Saturn Transit 2022: ಏಪ್ರಿಲ್ 29 ರಂದು, ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ನಂತರ, ಜೂನ್ 5 ರಂದು, ಆತ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಬಳಿಕ ಜುಲೈ 12 ರಂದು ಮಕರ ರಾಶಿಗೆ ಸಾಗಲಿದ್ದಾನೆ ಮತ್ತು ಜನವರಿ 17, 2023 ರವರೆಗೆ ಅಲ್ಲಿಯೇ ವಿರಾಜಮಾನನಾಗಲಿದ್ದಾನೆ. ಶನಿಯ ಈ  ರಾಶಿ ಪರಿವರ್ತನೆ ಕುಂಭ ರಾಶಿಯ ಜನರ ಮೇಲೆ ಪ್ರಭಾವ ಬೀರಲಿದೆ. ಶನಿಯ ಈ ರಾಶಿ ಪರಿವರ್ತನೆಯಿಂದ ಮೀನ ರಾಶಿಯ ಜನರಿಗೆ ಸಾಡೇ ಸಾತಿ ಆರಂಭವಾಗಲಿದೆ, ಇನ್ನೊಂದೆಡೆ ಕಳೆದ ಏಳು ವರ್ಷಗಳಿಂದ ತೊಂದರೆ ಅನುಭವಿಸುತ್ತಿರುವ ಧನು ರಾಶಿಯ ಜಾತಕದವರಿಗೆ ಭಾರಿ ನೆಮ್ಮದಿ ಸಿಗಲಿದೆ.

COMMERCIAL BREAK
SCROLL TO CONTINUE READING

ಹೀಗಾಗಿ ಧನು ರಾಶಿಯ ಜನರ ಅದೃಷ್ಟವು ಹೆಚ್ಚಾಗಲಿದೆ.  ಹದಗೆಟ್ಟ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಲಿದೆ. ಇಷ್ಟು ದಿನ ನಿಮ್ಮಲ್ಲಿ ಇದ್ದ ಯಶಸಿಸಿನ ಕೊರತೆ, ಕಡಿಮೆಯಾಗಿದ್ದ ಆತ್ಮಸ್ಥೈರ್ಯ ಮತ್ತೆ ಹೆಚ್ಚಾಗಲಿದೆ. ಆರ್ಥಿಕ ಸಮೃದ್ಧಿಯ ಜೊತೆಗೆ ಎಲ್ಲರೊಂದಿಗೆ ಬಿಗಡಾಯಿಸಿದ್ದ ನಿಮ್ಮ ಸಂಬಂಧಗಳು ಸುಧಾರಣೆಯಾಗಲಿವೆ. ದಾಂಪತ್ಯ ಜೀವನ ಸುಧಾರಿಸಲಿದೆ. ವಿವಾಹದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಈ ವರ್ಷ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, ನಿಮ್ಮ ಒಳ್ಳೆಯ ಸಮಯ ಇದೀಗ ಆರಂಭವಾಗಲಿದೆ.


ಇದನ್ನೂ ಓದಿ-Weekly Horoscope: ಕರಿಯರ್ ನಲ್ಲಿ ಬದಲಾವಣೆಯ ಜೊತೆಗೆ ಈ ರಾಶಿಗಳ ಜನರಿಗೆ ಪ್ರಮೋಶನ್ ಸಿಗಲಿದೆ, ಇಲ್ಲಿದೆ ಸಾಪ್ತಾಹಿಕ ರಾಶಿ ಫಲ

ವೃತ್ತಿಪರವಾಗಿ, ಮಕರ ರಾಶಿಯವರು ಈ ಸಮಯದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುವಿರಿ. ಆದರೆ ಒಂದು ವೇಳೆ ನೀವು ವ್ಯಾಪಾರದಲ್ಲಿ ನಿರತರಾಗಿದ್ದರೆ, ಈ ಸಮಯವು ನಿಮಗೆ ಸ್ವಲ್ಪ ಕಷ್ಟಕರವಾಗಿರಲಿದೆ. ಆದರೆ ನೀವು ಭವಿಷ್ಯಕ್ಕಾಗಿ ಹೂಡಿಕೆ ಮಾಡಿದರೆ, ನೀವು ಉತ್ತಮ ಲಾಭವನ್ನು ಪಡೆಯಬಹುದು. ಸಂಬಂಧಗಳ ಬಗ್ಗೆ ಹೇಳುವುದಾದರೆ, ನಿಮ್ಮ ಸಂಬಂಧಗಳು ಸುಧಾರಿಸಲಿವೆ. ಸಂತಾನ ಭಾಗ್ಯ ಇಲ್ಲದಿದ್ದರೆ, ಈ ಸಮಯ ಸಂತಾನಕ್ಕಾಗಿ ಒಳ್ಳೆಯ ಸಮಯವಾಗಿದೆ. ನಿಮಗಿಂತ ಕೆಳಗೆ ಇರುವವರನ್ನು ಗೌರವಿಸಿ. ಬಡವರಿಗೆ ಸಹಾಯ ಮಾಡಿ. ಇತರರ ಹೃದಯವನ್ನು ಎಂದಿಗೂ ನೋಯಿಸಬೇಡಿ. ಆದರೆ, ಶನಿ ಗ್ರಹ ನಿಮ್ಮ ರಾಶಿಯಿಂದ ಹೊರಹೊಗುತ್ತಿರುವುದರಿಂದ ಅದರ ಹೊರಹೊಗುವಿಕೆಯ ನಿಧಾನ ವೇಗದ ಪ್ರಭಾವದ ಕಾರಣ ನೀವು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಒಟ್ಟಿನಲ್ಲಿ ಈಗ ಸಮಯ ಚೆನ್ನಾಗಿದೆ, ಏಕೆಂದರೆ ಈಗ ಶನಿಯ ಶನಿಯ ಸಾಡೇ ಸಾತಿ ನಿವಾರಣೆಯಾಗುತ್ತಿದೆ.


ಇದನ್ನೂ ಓದಿ-Vastu Tips: ನಿವೇಶನ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ದಿದ್ರೆ ಅದನ್ನು ಮಾರುವುದರಿಂದಲೂ ದೋಷ ತಗುಲುತ್ತದೆ

ಇನ್ನೊಂದೆಡೆ ಏಪ್ರಿಲ್ 29ರ ಈ ಶನಿಯ ರಾಶಿ ಪರಿವರ್ತನೆ ಮೀನ ರಾಶಿಯ ಜನರಿಗೆ ಸಾಡೇ ಸಾತಿ ಆರಂಭದ ಸಮಯ. ಕರ್ಕ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿ ದೆಸೆಯ ಎರಡೂವರೆ ವರ್ಷಗಳ ಆರಂಭ ಕಾಲ.  ಹೀಗಾಗಿ ಈ ರಾಶಿಗಳ ಜನರು ತುಂಬಾ ಜಾಗರೂಕರಾಗಿರಬೇಕು. ಶನಿ ನ್ಯಾಯ ದೇವತೆಯಾಗಿರುವ ಕಾರಣ, ಆದಷ್ಟು ಒಳ್ಳೆಯ ಕರ್ಮಗಳನ್ನು ಮಾಡಿ. ಶನಿಯ ಪ್ರಕೋಪ ಕಡಿಮೆಯಾಗುತ್ತದೆ.


(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.