ನವದೆಹಲಿ : ಕಠಿಣ ಪರಿಶ್ರಮ ಮತ್ತು ಧೈರ್ಯದಿಂದ ವ್ಯಕ್ತಿ ತನ್ನ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಈ ವಿಷಯವು ಕೆಲವರಿಗೆ  ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಜನರು ತುಂಬಾ ಭಾವೋದ್ರಿಕ್ತರಾಗಿರುತ್ತಾರೆ. ಅವರು ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳಿಗೆ ಹೆದರುವುದಿಲ್ಲ. ತಮ್ಮ ಕಠಿಣ ಪರಿಶ್ರಮದಿಂದ ತಮ್ಮ ಅದೃಷ್ಟವನ್ನೇ ಬದಲಿಸುತ್ತಾರೆ.  ಪರಿಸ್ಥಿತಿ ಏನೇ ಇದ್ದರೂ, ತಾವು ಬಯಸಿದ ಸ್ಥಾನವನ್ನು ಪಡೆದೆ ತೀರುತ್ತಾರೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ :
ಮೇಷ ರಾಶಿಯ (Aries) ಜನರು ತುಂಬಾ ಶ್ರಮಜೀವಿಗಳು. ದಣಿಯುವುದು ಎಂಬ ಪದ ಅವರ ನಿಘಂಟಿನಲ್ಲಿ ಇಲ್ಲವೆಂದೇ ಹೇಳಬಹುದು. ಜೊತೆಗೆ, ಇವರು ಹಠಮಾರಿ ಸ್ವಭಾವದವರು. ಈ ರಾಶಿಯವರು (Zodiac sign) ತಾವು ಏನು ಮಾಡಬೇಕೆಂದು ಬಯಸುತ್ತರೆಯೋ, ಆ ಕಾರ್ಯವನ್ನು ಮಾಡಿಯೇ ಮುಗಿಸುತ್ತಾರೆ. 


ಇದನ್ನೂ ಓದಿ : Budh Rashi Parivartan: ಈ 3 ರಾಶಿಯವರಿಗೆ ಮುಂದಿನ 45 ದಿನ ಬಹಳ ವಿಶೇಷ, ಸುರಿಯಲಿದೆ ಹಣದ ಮಳೆ


ವೃಷಭ ರಾಶಿ
ವೃಷಭ ರಾಶಿಯ (Taraus) ಜನರು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುತ್ತಾರೆ. ಜೀವನದಲ್ಲಿ ಏನೇ ಸವಾಲುಗಳು ಬಂದರೂ, ತಮ್ಮ ಗುರಿಯನ್ನು ಸಾಧಿಸುವುದರಿಂದ ಹಿಂದೆ ಸರಿಯುವುದಿಲ್ಲ. ಈ ರಾಶಿಯವರು ತಮ್ಮ ಜೀವನದ ಎರಡನೇ ಹಂತದಲ್ಲಿ ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ.  


 ಸಿಂಹ :
ಸಿಂಹ ರಾಶಿಯ (Leo) ಜನರು ಜೀವನೋತ್ಸಾಹದಿಂದ ಕೂಡಿರುತ್ತಾರೆ.   ಪ್ರತಿ ಕೆಲಸದಲ್ಲಿ ಯಶಸ್ಸು ಸಿಕ್ಕರೂ, ಸಿಗದಿದ್ದರೂ ಇವರು ಎದೆಗುಂದುವುದಿಲ್ಲ. ತಾವು ಕೈಗೆತ್ತಿಕೊಂಡ ಕೆಲಸದಲ್ಲಿ ಗೆಲುವು ಸಾಧಿಸಿದ ನಂತರವೇ ನಿಟ್ಟುಸಿರು ಬಿಡುತ್ತಾರೆ.  


ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ (Scorpio) ಜನರು ಕಠಿಣ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಪಡೆಯುತ್ತಾರೆ. ಅವರಲ್ಲಿ ಗೆಲ್ಲುವ ಉತ್ಸಾಹವಿರುತ್ತದೆ. ಈ ರಾಶಿಯವರು ಬಯಸಿದ್ದನ್ನು ಪಡೆದ ನಂತರವೇ, ನಿರಾಳರಾಗುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ.  


ಇದನ್ನೂ ಓದಿ : Vasant Panchami 2022: ವಸಂತ ಪಂಚಮಿ ಯಾವ ದಿನ? ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..!


ಮಕರ ರಾಶಿ :
ಶನಿಯು (Shani ) ಮಕರ ರಾಶಿಯ (Capricorn) ಅಧಿಪತಿಯಾಗಿದ್ದು, ಈ ರಾಶಿಯವರು ಹುಟ್ಟಿನಿಂದಲೇ ಶ್ರಮಜೀವಿಗಳು. ಅವರು ಅದೃಷ್ಟಕ್ಕಿಂತ ಹೆಚ್ಚಾಗಿ ಕಾರ್ಯಗಳನ್ನು ಮಾಡಿ ಮುಗಿಸುವುದರಲ್ಲಿ ನಂಬಿಕೆಯಿಟ್ಟಿರುತ್ತಾರೆ.   ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಮಾನವನ್ನು ಪಡೆಯುತ್ತಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.