ಮನೆಯ ಸುತ್ತ ಈ ವೃಕ್ಷ ಇದ್ದರೆ ಧನ ಸಂಪತ್ತಿಗೆ ಕೊರತೆಯಾಗುವುದೇ ಇಲ್ಲ
ಅಶೋಕ ವೃಕ್ಷವಿರುವಲ್ಲಿ ಧನಾತ್ಮಕ ಶಕ್ತಿಯ ಸಂವಹನ ಇರುತ್ತದೆ ಎಂದು ಹೇಳಲಾಗುತ್ತದೆ . ಅಲ್ಲದೆ ವಾತಾವರಣವು ಶಾಂತ ಮತ್ತು ಸಂತೋಷದಿಂದ ಕೂಡಿರುತ್ತದೆ.
ನವದೆಹಲಿ : ಅಶೋಕ ವೃಕ್ಷವು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವುದನ್ನು ಗ್ರಂಥಗಳಲ್ಲಿ ವಿವರಿಸಲಾಗಿದೆ (Ashoka tree Benefits). ಇದನ್ನು ಮನೆಯ ಸುತ್ತ ನೆಟ್ಟರೆ ದುಃಖ ಮಾಯವಾಗುತ್ತದೆ ಎನ್ನುವುದು ಕೂಡಾ ನಂಬಿಕೆ. ಅಶೋಕ ವೃಕ್ಷವಿರುವಲ್ಲಿ ಧನಾತ್ಮಕ ಶಕ್ತಿಯ ಸಂವಹನ ಇರುತ್ತದೆ ಎಂದು ಹೇಳಲಾಗುತ್ತದೆ (Positive energy). ಅಲ್ಲದೆ ವಾತಾವರಣವು ಶಾಂತ ಮತ್ತು ಸಂತೋಷದಿಂದ ಕೂಡಿರುತ್ತದೆ.
ಶಾಂತಿಗಾಗಿ :
ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ, ಮನೆಯಲ್ಲಿ ಅಶೋಕ ಮರವನ್ನು ನೆಟ್ಟು ಅದರ ಬೇರಿಗೆ ನಿಯಮಿತವಾಗಿ ನೀರು ನೀಡುತ್ತಿರಬೇಕು (Water to ashoka tree). ಹೀಗೆ ಮಾಡುವುದರಿಂದ ಕ್ರಮೇಣ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಇದನ್ನೂ ಓದಿ : ಇಂದು ಸಂಜೆಯವರೆಗೆ ಶಿವಲಿಂಗದ ಮೇಲೆ ಈ ಎಲೆಗಳನ್ನು ಅರ್ಪಿಸಿದರೆ ಆಗಲಿದೆ ಭಾರೀ ಧನ ಲಾಭ
ಯಶಸ್ಸಿಗೆ:
ನೀವು ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಪಡೆಯಲು ಪ್ರಯತ್ನಿಸುತ್ತಿದ್ದು, ಯಶಸ್ವಿಯಾಗದಿದ್ದರೆ, ಪುಷ್ಯ ನಕ್ಷತ್ರದಲ್ಲಿ ಅಶೋಕ ಮರದ 11 ಬೀಜಗಳನ್ನು ತೆಗೆದುಕೊಳ್ಳಿ. ಈ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜೆಯ ಸ್ಥಳದಲ್ಲಿ ಇರಿಸಿ. ಕೆಲಸಕ್ಕಾಗಿ ಮನೆಯಿಂದ ಹೊರಡುವ ಮುನ್ನ ಬಟ್ಟೆಯಲ್ಲಿ ಕಟ್ಟಿ ಇಟ್ಟಿರುವ ಅಶೋಕ ಮರದ ಬೀಜಗಳ ದರ್ಶನ ಪಡೆಯಿರಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ (Ashoka plant remedies).
ವಾಸ್ತು ದೋಷಗಳನ್ನು ಹೋಗಲಾಡಿಸಲು :
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಅಶೋಕ ಮರವು ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಅಶೋಕ ಮರವನ್ನು ನೆಟ್ಟ ಮನೆಯ ಮುಂದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ (Negetive energy)ಇರುವುದಿಲ್ಲ. ಇದಲ್ಲದೇ ಸಂಜೆ ವೇಳೆ ಈ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ (Positive energy)ಹರಡುತ್ತದೆ.
ಇದನ್ನೂ ಓದಿ : Navagrah Dosh: ಇಂದು ರಾತ್ರಿ ಈ ವಿಶೇಷ ಕ್ರಮ ತೆಗೆದುಕೊಳ್ಳುವುದರಿಂದ ಜಾತಕದ ಅಶುಭ ಗ್ರಹಗಳು ಶುಭ ಫಲಿತಾಂಶ ನೀಡುತ್ತೆ
ಮದುವೆಯಲ್ಲಿನ ಅಡೆತಡೆಗಳನ್ನು ತೊಡೆದುಹಾಕಲು:
ಮದುವೆ ವಿಳಂಬವಾದರೆ ಅಥವಾ ಯಾವುದೇ ರೀತಿಯ ಅಡೆತಡೆಗಳು ಬಂದರೆ ಅದನ್ನು ಹೋಗಲಾಡಿಸಲು ಅಶೋಕ ಮರದ ಎಲೆಗಳನ್ನು ಮನೆಗೆ ತಂದು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಇದರ ನಂತರ ಅಶೋಕ ಎಲೆಗಳನ್ನು ಅಶ್ವತ ಮರದ (Peepal tree) ಕೆಳಗೆ ಹಾಕಿ. 42 ದಿನಗಳ ಕಾಲ ನಿರಂತರವಾಗಿ ಹೀಗೆ ಮಾಡಿದರೆ ಪರಿಣಾಮ ಗೋಚರಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.