ಈ ವಸ್ತುಗಳನ್ನು ದಿಂಬಿನ ಕೆಳಗೆ ಇಡಬೇಡಿ: ಆಯಾಸ ಹೋಗಲಾಡಿಸಲು ಅಥವಾ ದೇಹವನ್ನು ಆರೋಗ್ಯಕರವಾಗಿಡಲು ಪ್ರತಿದಿನ 7-8 ಗಂಟೆಗಳ ನಿದ್ದೆ ಬಹಳ ಮುಖ್ಯ. ನೀವು ಉತ್ತಮ ನಿದ್ರೆ ಪಡೆದರೆ ಆ ದಿನವು ಚೆನ್ನಾಗಿರುತ್ತದೆ. ಉತ್ತಮ ನಿದ್ರೆಗಾಗಿ ಉತ್ತಮ ಹಾಸಿಗೆ ಮತ್ತು ಮೃದುವಾದ ದಿಂಬುಗಳನ್ನು ಹೊಂದಿರುವುದು ಅವಶ್ಯಕ. ಕೆಲವರು ಮಲಗುವ ಮುನ್ನ ದಿಂಬಿನ ಕೆಳಗೆ ಪುಸ್ತಕ, ಪರ್ಸ್, ಕೈಗಡಿಯಾರ, ಕೀಗಳನನ್ನು ಇಡುವ ರೂಢಿ ಹೊಂದಿರುತ್ತಾರೆ. ಆದರೆ ವಾಸ್ತು ಶಾಸ್ತ್ರದಲ್ಲಿ ಹೀಗೆ ಮಾಡುವುದನ್ನು ನಿಷೇಧಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಮನೆಯಿಂದ ಆಶೀರ್ವಾದ ದೂರವಾಗುತ್ತದೆ ಮತ್ತು ಲಕ್ಷ್ಮಿದೇವಿಯೂ ಕೋಪಗೊಳ್ಳುತ್ತಾಳಂತೆ  


COMMERCIAL BREAK
SCROLL TO CONTINUE READING

ಪರ್ಸ್: ವಾಸ್ತು ಶಾಸ್ತ್ರದ ಪ್ರಕಾರ ಮಲಗುವಾಗ ಪರ್ಸ್ ಅನ್ನು ದಿಂಬಿನ ಕೆಳಗೆ ಇಡಬಾರದು. ವಾಸ್ತು ಶಾಸ್ತ್ರದಲ್ಲಿ ಹೀಗೆ ಮಾಡುವುದನ್ನು ನಿಷೇಧಿಸಲಾಗಿದೆ. ತಾಯಿ ಲಕ್ಷ್ಮಿದೇವಿಯು ಪರ್ಸ್‌ನಲ್ಲಿ ನೆಲೆಸಿದ್ದಾಳೆ ಮತ್ತು ದಿಂಬಿನ ಕೆಳಗೆ ಮಲಗುವುದರಿಂದ ತಾಯಿ ಲಕ್ಷ್ಣಿದೇವಿಯ ಕೃಪೆಯು ಕೋಪಕ್ಕೆ ತಿರುಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿRelationships Tips: ನಿಮ್ಮ ಸಂಗಾತಿ ದುಃಖಿತರಾಗಿದ್ದಾರೆಯೇ? ಈ ಸರಳ ಸಲಹೆ ಪಾಲಿಸಿರಿ


ಕೈ ಗಡಿಯಾರ: ಅನೇಕ ಜನರು ಕೈಗಡಿಯಾರವನ್ನು ತೆಗೆದುಕೊಂಡು ಅದನ್ನು ದಿಂಬಿನ ಕೆಳಗೆ ಇಡುತ್ತಾರೆ. ಈ ರೀತಿ ಮಾಡುವುದನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ತಪ್ಪು ಎಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದನ್ನು ನಿಷೇಧಿಸಲಾಗಿದೆ. ಮಲಗುವಾಗ ವಾಚ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ದಿಂಬಿನ ಕೆಳಗೆ ಇಡಬಾರದು. ಇದು ಆರೋಗ್ಯದ ಜೊತೆಗೆ ವಾಸ್ತುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


ಪುಸ್ತಕ: ಪುಸ್ತಕವನ್ನು ತಲೆಯ ಕೆಳಗೆ ಇಟ್ಟುಕೊಂಡು ಮಲಗಬಾರದು. ವಾಸ್ತು ಶಾಸ್ತ್ರದಲ್ಲಿ ಇದನ್ನು ಮಾಡುವವರ ಸುತ್ತಲೂ ನಕಾರಾತ್ಮಕ ಶಕ್ತಿಯು ಹೆಚ್ಚು ಹರಡುತ್ತದೆ, ಇದರಿಂದಾಗಿ ಜ್ಞಾನ ಮತ್ತು ಬುದ್ಧಿವಂತಿಕೆ ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಪತ್ರಿಕೆಗಳು, ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಬುಧ ಗ್ರಹದೊಂದಿಗೆ ಸಂಬಂಧ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ ಮಲಗುವ ಮುನ್ನ ಪುಸ್ತಕವನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವವರು ಬುಧವನ್ನು ದುರ್ಬಲಗೊಳಿಸುತ್ತಾರೆ.


ಇದನ್ನೂ ಓದಿ: Dark Knees: ಮೊಣಕಾಲು, ಮೊಣಕೈ ಮೇಲಿನ ಕಪ್ಪು ಕಲೆಯನ್ನು ಕೆಲವೇ ದಿನದಲ್ಲಿ ತೊಲಗಿಸುತ್ತೆ ಈ ಮನೆಮದ್ದು!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.