ಬೆಂಗಳೂರು: ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಆಲೋಚನೆಗಳು ಸಾಮಾನ್ಯವಾಗಿ ಹೋಲುತ್ತವೆ ಎಂದು ಹೇಳಲಾಗುತ್ತದೆ. ಒಂದೇ ರಾಶಿಯ ಜನರಲ್ಲಿ ಅನೇಕ ವಿಷಯಗಳು ಸಾಮ್ಯತೆಯನ್ನು ಹೊಂದಿರುತ್ತವೆ. ಆದರೆ ಕೆಲವು ವಿಭಿನ್ನ ರಾಶಿಚಕ್ರದ ಜನರು ಕೂಡ ಒಂದೇ ರೀತಿಯ ಆಲೋಚನೆ ಅಥವಾ ಅಭ್ಯಾಸಗಳನ್ನು ಹೊಂದಿರುತ್ತಾರೆ. ಕೆಲವು ರಾಶಿಚಕ್ರದ ಜನರು ತುಂಬಾ ಕೋಪದ ಸ್ವಭಾವದವರಾಗಿರುತ್ತಾರೆ. ಅಂತೆಯೇ ಕೆಲವು ರಾಶಿಚಕ್ರದ ಜನರು ಶಾಂತ ಸ್ವಭಾವದವರಾಗಿರುತ್ತಾರೆ. ಅಂತೆಯೇ, ಮದುವೆ ವಿಚಾರದಲ್ಲೂ ವಿವಿಧ ರಾಶಿಚಕ್ರದ ಜನರ ಸ್ವಭಾವ ವಿಭಿನ್ನವಾಗಿರುತ್ತದೆ. ಕೆಲವರು ಅರೇಂಜ್ಡ್ ಮ್ಯಾರೇಜ್ ಅನ್ನು ಇಷ್ಟ ಪಡುತ್ತಾರೆ. ಇನ್ನೂ ಕೆಲವರು ಪ್ರೀತಿಸಿ ಮದುವೆಯಾಗುವುದರಿಂದ ವೈವಾಹಿಕ ಜೀವನ ಆನಂದಮಯವಾಗಿರುತ್ತದೆ ಎಂದು ಭಾವಿಸುತ್ತಾರೆ. ಇಂದು ನಾವು ನಿಮಗೆ ಅರೇಂಜ್ಡ್ ಮ್ಯಾರೇಜ್ ಮೇಲೆ ಹೆಚ್ಚು ನಂಬಿಕೆ ಹೊಂದಿರುವ ರಾಶಿಗಳ ಬಗ್ಗೆ ತಿಳಿಸಲಿದ್ದೇವೆ.


COMMERCIAL BREAK
SCROLL TO CONTINUE READING

ಈ ರಾಶಿಚಕ್ರದವರು  ಅರೇಂಜ್ಡ್ ಮ್ಯಾರೇಜ್ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆ:
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ ಜನರು ತುಂಬಾ ಸೂಕ್ಷ್ಮ ಮತ್ತು ಕಾಳಜಿಯುಳ್ಳವರು. ಈ ಜನರು ಎಲ್ಲಾ ಸಂಬಂಧಗಳಿಗೆ (Relationship) ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ, ಆದ್ದರಿಂದ ಅವರು ಎಲ್ಲರ ಇಚ್ಛೆಯಂತೆ ಮದುವೆ ಆಗಲು ಇಷ್ಟಪಡುತ್ತಾರೆ.


ಇದನ್ನೂ ಓದಿ- Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?


ತುಲಾ ರಾಶಿ: ತುಲಾ ರಾಶಿಚಕ್ರದ ಜನರು ಭಾವನಾತ್ಮಕವಾಗಿ ಬಹಳ ಸಮತೋಲಿತರಾಗಿರುತ್ತಾರೆ ಮತ್ತು ಅವರು ಬದ್ಧತೆಯನ್ನು ಉಳಿಸಿಕೊಳ್ಳುತ್ತಾರೆ. ಈ ಜನರು ತುಂಬಾ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅರೇಂಜ್ಡ್ ಮ್ಯಾರೇಜ್ (Arranged Marriage) ಮೇಲೆ ಅಪಾರ ನಂಬಿಕೆ ಉಳ್ಳವರಾಗಿದ್ದಾರೆ.


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ರಹಸ್ಯವಾಗಿ ಪ್ರೀತಿಸುತ್ತಾರೆ ಮತ್ತು ಮೌಲ್ಯ ನಿಷ್ಠೆಯನ್ನು ಪ್ರೀತಿಸುತ್ತಾರೆ. ಇವುಗಳೆರಡೂ ಅರೇಂಜ್ಡ್ ಮ್ಯಾರೇಜ್ ಮೇಲೆ ಸಂಪೂರ್ಣವಾಗಿ ಆಧಾರಿತವಾಗಿದೆ ಎಂದು ನಂಬುತ್ತಾರೆ. ಈ ರಾಶಿಚಕ್ರದ ಜನರು ಹೆಚ್ಚಾಗಿ ಕುಟುಂಬದವರ ಇಚ್ಚೆಯಂತೆ ವಿವಾಹವಾಗುತ್ತಾರೆ.


ಇದನ್ನೂ ಓದಿ-  Tips To Relieve Stress: ಈ ಸಿಂಪಲ್ ಟಿಪ್ಸ್ ಅನುಸರಿಸಿ ನಿಮಿಷಗಳಲ್ಲಿ ನಿಮ್ಮ ಒತ್ತಡ ನಿವಾರಿಸಿ


ಮೀನ ರಾಶಿ: ಮೀನ ರಾಶಿಯವರನ್ನು ಅತ್ಯುತ್ತಮ ಜೀವನ ಸಂಗಾತಿ ಎಂದು ಪರಿಗಣಿಸಲಾಗಿದೆ. ಇವರೂ ಕೂಡ ಅರೇಂಜ್ಡ್ ಮ್ಯಾರೇಜ್ ಬಗ್ಗೆ ಹೆಚ್ಚು ನಂಬಿಕೆ ಹೊಂದಿರುತ್ತಾರೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.