ನವದೆಹಲಿ : ಪ್ರತಿಯೊಂದು ರಾಶಿಚಕ್ರದ (Zodiac sign) ಜನರು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.  ರಾಶಿಗೆ ತಕ್ಕಂತೆ ಅವರವರ ವ್ಯಕ್ತಿತ್ವ, ನಡವಳಿಕೆ ಇರುತ್ತದೆ. ರಾಶಿಗನುಗುಣವಾಗಿ  ವಿಶೇಷ ಗುಣಗಳು, ಒಳ್ಳೆಯದು, ಕೆಟ್ಟದು ಎಲ್ಲವೂ ನಿರ್ಧಾರವಾಗುತ್ತದೆ. ಜೀವನದಲ್ಲಿ ಉಂಟಾಗುವ ಆರ್ಥಿಕ ಅಭಿವೃದ್ದಿ, ನಷ್ಟಗಳು ಕೂಡಾ ರಾಶಿಯನ್ನು ಅವಲಂಬಿಸಿರುತ್ತದೆ.  ಕೆಲವು ರಾಶಿಯವರು ತಮ್ಮ ಕಠಿಣ ಮಾತುಗಳಿಂದಲೇ ಬೇರೆಯವರನ್ನು ನೋಯಿಸಿ ಬಿಡುತ್ತಾರೆ. ತಾವು ಯಾವ ರೀತಿ ನಡೆದುಕೊಂಡಿದ್ದೇವೆ ಎನ್ನುವುದರ ಬಗ್ಗೆ ಯೋಚಿಸುವುದೂ ಇಲ್ಲ..


COMMERCIAL BREAK
SCROLL TO CONTINUE READING

ಮೇಷ ರಾಶಿ : ಈ ರಾಶಿಯವರಿಗೆ  ಯಾವುದಾದರು ವಿಚಾರಕ್ಕೆ ಸಂಬಂಧಪಟ್ಟಂತೆ ಬೇಸರವಾದರೆ, ತಮ್ಮ ನಿಯಂತ್ರಣವನ್ನು  ಕಳೆದುಕೊಳ್ಳುತ್ತಾರೆ. ತಾವು ಏನು ಮಾತನಾಡುತ್ತೇವೆ ಎನ್ನುವುದನ್ನು ಮರೆಯುತ್ತಾರೆ. ಬಹಳ ಕಠಿಣ ಪದಗಳನ್ನು (sharp words) ಬಳಸುತ್ತಾರೆ. 


ಇದನ್ನೂ ಓದಿ : Mercury Transit: ಬುಧನ ರಾಶಿ ಪರಿವರ್ತನೆ ಈ ರಾಶಿಯವರಿಗೆ ಅದೃಷ್ಟ


ವೃಷಭ ರಾಶಿ : ಈ ರಾಶಿಚಕ್ರದ ಜನರು ಬಹಳ ಸಂಯಮದಿಂದ ಮತ್ತು ಚಾತುರ್ಯದಿಂದ ನಡೆದುಕೊಳ್ಳುತ್ತಾರೆ. ಆದರೂ, ಈ  ರಾಶಿಯವರ (Zodiac sign) ಜೊತೆ ಯಾರಾದರೂ, ಕೆಟ್ಟದಾಗಿ ವರ್ತಿಸಿದರೆ ಇವರು ಸುಮ್ಮನಿರುವುದಿಲ್ಲ. ತಮ್ಮನ್ನು ನೋಯಿಸಿದವರಿಗೆ ಪ್ರತ್ಯುತ್ತರ ನೀಡಲು ಮುಂದೆ ಹಿಂದೆ ಯೋಚಿಸುವುದು ಇಲ್ಲ. ತಾರ್ಕಿಕವಾಗಿ ತುಂಬಾ ಕಠಿಣ ಪದಗಳಲ್ಲಿ ಆಡುವ ಮೂಲಕ ಯಾರ ಬಾಯನ್ನೂ ಬೇಕಾದರೂ ಮುಚ್ಚಿಸಿಬಿಡುತ್ತಾರೆ. ವೃಷಭ ರಾಶಿಯ ಜನರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. 


ಮಿಥುನ : ಈ ರಾಶಿಚಕ್ರದ ಜನರು ಕಡಿಮೆ ಪ್ರಬುದ್ಧತೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರು ಸಣ್ಣ ಸಣ್ಣ ವಿಷಯಗಳಿಗೂ ಅತಿಯಾಗಿ ಪ್ರತಿಕ್ರಿಯಿಸಿ ಬಿಡುತ್ತಾರೆ. ಆದರೆ ತಮ್ಮ ನಡವಳಿಕೆಯ ಬಗ್ಗೆ ವಿಷಾದವು ಇರುತ್ತದೆ.  


ವೃಶ್ಚಿಕ: ಈ ಜನರು ಸ್ವಭಾವತಃ ಸ್ವಲ್ಪ ಸ್ವಾರ್ಥಿಗಳು. ಅನೇಕ ಸಲ ಅವರು ತಮ್ಮ ಲಾಭಕ್ಕಾಗಿ ಇತರರಿಗೆ ಹಾನಿ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಇತರರ ಭಾವನೆಗಳನ್ನು ಲೆಕ್ಕಿಸದೆ ಯಾವುದೇ ಸಮಯದಲ್ಲಿ ಏನು ಬೇಕಾದರೂ ಹೇಳುತ್ತಾರೆ. ಅವರು ಗಟ್ಟಿಯಾದ ಧ್ವನಿಯಲ್ಲಿ ಮಾತನಾಡುವ ಬದಲು, ತಮ್ಮ ತೀಕ್ಷ್ಣವಾದ ಪದಗಳಿಂದ ಜನರಿಗೆ ನೋವುಂಟು ಮಾಡುತ್ತಾರೆ. 


ಇದನ್ನೂ ಓದಿ : Janmasthami 2021: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಿ ಹಾಗೂ ಶುಭ ಮುಹೂರ್ತ


ಧನು: ಈ ರಾಶಿಚಕ್ರದ ಜನರು ಮೋಜಿನ ಸ್ವಭಾವದವರು. ಅನೇಕ ಬಾರಿ ಅವರು ಏನನ್ನಾದರೂ ಹೇಳಿ ಇತರರ ಮನಸ್ಸನ್ನು ನೋಯಿಸುತ್ತಾರೆ. ಆದರೆ ತಾವು ನಡೆದುಕೊಂಡಿರುವ ರೀತಿಗೆ ಕ್ಷಮೆ ಕೂಡಾ ಕೇಳುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.