ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ವರ್ಷ ಪೂರ್ತಿ ಇರಲಿದೆ ಲಕ್ಷ್ಮೀ ದೇವಿಯ ಕೃಪೆ, ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ
ವಾಸ್ತು ಪ್ರಕಾರ , ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಗದಿರಲು ಅನೇಕರು ಮನೆಯಲ್ಲಿ ಮನಿ ಪ್ಲಾಂಟ್‌ಗಳನ್ನು ನೆಡುತ್ತಾರೆ. ಮನಿ ಪ್ಲಾಂಟ್ ಹೊರತುಪಡಿಸಿ, ಕಾಯಿನ್ ಪ್ಲಾಂಟ್ಸ್ ಕೂಡಾ ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ.
ನವದೆಹಲಿ : ಜೀವನದಲ್ಲಿ ಲಕ್ಷ್ಮೀ ಕಟಾಕ್ಷ ಇದ್ದರೆ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಲಕ್ಷ್ಮೀಯ ಕೃಪೆ (Lakshmi Blessings) ಇದ್ದರೆ, ಜೀವನದಲ್ಲಿ ಸುಖ ಶಾಂತಿ ಸಮೃದ್ದಿ ನೆಲೆಸುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ತಮ್ಮ ಮೇಲೆ ಲಕ್ಷ್ಮೀ ಕೃಪೆ ಇರಲಿ ಎಂದು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದರೊಂದಿಗೆ ಸಂಪತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಪೂಜೆ ಪುನಸ್ಕಾರ ಮಾಡುತ್ತಾರೆ. ಕೆಲವೊಮ್ಮೆ ಏನೇ ವಿಶೇಷ ಕ್ರಮಗಳನ್ನು ಕೈಗೊಂಡರೂ, ಸಮಸ್ಯೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ವಾಸ್ತು ಪ್ರಕಾರ (Vastu Tips), ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಗದಿರಲು ಅನೇಕರು ಮನೆಯಲ್ಲಿ ಮನಿ ಪ್ಲಾಂಟ್‌ಗಳನ್ನು (Money plant) ನೆಡುತ್ತಾರೆ. ಮನಿ ಪ್ಲಾಂಟ್ ಹೊರತುಪಡಿಸಿ, ಕಾಯಿನ್ ಪ್ಲಾಂಟ್ಸ್ (Coin plant) ಕೂಡಾ ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ.
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ :
ಚೈನೀಸ್ ವಾಸ್ತು ಫೆಂಗ್ ಶೂಯಿ ಪ್ರಕಾರ (FengShui Tips) , ಮನೆಯಲ್ಲಿ ಕಾಯಿನ್ ಗಿಡವನ್ನು ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಅಲ್ಲದೆ, ಹಣಕಾಸಿನ ವಿಚಾರದಲ್ಲಿ ಅಭಿವೃದ್ದಿಯಾಗುತ್ತಲೇ ಇರುತ್ತದೆ. ಚೀನೀ ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಕಾಯಿನ್ ಪ್ಲಾಂಟ್ (Coin Plant) ನೆಟ್ಟರೆ, ಬಡತನ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಸಾಲದ ಸಮಸ್ಯೆ ಇದ್ದರೆ, ಅಡು ಕೂಡಾ ಶೀಘ್ರದಲ್ಲೇ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಈ ಐದು ಶಕುನಗಳು ಅತ್ಯಂತ ಅಶುಭವಾಗಿರುತ್ತದೆ, ಇದರಿಂದ ಪರಿವಾರದ ಮೇಲೆ ಸಂಕಷ್ಟಗಳೇ ಹೆಚ್ಚು
ಈಶಾನ್ಯದಲ್ಲಿ ಕಾಯಿನ್ ಪ್ಲಾಂಟ್ ಹಾಕಿ :
ಚೈನೀಸ್ ವಾಸ್ತು ಪ್ರಕಾರ ಮನೆಯ ಈಶಾನ್ಯ ಮೂಲೆಯಲ್ಲಿ ಕಾಯಿನ್ ಪ್ಲಾಂಟ್ ಹಾಕಿದರೆ ಒಳ್ಳೆಯದು. ಇದಲ್ಲದೇ ಕಾಯಿನ್ ಪ್ಲಾಂಟ್ ಅನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಶುಭ ಫಲವನ್ನು ನೀಡುತ್ತದೆ. ಏಕೆಂದರೆ ಕಾಯಿನ್ ಪ್ಲಾಂಟ್ (Coin plant benefits) ಅನ್ನು ಇರಿಸಲು ಈಶಾನ್ಯ ದಿಕ್ಕು ಉತ್ತಮ ಎಂದು ಹೇಳಲಾಗುತ್ತದೆ.
ವ್ಯಾಪಾರದಲ್ಲಿ ಪ್ರಗತಿ :
ಕಾಯಿನ್ ಪ್ಲಾಂಟ್ ಅನ್ನು ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಅಂಗಡಿಯಲ್ಲಿ ಇರಿಸಬೇಕು. ಕಾಯಿನ್ ಪ್ಲಾಂಟ್ ಅನ್ನು ಅಂಗಡಿ ಅಥವಾ ವ್ಯಾಪಾರದ ಸ್ಥಳದಲ್ಲಿ ಮುಖ್ಯ ದ್ವಾರದ ಬಳಿಯೇ ಇರಿಸಬೇಕು. ಇದಲ್ಲದೆ, ಕಾಯಿನ್ ಪ್ಲಾಂಟ್ ಅನ್ನು ಈಶಾನ್ಯ ದಿಕ್ಕಿನಲ್ಲಿಯೇ ಇರಿಸಬೇಕು. ಹೀಗೆ ಮಾಡುವುದರಿಂದ ಕಚೇರಿ ಕೆಲಸಗಳಲ್ಲಿ ಸಮೃದ್ಧಿ ಮತ್ತು ಪ್ರಗತಿಯನ್ನು ಕಾಣಬಹುದು.
ಇದನ್ನೂ ಓದಿ : Kaal Sarpa Yoga 2022: ಕಾಳ ಸರ್ಪ ಯೋಗ; ಈ 4 ರಾಶಿಯ ಜನರಿಗೆ ಸಂಕಷ್ಟ!
ಎಲ್ಲಿ ನೆಡಬೇಕು ಕಾಯಿನ್ ಪ್ಲಾಂಟ್ :
ವಾಸ್ತು ಪ್ರಕಾರ (Vastu tips) , ಮನೆಯಲ್ಲಿ ಕಾಯಿನ್ ಪ್ಲಾಂಟ್ ಹಾಕುವಾಗ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಮಲಗುವ ಕೋಣೆಯಲ್ಲಿ ಕಾಯಿನ್ ಪ್ಲಾಂಟ್ ಅನ್ನು ಹಾಕಲೇ ಬಾರದು. ಮಲಗುವ ಕೋಣೆಯಲ್ಲಿ (Bedroom Vastu) ಇದನ್ನು ಹಾಕುವುದರಿಂದ ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಅದೇ ಸಮಯದಲ್ಲಿ, ಕಾಯಿನ್ ಪ್ಲಾಂಟ್ ಅನ್ನು ನೆಲದಲ್ಲಿ ಅಥವಾ ಮಡಕೆಯಲ್ಲಿ ಎಲ್ಲಿಯಾದರೂ ನೆಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.