Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ
Shani Vakri Effect: ಯಾವುದೇ ಗ್ರಹದ ಸ್ಥಾನ ಪಲ್ಲಟ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಜುಲೈ ತಿಂಗಳಿನಲ್ಲಿ ಶನಿ ಗ್ರಹ ತನ್ನ ವಕ್ರ ನಡೆಯನ್ನು ಅನುಸರಿಸಲಿದೆ. ಹೀಗಾಗಿ ಕೆಲ ರಾಶಿಗಳ ಪಾಲಿಗೆ ಇದರಿಂದ ಶುಭ ಫಲಗಳು ಪ್ರಾಪ್ತಿಯಾದರೆ, ಕೆಲ ರಾಶಿಗಳ ಜನರ ಪಾಲಿಗೆ ಅಶುಭ ಫಲಗಳು ಪ್ರಾಪ್ತಿಯಾಗಲಿವೆ.
Saturn Retrograde 2022: ಪ್ರತಿ ತಿಂಗಳು ಒಂದಿಲ್ಲ ಒಂದು ಗ್ರಹ ತನ್ನ ಪ್ರಸ್ತುತ ಇರುವ ರಾಶಿಯನ್ನು ತೊರೆದು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ. ಆದರೆ, ಇನ್ನೊಂದೆಡೆ ಕೆಲ ಗ್ರಹಗಳು ವಕ್ರನಡೆಯನ್ನು ಅನುಸರಿಸಲು ಆರಂಭಿಸುತ್ತವೆ. ಗ್ರಹಗಳ ಈ ಸ್ಥಾನ ಪರಿವರ್ತನೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಜುಲೈ ತಿಂಗಳಿನಲ್ಲಿ 5 ದೊಡ್ಡ ಗ್ರಹಗಳು ತನ್ನ ರಾಶಿಯನ್ನು ಪರಿವರ್ತನ ಮತ್ತು ವಕ್ರನಡೆಯನ್ನು ಅನುಸರಿಸಲಿವೆ. ಇವುಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಸಾಗುವ ಶನಿ ಗ್ರಹ ಕೂಡ ಶಾಮೀಲಾಗಿದೆ.
ಜುಲೈ 12 ರಂದು ವಕ್ರ ನಡೆಯನ್ನು ಅನುಸರಿಸಲಿರುವ ಶನಿ ಮಕರ ರಾಶಿಯನ್ನು ಪ್ರವೇಶಿಸಲಿದೆ ಹಾಗೂ ಜುಲೈ 17, 2023ರವರೆಗೆ ಅಲ್ಲಿಯೇ ವಿರಾಜಮಾನನಾಗಿರಲಿದೆ. ಶನಿಯನ್ನು ಸಾಮಾನ್ಯವಾಗಿ ನ್ಯಾಯದ ದೇವರು ಹಾಗೂ ಕರ್ಮದ ಫಲದಾತ ಎಂದು ಕರೆಯಲಾಗುತ್ತದೆ. ಶನಿ ನೀಡುವ ಕಠಿಣ ದಂಡದ ಕಾರಣ ಶನಿ ಪ್ರಕೋಪಕ್ಕೆ ಪ್ರತಿಯೊಬ್ಬರೂ ಹೆದರುತ್ತಾರೆ. ಹೀಗಿರುವಾಗ ಶನಿ ವಕ್ರನಡೆಯಿಂದ 6 ತಿಂಗಳ ಅವಧಿಗೆ ಕೆಲ ಜಾತಕದವರಿಗೆ ಶನಿ ಪ್ರಕೊಪದಿಂದ ಮುಕ್ತಿ ಸಿಗಲಿದೆ.
ಈ ರಾಶಿಗಳು ಶನಿಯ ಪ್ರಕೊಪದಿಂದ ಸ್ವತಂತ್ರವಾಗಲಿವೆ
ಶನಿ ಗ್ರಹದ ಮಕರ ರಾಶಿಯ ಪ್ರವೇಶದಿಂದ ಕರ್ಕ ಹಾಗೂ ವೃಶ್ಚಿಕ ರಾಶಿಯ ಜಾತಕದವರಿಗೆ ಶನಿಯ ಎರಡೂವರೆ ವರ್ಷ ಪ್ರಕೊಪದಿಂದ ಮುಕ್ತಿ ಸಿಗಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯ ಜಾತಕದವರಿಗೆ ಶನಿಯ ಸಾಡೇಸಾತಿಯಿಂದ ಮುಕ್ತಿ ಸಿಗಲಿದೆ. ಹೀಗಾಗಿ ಈ ಮೂರೂ ರಾಶಿಗಳಿಗೆ 6 ತಿಂಗಳ ಅವಧಿಗೆ ಶನಿದೆಸೆಯಿಂದ ಮುಕ್ತಿ ಸಿಗಲಿದೆ. ಆದರೆ, ಆರು ತಿಂಗಳುಗಳ ಬಳಿಕ ಮತ್ತೆ ಈ ರಾಶಿಗಳು ಶನಿ ಪ್ರಕೋಪ ಎದುರಿಸಬೇಕಾಗಲಿದೆ.
