Phalguna Masa: ಫಾಲ್ಗುಣ ಮಾಸದಲ್ಲಿ ಕೃಷ್ಣನನ್ನು ಈ ರೀತಿ ಪೂಜಿಸಿದರೆ ಸಕಲ ಸಂತೋಷ ಪ್ರಾಪ್ತಿ

Phalguna Masa: ಹೋಳಿ ಹಬ್ಬವನ್ನು ಫಾಲ್ಗುಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ತಿಂಗಳು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ತಿಂಗಳು ಪೂರ್ತಿ ಶ್ರೀಕೃಷ್ಣನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸಕಲ ಸುಖ ಸಿಗುತ್ತದೆ.

Written by - Yashaswini V | Last Updated : Feb 17, 2022, 08:02 AM IST
  • ಫಾಲ್ಗುಣ ಮಾಸವು ಶ್ರೀ ಕೃಷ್ಣನಿಗೆ ಸಮರ್ಪಿತವಾಗಿದೆ
  • ಕೃಷ್ಣನ ಆರಾಧನೆಗೆ ಫಾಲ್ಗುಣ ಮಾಸ ತುಂಬಾ ಶ್ರೇಷ್ಠ
  • ಫಾಲ್ಗುಣ ಮಾಸದಲ್ಲಿ ಶ್ರೀ ಕೃಷ್ಣನನ್ನು ಹೇಗೆ ಪೂಜಿಸಬೇಕು ಎಂದು ತಿಳಿಯಿರಿ
Phalguna Masa: ಫಾಲ್ಗುಣ ಮಾಸದಲ್ಲಿ ಕೃಷ್ಣನನ್ನು ಈ ರೀತಿ ಪೂಜಿಸಿದರೆ ಸಕಲ ಸಂತೋಷ ಪ್ರಾಪ್ತಿ title=
Phalguna Masa puja vidhi

Phalguna Masa: ಫಾಲ್ಗುಣ ಮಾಸವು ಶ್ರೀ ಕೃಷ್ಣನಿಗೆ ಸಮರ್ಪಿತವಾಗಿದೆ. ಈ ಮಾಸದಲ್ಲಿ ಶ್ರೀಕೃಷ್ಣ ಮತ್ತು ರುಕ್ಮಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ತಿಂಗಳಲ್ಲಿ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಮೂರು ರೂಪಗಳನ್ನು ಪೂಜಿಸಬೇಕು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಎಲ್ಲ ಸುಖ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಫಾಲ್ಗುಣ ಮಾಸದಲ್ಲಿ ಶ್ರೀ ಕೃಷ್ಣನನ್ನು ಹೇಗೆ ಪೂಜಿಸಬೇಕು?
ಫಾಲ್ಗುಣ ಮಾಸದಲ್ಲಿ ಶ್ರೀಕೃಷ್ಣನ (Lord Krishna) ಮೂರು ರೂಪಗಳನ್ನೂ ಪೂಜಿಸುವುದರಿಂದ ಜೀವನದಲ್ಲಿ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಮಕ್ಕಳನ್ನು ಹೊಂದಲು ಬಯಸುವವರು ಬಾಲಕೃಷ್ಣ ದೇವರನ್ನು ಅಂದರೆ ಲಡ್ಡು ಗೋಪಾಲನ ರೂಪವನ್ನು ಪೂಜಿಸಬೇಕು. ಮತ್ತೊಂದೆಡೆ, ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರೀತಿಯನ್ನು ಪಡೆಯಲು ರಾಧಾ-ಕೃಷ್ಣರನ್ನು ಆರಾಧಿಸಿ. ಜ್ಞಾನ, ಕಲಿಕೆ ಮತ್ತು ಪ್ರಗತಿಯನ್ನು ಬಯಸುವ ಜನರು ಶ್ರೀಕೃಷ್ಣನನ್ನು ತಮ್ಮ ಗುರು ಎಂದು ಪೂಜಿಸಬೇಕು. 

ಇದನ್ನೂ ಓದಿ- ಈ ವಿಷಯದಲ್ಲಿ ನೀವು ಮಾಡುವ ಒಂದು ಸಣ್ಣ ತಪ್ಪು ಜೀವನಪೂರ್ತಿ ನೋವು ನೀಡಬಹುದು

ಫಾಲ್ಗುಣ ಮಾಸದಲ್ಲಿ ಈ ನಿಯಮಗಳನ್ನು ಅನುಸರಿಸಿ:
>> ಫಾಲ್ಗುಣ ಮಾಸದಲ್ಲಿ (Phalguna Masa) ಸಾಮಾನ್ಯ ನೀರಿನಿಂದ ಸ್ನಾನ ಮಾಡಿ. ಈ ಮಾಸದಲ್ಲಿ ಸ್ನಾನಕ್ಕೆ ಬಿಸಿನೀರನ್ನು ಬಳಸಬೇಡಿ. 
>> ಪ್ರತಿದಿನ ಶ್ರೀಕೃಷ್ಣನ ಆರಾಧನೆ ಮಾಡಿ. 
>> ಆಹಾರದಲ್ಲಿ ಕಡಿಮೆ ಧಾನ್ಯಗಳು ಮತ್ತು ಹೆಚ್ಚು ಹಣ್ಣುಗಳನ್ನು ಸೇವಿಸಿ. ಇದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ವರ್ಷವಿಡೀ ರೋಗಗಳು ನಿಮ್ಮನ್ನು ಕಾಡುವುದಿಲ್ಲ. 
>> ಈ ಪವಿತ್ರ ತಿಂಗಳು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ತಿಂಗಳು ತಪ್ಪಾಗಿ ಆಲ್ಕೋಹಾಲ್ ಮತ್ತು ಮಾಂಸಾಹಾರ ಸೇವಿಸಬೇಡಿ. 

ಇದನ್ನೂ ಓದಿ- Mangal Gochar 2022: ಶನಿಯ ರಾಶಿಯಲ್ಲಿ ಮಂಗಳ ಸಂಚಾರ, ಈ 3 ರಾಶಿಯವರಿಗೆ ಅಪಾಯಕಾರಿ!

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪದಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News