ಈ ಸಸ್ಯಗಳನ್ನು ಮನೆಯ ಮುಂಭಾಗದಲ್ಲಿ ನೆಟ್ಟರೆ ಮನೆಯಲ್ಲಿ ತುಂಬಿ ತುಳುಕುವುದಂತೆ ಅಷ್ಟೈಶ್ವರ್ಯ

ಲಕ್ಷ್ಮೀಯ  ಆಶೀರ್ವಾದ ಯಾರ ಮೇಲಿರುತ್ತದೆಯೋ, ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನಿರಂತರವಾಗಿ  ನೆಲೆಯಾಗಿರುತ್ತದೆ. ಮನೆಯ ಸದಸ್ಯರೆಲ್ಲರ ಕೀರ್ತಿಯೂ ಹೆಚ್ಚುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಧನಾತ್ಮಕ ಶಕ್ತಿ ಹರಡುತ್ತದೆ. 

Written by - Ranjitha R K | Last Updated : Sep 16, 2022, 08:41 AM IST
  • ವಿಜ್ಞಾನದಲ್ಲಿ ಗಿಡ ಮರಗಳ ಅನೇಕ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ
  • ವಾಸ್ತು ಶಾಸ್ತ್ರದಲ್ಲಿಯೂ ಆ ಸಸ್ಯಗಳಿಗೆ ವಿಶೇಷ ಸ್ಥಾನವಿದೆ
  • ಮನೆಯ ಉದ್ಯಾನ ಯಾವ ದಿಕ್ಕಿನಲ್ಲಿರಬೇಕು ?
 ಈ ಸಸ್ಯಗಳನ್ನು ಮನೆಯ ಮುಂಭಾಗದಲ್ಲಿ ನೆಟ್ಟರೆ ಮನೆಯಲ್ಲಿ ತುಂಬಿ ತುಳುಕುವುದಂತೆ ಅಷ್ಟೈಶ್ವರ್ಯ  title=
plants according to vastu (file photo)

ಬೆಂಗಳೂರು : ಮನೆಯ ಮುಂದೆ ಮರ ಮತ್ತು ಗಿಡಗಳಿದ್ದರೆ, ಮನೆಯ ಪರಿಸರವು ಸ್ವಚ್ಛವಾಗಿರುತ್ತದೆ. ಮರಗಳು ಮತ್ತು ಸಸ್ಯಗಳು ಶುದ್ಧ ಗಾಳಿಯ ಮೂಲ ಎಂದು ಎನ್ನುವುದನ್ನು ವಿಜ್ಞಾನ ಹೇಳಿದೆ. ವಿಜ್ಞಾನದಲ್ಲಿ ಗಿಡ ಮರಗಳ ಅನೇಕ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ. ಆದರೆ, ವಾಸ್ತು ಶಾಸ್ತ್ರದಲ್ಲಿಯೂ ಆ ಸಸ್ಯಗಳಿಗೆ ವಿಶೇಷ ಸ್ಥಾನವಿದೆ.  ವಾಸ್ತು ಪ್ರಕಾರ, ಉದ್ಯಾನ ಮತ್ತು ಅದರಲ್ಲಿ ನೆಡುವ ಗಿಡ ಮರಗಳಿಗೆ ಕೆಲವು ಪ್ರಮುಖ ನಿಯಮಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ತಾಯಿ ಲಕ್ಷ್ಮಿಯ ಆಶೀರ್ವಾದ ಮನೆಯವರ  ಮೇಲಿರುತ್ತದೆ.  ಲಕ್ಷ್ಮೀಯ  ಆಶೀರ್ವಾದ ಯಾರ ಮೇಲಿರುತ್ತದೆಯೋ, ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನಿರಂತರವಾಗಿ  ನೆಲೆಯಾಗಿರುತ್ತದೆ. ಮನೆಯ ಸದಸ್ಯರೆಲ್ಲರ ಕೀರ್ತಿಯೂ ಹೆಚ್ಚುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಧನಾತ್ಮಕ ಶಕ್ತಿ ಹರಡುತ್ತದೆ. 

