Rahu Transit: ರಾಹು ರಾಶಿ ಪರಿವರ್ತನೆಯಿಂದ ಈ 4 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು

Rahu Transit: ಏಪ್ರಿಲ್ 12 ರಂದು ರಾಹು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ರಾಹುವಿಯ ಈ ರಾಶಿ ಪರಿವರ್ತನೆಯು  4 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ.

Written by - Yashaswini V | Last Updated : Jan 19, 2022, 09:40 AM IST
  • ಗ್ರಹದ ಬದಲಾವಣೆ ಮತ್ತು ಸ್ವಭಾವವು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ
  • ಕೆಲವೊಮ್ಮೆ ಇವುಗಳು ಜೀವನವನ್ನು ಬದಲಾಯಿಸುವ ಪರಿಣಾಮಗಳಾಗಿರಬಹುದು
  • ರಾಹುವಿನ ರಾಶಿ ಬದಲಾವಣೆಯು ಹಲವು ರಾಶಿಯವರಿಗೆ ಉತ್ತಮ ಸಮಯವಾಗಿರುತ್ತದೆ
Rahu Transit: ರಾಹು ರಾಶಿ ಪರಿವರ್ತನೆಯಿಂದ ಈ 4 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು title=
Rahu Transit Effects

Rahu Transit: ಗ್ರಹಗಳ ರಾಶಿ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ ಕೆಲವು ರಾಶಿಗಳಿಗೆ ವಿಶೇಷ ಪರಿಣಾಮ ಉಂಟುಮಾಡುತ್ತವೆ. ಪ್ರತಿ ಗ್ರಹದ ಬದಲಾವಣೆ ಮತ್ತು ಸ್ವಭಾವವು ವಿಭಿನ್ನ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಕೆಲವೊಮ್ಮೆ ಇವುಗಳು ಜೀವನವನ್ನೇ ಬದಲಾಯಿಸುತ್ತವೆ. 

ರಾಹುವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು 18 ತಿಂಗಳು ಬೇಕಾಗುತ್ತದೆ . ಇತರ ಗ್ರಹಗಳಂತೆ ಅದರ ಚಲನೆಯು ನೇರವಾಗಿರುವುದಿಲ್ಲ, ಬದಲಿಗೆ ತಲೆಕೆಳಗಾದಾಗಿರುತ್ತದೆ. ಅಂದರೆ ರಾಹು ಗ್ರಹ (Rahu Grah) ಯಾವಾಗಲೂ ಹಿಂದಕ್ಕೆ ಚಲಿಸುತ್ತಿರುತ್ತದೆ. ಈ ಕಾರಣದಿಂದಾಗಿ ರಾಹು ಯಾವಾಗಲೂ ರಾಶಿಚಕ್ರದ ಹಿಂದಿನ ರಾಶಿಚಕ್ರದ ಚಿಹ್ನೆಗೆ ಪ್ರವೇಶಿಸುತ್ತಾನೆ. ಏಪ್ರಿಲ್ 12 ರಂದು ರಾಹು ಪಲ್ಲಟ ನಡೆಯಲಿದೆ. ಆಗ ರಾಹು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರಾಶಿಯಲ್ಲಿ ರಾಹುವಿನ ಪ್ರಯಾಣವು 4 ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ.

ರಾಹು ರಾಶಿ ಪರಿವರ್ತನೆಯಿಂದ ಈ 4 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು:
ಮಿಥುನ ರಾಶಿ :
ಬುಧ ಗ್ರಹಕ್ಕೆ ಸೇರಿದ ಈ ರಾಶಿಯವರಿಗೆ ಈ ರಾಹು ಪಲ್ಲಟವು  (Rahu Rashi Parivartan) ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ಉದ್ಯೋಗಗಳು ದೊರೆಯುವ ಸಾಧ್ಯತೆ ಇದೆ. ಎಲ್ಲೆಡೆ ಗೌರವವನ್ನು ಪಡೆಯುತ್ತೀರಿ. ಬಹಿರ್ದೆಸೆ ಯೋಗವೂ ಇದೆ. ಆದಾಯ ಚೆನ್ನಾಗಿರಲಿದೆ. ಹಣವನ್ನು ಉಳಿಸುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ-  Vastu Shastra: ಮರೆತರೂ ಇಂತಹ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬೇಡಿ, ಇಲ್ಲವೇ ಭಾರೀ ನಷ್ಟ

ಕಟಕ ರಾಶಿ: ರಾಹು ರಾಶಿ ಪರಿವರ್ತನೆಯಿಂದ ಕಟಕ ರಾಶಿಯವರಿಗೆ ಸ್ಥಗಿತಗೊಂಡಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಇದು ಉತ್ತಮ ಸಮಯವಾಗಿರುತ್ತದೆ. ಹಣದ ಹರಿವು ಉತ್ತಮವಾಗಿರಲಿದೆ. ಬೇರೆ ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗ ಬದಲಾವಣೆಗೆ ಇದು ಉತ್ತಮ ಸಮಯ. ಕೆಲಸದ ಸ್ಥಳದಲ್ಲಿ ಎಲ್ಲಾ ಕೆಲಸಗಳಲ್ಲಿ ಬಾಸ್‌ನ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಸಂಗಾತಿಯ ಬೆಂಬಲ ದೊರೆಯಲಿದೆ. ಒಟ್ಟಾರೆಯಾಗಿ ಈ ಸಮಯವು ಕರ್ಕಾಟಕ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ .

ವೃಶ್ಚಿಕ ರಾಶಿ : ಕೆಲಸ ಹುಡುಕುತ್ತಿರುವ ವೃಶ್ಚಿಕ ರಾಶಿಯವರಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಅಧಿಕವಾಗಿದೆ. ಸಂಬಳ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಈ ಬಾರಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಅವಧಿಯಲ್ಲಿ ನಿಮ್ಮ ಮನೋಬಲ ಹೆಚ್ಚಾಗಿರುತ್ತದೆ.

ಇದನ್ನೂ ಓದಿ- ಈ 2 ರತ್ನಗಳು ತುಂಬಾ ಪರಿಣಾಮಕಾರಿ ಮತ್ತು ಅಪಾಯಕಾರಿ!: ಧರಿಸುವ ಮುನ್ನ ಇದನ್ನು ತಿಳಿದುಕೊಳ್ಳಿ

ಧನು ರಾಶಿ : ಧನು ರಾಶಿಯವರಿಗೆ ಈ ಅವಧಿಯಲ್ಲಿ ಆರ್ಥಿಕ ನೆರವು ಮತ್ತು ಆರ್ಥಿಕ ಲಾಭ ದೊರೆಯುತ್ತದೆ. ನೀವು ದೀರ್ಘ ಕಾಲದಿಂದ ಯಾವುದೇ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ರಾಹು ರಾಶಿ ಬದಲಾವಣೆಯಿಂದ ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಕಾಣುತ್ತೀರಿ. ಸಾಲ ಮರುಪಾವತಿಗೆ ಉತ್ತಮ ಸಮಯ. ಕೆಲಸದ ಸ್ಥಳದಲ್ಲಿ ನೀವು ಅನೇಕ ದೊಡ್ಡ ಸಾಧನೆಗಳನ್ನು ಮಾಡುತ್ತೀರಿ. ಇದಲ್ಲದೆ ಆರ್ಥಿಕ ಮೂಲಗಳು ಹೆಚ್ಚಾಗಲಿವೆ.

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ದೃಢಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News