನ್ನೂ ಓದಿ : ಈ ಸಸ್ಯಗಳನ್ನು ಮನೆಯ ಮುಂಭಾಗದಲ್ಲಿ ನೆಟ್ಟರೆ ಮನೆಯಲ್ಲಿ ತುಂಬಿ ತುಳುಕುವುದಂತೆ ಅಷ್ಟೈಶ್ವರ್ಯ


ಕುಟುಂಬಕ್ಕೆ ಅದೃಷ್ಟ :
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ ಏಳರ ಜನರು ಕುಟುಂಬ ಸದಸ್ಯರ ಪಾಲಿಗೂ ಅದೃಷ್ಟವಂತರಾಗಿರುತ್ತಾರೆ. ಇವರ ಜನನದ ನಂತರ, ಕುಟುಂಬದ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇವರು  ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಅವರಲ್ಲಿದೆ.  


 



ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.