ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳ ಸ್ವಭಾವ ವಿಭಿನ್ನವಾಗಿರುತ್ತದೆ.  ಎಲ್ಲಾ ರಾಶಿಚಕ್ರ ಚಿಹ್ನೆಗಳನ್ನು(Zodiac sign) 9 ಗ್ರಹಗಳು ಆಳುತ್ತವೆ. ಈ ಗ್ರಹಗಳು ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯ ಕೆಲಸದ ಶೈಲಿ, ಸ್ವಭಾವ, ಪಾತ್ರ ಮತ್ತು ಕಾರ್ಯವು ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅವರು ಹೆಚ್ಚು ಹಣವನ್ನು ಖರ್ಚು ಮಾಡುವಂತಹ ಜೀವನಶೈಲಿಯನ್ನು (Luxurius lifestyle) ಬದುಕಲು ಇಷ್ಟಪಡುತ್ತಾರೆ. ಅತಿರಂಜಿತ ಸ್ವಭಾವದಿಂದಾಗಿ, ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಅವರ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿರುವುದಿಲ್ಲ.  


COMMERCIAL BREAK
SCROLL TO CONTINUE READING

ಮಿಥುನ ರಾಶಿ (Gemini) :
ಮಿಥುನ ರಾಶಿಯನ್ನು (Gemini)  ಬುಧ ಗ್ರಹ (Mercury) ಆಳುತ್ತದೆ. ಬುಧ ಗ್ರಹದ ಪ್ರಭಾವದಿಂದ ಈ ರಾಶಿಯ ಜನರು ಬುದ್ಧಿವಂತರಷ್ಟೇ ಅಲ್ಲ, ಹಣ ಖರ್ಚು ಮಾಡುವುದರಲ್ಲಿಯೂ  ಮುಂದಿರುತ್ತಾರೆ.  ಅವರು ತಮ್ಮ ಜೀವನಶೈಲಿ (Lifestyle) ಮತ್ತು ಆಹಾರಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಇವರ ಕೈಯಲ್ಲಿರುವ ಹಣವನ್ನು ಖರ್ಚು ಮಾಡಲು ಇವರು ಮುಂದೆ ಹಿಂದೆ ಯೋಚನೆ ಮಾಡುವುದೇ ಇಲ್ಲ. 


ಇದನ್ನೂ ಓದಿ : Astrology: ಐಷಾರಾಮಿ ಜೀವನ ನಡೆಸುತ್ತಾರೆ ಈ 4 ರಾಶಿಯ ಹುಡುಗಿಯರು


ಸಿಂಹ (Leo) :
ಸಿಂಹ ರಾಶಿಯ ಅಧಿಪತಿ ಸೂರ್ಯ (Sun). ಈ ರಾಶಿಚಕ್ರದ ಜನರು ರಾಜ ಐಶ್ವರ್ಯದಲ್ಲಿ ಬದುಕು ಸಾಗಿಸಲು ಇಷ್ಟಪಡುತ್ತಾರೆ. ಇದರಿಂದಾಗಿ ಅವರು ಸಾಕಷ್ಟು ಖರ್ಚು ಮಾಡುತ್ತಾರೆ. ಕೆಲವೊಮ್ಮೆ ಅವರ ಈ ಅಭ್ಯಾಸದಿಂದಾಗಿ ಸಾಲವನ್ನು ಕೂಡಾ ಮಾಡುವಂತಾಗುತ್ತದೆ. 


ತುಲಾ ರಾಶಿ (Libra) :
ತುಲಾ ರಾಶಿಯ  ಅಧಿಪತಿ ಶುಕ್ರ (Venus).  ಈ ರಾಶಿಯವರಿಗೆ ಸಾಕಷ್ಟು ಹಣ ಸಿಗುತ್ತದೆ. ಬೆಲೆಬಾಳುವ ವಸ್ತುಗಳ ಮೇಲಿನ ಒಲವಿನ ಕಾರಣ, ಅವರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ ಕೂಡಾ. ಈ ರಾಶಿಯ (Libra) ಜನರು ಹಣವನ್ನು ಖರ್ಚು ಮಾಡುವ ವಿಷಯದಲ್ಲಿ ನಂಬರ್ ಒನ್ ಆಗಿರುತ್ತಾರೆ. ತಮ್ಮ ದುಬಾರಿ ಸ್ವಭಾವದ ಕಾರಣ, ಈ ರಾಶಿಯವರ ಕೈಯಲ್ಲಿ ಹಣ ಉಳಿಯುವುದು ಕಷ್ಟ. ಕೆಲವೊಮ್ಮೆ ಆರ್ಥಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. 


ಇದನ್ನೂ ಓದಿ : Phalguna Masa: ಫಾಲ್ಗುಣ ಮಾಸದಲ್ಲಿ ಕೃಷ್ಣನನ್ನು ಈ ರೀತಿ ಪೂಜಿಸಿದರೆ ಸಕಲ ಸಂತೋಷ ಪ್ರಾಪ್ತಿ


ವೃಶ್ಚಿಕ ರಾಶಿ (Scorpio) :
ವೃಶ್ಚಿಕ ರಾಶಿಯ ಅಧಿಪತಿ ಮಂಗಳ (Mars). ಮಂಗಳ ಗ್ರಹದ ಪ್ರಭಾವದಿಂದ ಈ ರಾಶಿಯ ಜನರು ಹಣ ಖರ್ಚು ಮಾಡುವ ವಿಷಯದಲ್ಲಿ ಇತರರಿಗಿಂತ ಮುಂದಿರುತ್ತಾರೆ. ಅವರು ತಮ್ಮ ಜೀವನಶೈಲಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಯಾವುದನ್ನು ಲೆಕ್ಕಿಸದೆ ಮುಕ್ತವಾಗಿ ಖರ್ಚು ಮಾಡುತ್ತಾರೆ. ಖರ್ಚಿನ ವಿಚಾರದಲ್ಲಿ ಅವರು ಹಿಂದೆ ಸರಿಯುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.