Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?

ಗ್ಲಾಸ್ ಅಥವಾ ಗಾಜಿನ ಒಡೆಯುವಿಕೆಯ ಬಗ್ಗೆ ಅನೇಕ ನಂಬಿಕೆಗಳಿವೆ, ಆದರೆ ಇದನ್ನು ವಾಸ್ತು ವಿಷಯದಲ್ಲಿ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಒಡೆದ ಗಾಜನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಹಾನಿಕಾರಕ ಎಂದು ಸಾಬೀತುಪಡಿಸಬಹುದು.  

Written by - Zee Kannada News Desk | Last Updated : Aug 10, 2021, 01:28 PM IST
  • ಗಾಜಿನ ಒಡೆಯುವಿಕೆಗೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳು
  • ವಾಸ್ತು ಶಾಸ್ತ್ರದ ಪ್ರಕಾರ, ಗಾಜಿನ ವಸ್ತುವು ಇದ್ದಕ್ಕಿದ್ದಂತೆ ಒಡೆದರೆ ಅದು ಅಶುಭವಲ್ಲ
  • ಗಾಜು ಒಡೆಯುವುದು ಶುಭ, ಆದರೆ ಮನೆಯಲ್ಲಿ ಒಡೆದ ಗಾಜನ್ನು ಇಟ್ಟುಕೊಳ್ಳುವುದು ಅಶುಭ
Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ? title=
Vastu Shastra

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮನೆಯನ್ನು ಅಲಂಕರಿಸಲು ಹೆಚ್ಚಾಗಿ ಗ್ಲಾಸ್ ಅಥವಾ ಗಾಜಿನ ವಸ್ತುಗಳನ್ನು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಾಜನ್ನು ಪಾತ್ರೆಗಳು, ಗ್ಯಾಜೆಟ್‌ಗಳು-ಎಲೆಕ್ಟ್ರಾನಿಕ್ಸ್ ಸರಕುಗಳವರೆಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದರೊಂದಿಗೆ ಗಾಜು ಒಡೆದರೆ ಎಂಬ ಭಯವೂ ಇರುತ್ತದೆ. ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು ಹಾಳಾಯಿತು ಎಂಬುದು ಒಂದು ಕಾರಣವಾದರೆ, ಮನೆಯಲ್ಲಿ ಗಾಜು ಒಡೆಯುವುದು ಅಶುಭ ಎಂಬ ಕಾರಣಕ್ಕೂ ಕೆಲವರು ಗಾಜಿನ ವಸ್ತುಗಳನ್ನು ಬಳಸಲು ಹಿಂದು-ಮುಂದು ನೋಡುತ್ತಾರೆ.

ವಾಸ್ತವವಾಗಿ, ಹಿಂದಿನ ಕಾಲದಲ್ಲಿ ಜನರು ಗಾಜು ಒಡೆಯುವುದನ್ನು ಅಶುಭವೆಂದು ಪರಿಗಣಿಸಿದ್ದರು ಮತ್ತು ಇಂದಿಗೂ ಸಹ ಈ ನಂಬಿಕೆ ಅನೇಕ ಜನರಲ್ಲಿದೆ. ಆದರೆ ವಾಸ್ತು ಶಾಸ್ತ್ರದಲ್ಲಿ (Vastu Shastra) ಮನೆಯಲ್ಲಿ ಆಕಸ್ಮಿಕವಾಗಿ ಗಾಜು ಒಡೆಯುವುದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ- Vastu Tips: ಈ ಎಲ್ಲಾ ಲಾಭಗಳಿಗಾಗಿ ಊಟ ಮುಗಿಸಿದ ಮೇಲೆ ಪ್ರತಿದಿನ ಸೇವಿಸಿ ಕಲ್ಲು ಸಕ್ಕರೆ

ಗಾಜು ಒಡೆಯುವುದು ಏಕೆ ಶುಭಕರ?
ವಾಸ್ತು ಶಾಸ್ತ್ರದ ಪ್ರಕಾರ, ಗಾಜಿನ ವಸ್ತುವು ಇದ್ದಕ್ಕಿದ್ದಂತೆ ಒಡೆದರೆ  (Breaking Glass) ಅದು ಅಶುಭವಲ್ಲ. ಬದಲಿಗೆ ಇದು ಮನೆಯಲ್ಲಿನ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬುದರ ಸಂಕೇತ ಎಂದು ನಂಬಲಾಗಿದೆ. ಮನೆಯಲ್ಲಿ ಗಾಜು ಒಡೆದರೆ ಮನೆಯಲ್ಲಿ ಎಂತಹದ್ದೇ ಬಿಕ್ಕಟ್ಟು ಮೂಡಿದ್ದರು ಅದು ಮುಗಿಯುವ ಕಾಲ ಬಂದಿದೆ ಎಂದರ್ಥ. ಅದೇ ಸಮಯದಲ್ಲಿ, ಹಲವೆಡೆ ಗಾಜು ಒಡೆಯುವುದು ಕುಟುಂಬದ ಸದಸ್ಯರ ಆರೋಗ್ಯ ಸುಧಾರಣೆಯ ಸೂಚನೆ ಎಂದೂ ಕೂಡ ಹೇಳಲಾಗುತ್ತದೆ.

ಇದನ್ನೂ ಓದಿ- Raksha Bandhan 2021: ರಕ್ಷಾಬಂಧನದಲ್ಲಿ ಸಹೋದರಿಯರು ರಾಶಿ ಪ್ರಕಾರ Rakhi ಕಟ್ಟಿದರೆ ಸಹೋದರನ ಅದೃಷ್ಟ ಬದಲಾಗುತ್ತಂತೆ!

ಆದರೆ ಒಡೆದ ಗಾಜನ್ನು ಮನೆಯಲ್ಲಿಡುವುದು ಅಶುಭ:
ಮುರಿದ/ಒಡೆದ ಗಾಜು ಬಿಕ್ಕಟ್ಟನ್ನು ತಪ್ಪಿಸುವ ಸಂಕೇತವಾಗಿರಬಹುದು, ಆದರೆ ಮನೆಯಲ್ಲಿ ಒಡೆದ ಗಾಜನ್ನು ಇಟ್ಟುಕೊಳ್ಳುವುದು ತುಂಬಾ ಅಶುಭಕರ. ಇದು ಮನೆಯಲ್ಲಿ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಒಡೆದ ಗಾಜು, ಸೆರಾಮಿಕ್ ಅಥವಾ ಒಡೆದ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಈ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತವೆ ಎಂಬ ನಂಬಿಕೆ ಇದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News