ಈ ರಾಶಿಗಳಿಗೆ ಶನಿಯ ಮಹಾದೆಸೆ ಮತ್ತೆ ಆರಂಭವಾಗಲಿದೆ
ಶನಿಯ ಮಕರ ರಾಶಿ ಪ್ರವೇಶದಿಂದ ಮಿಥುನ ಹಾಗೂ ತುಲಾ ರಾಶಿಯ ಜಾತಕದವರಿಗೆ ಶನಿಯ ಎರಡೂವರೆ ವರ್ಷಗಳ ಕಾಟ ಶುರುವಾಗಲಿದೆ. ಇನ್ನೊಂದೆಡೆ ಧನು ರಾಶಿಯ ಜಾತಕದವರ ಪಾಲಿಗೆ ಸಾಡೇಸಾತಿ ಮತ್ತೆ ಆರಂಭ ವಾಗಲಿದೆ. ಈ ಮೂರು ರಾಶಿಗಳು ಕೇವಲ ಆರು ತಿಂಗಳ ಅವಧಿಗೆ ಶನಿ ಪ್ರಕೋಪ ಎದುರಿಸಲಿವೆ.
ಇದನ್ನೂ ಓದಿ-Shravan 2022: ಜುಲೈ 29 ರಿಂದ ಈ ರಾಶಿಗಳ ಜನರ ಜೀವನದಲ್ಲಿ ಖುಷಿಗಳ ಮಹಾಪೂರವೇ ಹರಿದುಬರಲಿದೆ, ಕಾರಣ ಇಲ್ಲಿದೆ
ಈ ಅವಧಿಯಲ್ಲಿ ಯಾವ ಉಪಾಯಗಳನ್ನು ಅನುಸರಿಸಿದರೆ ಉತ್ತಮ
>> ಶನಿಯ ಪ್ರಕೋಪ ಎದುರಿಸುತ್ತಿರುವವರು ಹಾಗೂ ಶನಿ ಪ್ರಕೊಪದಿಂದ ಮುಕ್ತಿ ಹೊಂದುವ ಎಲ್ಲ ಜಾತಕದವರು ಶನಿಗೆ ಸಂಬಂಧಿಸಿದ ಈ ಉಪಾಯಗಳನ್ನು ಅನುಸರಿಸಿದರೆ, ಶನಿಯ ಪ್ರಭಾವ ಅವರ ಮೇಲೆ ಕಡಿಮೆಯಾಗಲಿದೆ. ಹೀಗಾಗಿ ಈ ಆರು ತಿಂಗಳ ಅವಧಿಯಲ್ಲಿ ಶನಿ ಮಂತ್ರಗಳನ್ನು ಪಠಿಸಿ.
>> ಶನಿವಾರದಂದು ಶನಿ ಚಾಲಿಸಾ ಹಾಗೂ ಹನುಮಾನ ಚಾಲಿಸಾ ಪಠಿಸಿ
>> ಶನಿಯ ಕೆಟ್ಟ ಪ್ರಭಾವಗಳನ್ನು ಕಡಿಮೆ ಮಾಡಿಕೊಳ್ಳಲು ಅಗತ್ಯವಿರುವವರಿಗೆ ದಾನ ಮಾಡಿ
>> ಶನಿವಾರದ ದಿನ ಛಾಯಾದಾನಕ್ಕೂ ಕೂಡ ವಿಶೇಷ ಮಹತ್ವವಿದೆ
>> ಶನಿಗೆ ಸಂಬಂಧಿಸಿದ ವಸ್ತುಗಳ ದಾನದಿಂದಲೂ ಕೂಡ ಲಾಭ ಸಿಗಲಿದೆ.
>> ಶನಿವಾರ ಸಂಜೆ ಅಶ್ವತ್ಥ ಮರದ ಮುಂದೆ ಸಾಸಿವೆ ಎಣ್ಣೆಯಲ್ಲಿ ದೀಪ ಬೆಳಗಿ.
ಇದನ್ನೂ ಓದಿ-Money Plant Upay: ಮನಿ ಪ್ಲಾಂಟ್ ಗೆ ಈ ಒಂದು ವಸ್ತುವನ್ನು ಕಟ್ಟುವುದರಿಂದ, ಅದು ಹೆಸರಿಗೆ ತಕ್ಕಂತೆ ಫಲ ನೀಡಲಿದೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.