How to get rid of mosquitoes inside the house naturally: ಸಂಜೆ ವೇಳೆ ಬಾಲ್ಕನಿಯಲ್ಲಿ ಕುಳಿತು ಚಹಾ ಕುಡಿಯೋಣ ಎಂದರೆ ಸೊಳ್ಳೆಗಳ ಕಾಟದಿಂದ ಸಾಧ್ಯವಾಗೋದಿಲ್ಲ. ಹೀಗಿರುವಾಗ ಕೆಲವೊಂದು ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!?


ಈ ಸಾರಭೂತ ತೈಲಗಳು ಮತ್ತು ಎಲೆಗಳು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತವೆ. ಈ ಎಣ್ಣೆ ಅಥವಾ ಎಲೆಯನ್ನು ಚೆನ್ನಾಗಿ ಕೈಗಳಿಗೆ ಉಜ್ಜಿಕೊಂಡರೆ ಅಥವಾ ಮನೆಬಾಗಿಲು- ಕಿಟಕಿಯ ಬಳಿ ಇಟ್ಟರೆ ಸಾಕು ಇವುಗಳ ಗಾಢ ಪರಿಮಳಕ್ಕೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ.


ಲೆಮನ್‌ಗ್ರಾಸ್- ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಲೆಮನ್‌ಗ್ರಾಸ್ ಎಲೆ ಅಥವಾ ಅದರ ಎಣ್ಣೆಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದನ್ನು ಬಳಸುವುದರಿಂದ ಕೆಲವು ಗಂಟೆಗಳ ಕಾಲ ಸೊಳ್ಳೆಗಳು ನಿಮ್ಮಿಂದ ದೂರವಿರುತ್ತವೆ.


ತುಳಸಿ: ತುಳಸಿ ಎಲೆಗಳನ್ನು ಅನೇಕ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಈ ಗಿಡ ಮನೆ ಬಳಿ ಇದ್ದರೆ ಸೊಳ್ಳೆ ಕಾಟ ಇರುವುದಿಲ್ಲ. ಇದರ ಎಲೆಯನ್ನು ಚೆನ್ನಾಗಿ ಕಿವುಚಿ ಮನೆ ಬಾಗಿಲಿನಲ್ಲಿಟ್ಟರೆ ಸೊಳ್ಳೆಗಳು ಬರುವುದೇ ಇಲ್ಲ


ಪುದೀನಾ ಎಣ್ಣೆ: ಪುದೀನಾ ಎಣ್ಣೆಯ ವಾಸನೆಯು ಸೊಳ್ಳೆಗಳನ್ನು ನಿಮ್ಮಿಂದ ದೂರವಿರಿಸಲು ಸಹಾಯ ಮಾಡುತ್ತದೆ. ನೋವಿನಿಂದ ಪರಿಹಾರ ಪಡೆಯಲು ಸಹ ಇದನ್ನು ಬಳಸಬಹುದು.


ಲ್ಯಾವೆಂಡರ್ - ಸೊಳ್ಳೆಗಳನ್ನು ನಿವಾರಿಸಲು ಲ್ಯಾವೆಂಡರ್ ಸಹಾಯ ಮಾಡುತ್ತದೆ. ಇದರ ಹೂವನ್ನಾದರೂ ಬಳಸಬಹುದು ಅಥವಾ ಎಣ್ಣೆಯನ್ನು ಕೈ ಕಾಲುಗಳಿಗೆ ಹಚ್ಚಬಹುದು


ಪುದೀನಾ ರಸ-ತೆಂಗಿನೆಣ್ಣೆಯೊಂದಿಗೆ 3 ರಿಂದ 5 ಹನಿ ಪುದೀನಾ ರಸವನ್ನು ಬೆರೆಸಿ ಇಡೀ ದೇಹಕ್ಕೆ ಹಚ್ಚಿದರೆ ತ್ವಚೆಯ ಹೊಳಪು ಹೆಚ್ಚುವುದಲ್ಲದೆ ಸೊಳ್ಳೆಗಳ ಕಾಟವೂ ತಪ್ಪುತ್ತದೆ. ಚರ್ಮದ ಮೇಲೆ ಯಾವುದೇ ಕಲೆಗಳು ಇದ್ದರೂ ಸಹ ಗುಣವಾಗುತ್ತವೆ.


ಇದನ್ನೂ ಓದಿ:   ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆ


ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.