ಮನೆಯ ಉದ್ಯಾನ ಯಾವ ದಿಕ್ಕಿನಲ್ಲಿರಬೇಕು ? :
ವಾಸ್ತು ತಜ್ಞರ ಪ್ರಕಾರ ಮನೆಯ ತೋಟದ ಪೂರ್ವ ದಿಕ್ಕಿನಲ್ಲಿ ಹಣ್ಣಿನ ಮರವನ್ನು ನೆಡುವುದು ಒಳ್ಳೆಯದು. ಇದು ಅತ್ಯಂತ ಮಂಗಳಕರವಾಗಿರುತ್ತದೆ ಎಂದು ಹೇಳಲಾಗಿದೆ. ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣದ  ಹೂವಿನ ಕುಂಡಗಳನ್ನು ಇಡಬೇಕು. ಮನೆಯ ಉತ್ತರ ಭಾಗದಲ್ಲಿ ಉದ್ಯಾನವನವಿದ್ದರೆ ಅದು ಕೂಡಾ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಈ ದಿಕ್ಕಿನಲ್ಲಿ ಉದ್ಯಾನವನ್ನು ಹೊಂದಿರುವುದು ವೃತ್ತಿ ಬೆಳವಣಿಗೆಗೆ ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ : Vastu Tips : ಮನೆಯಲ್ಲಿ ಆರ್ಥಿಕ ಸಮಸ್ಯೆಗಳೆ, ಈ ಪರಿಹಾರ ಅನುಸರಿಸಿ, ನಿಮ್ಮ ಅದೃಷ್ಟ ತೆರೆದುಕೊಳ್ಳುತ್ತದೆ!

ಯಾವ ದಿಕ್ಕಿನಲ್ಲಿ ಯಾವ ಗಿಡಗಳನ್ನು ನೆಡಬೇಕು? :
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಉತ್ತರ ಭಾಗದಲ್ಲಿ ನೆಡಬೇಕು. ತುಳಸಿ ಸಸ್ಯವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಯಾರ ಮೇಲೆ ಶ್ರೀ ಹರಿವಿಷ್ಣುವಿನ ಆಶೀರ್ವಾದವಿರುತ್ತದೆಯೋ ಅವರನ್ನು ಲಕ್ಷ್ಮೀ ಕೂಡಾ ಹರಸುತ್ತಾಳೆ. ಇದಲ್ಲದೆ, ವಾಸ್ತು ಶಾಸ್ತ್ರದಲ್ಲಿ, ಬಿಲ್ವ ಪತ್ರೆಗೂ ವಿಶೇಷ ಮಹತ್ವವಿದೆ. ಇದನ್ನು ವಾಯುವ್ಯ ದಿಕ್ಕಿನಲ್ಲಿ ನೆಟ್ಟರೆ ಮನೆಯಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲವಂತೆ. ಇನ್ನು ಮನೆಮಂದಿ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ, ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಪಾರಿಜಾತದ ಗಿಡವನ್ನು ನೆಡಬೇಕು. ಯಾವಾ ಮನೆಯಲ್ಲಿ ಪಾರಿಜಾತದ ಗಿಡವಿರುತ್ತದೆಯೋ ಆ ಮನೆಯವರ ಮೇಲೆ ಲಕ್ಷ್ಮೀಯ ಆಶೀರ್ವಾದ ಕೂಡಾ ಹೆಚ್ಚಾಗಿರುತ್ತದೆ ಎನ್ನಲಾಗಿದೆ.   

ಇದನ್ನೂ ಓದಿ :  ಶುಕ್ರ ಬುಧನ ಸಂಯೋಗದಿಂದ ರೂಪುಗೊಳ್ಳುವುದು ಲಕ್ಷ್ಮೀ ನಾರಾಯಣ ಯೋಗ, ಈ ರಾಶಿಯವರಿಗೆ ಭಾಗ್ಯೋದಯ

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News