ಈ ಐದು ಶಕುನಗಳು ಅತ್ಯಂತ ಅಶುಭವಾಗಿರುತ್ತದೆ, ಇದರಿಂದ ಪರಿವಾರದ ಮೇಲೆ ಸಂಕಷ್ಟಗಳೇ ಹೆಚ್ಚು

ಶುಭ ಶಕುನ ಮತ್ತು ಅಶುಭಗಳನ್ನು ಗುರುತಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು  ಕೆಲವು ಗ್ರಂಥಗಳಲ್ಲಿಯೂ ಹೇಳಲಾಗಿದೆ. 

Written by - Zee Kannada News Desk | Last Updated : Dec 31, 2021, 11:40 AM IST
  • ಮನೆಯಿಂದ ಹೊರಡುವಾಗ ಸೀನು ಬಂದರೆ ಅಶುಭವಂತೆ
  • ಪ್ರಾಣಿಗಳಿಗೆ ಸಂಬಂಧಿಸಿದ ಕೆಟ್ಟ ಶಕುನಗಳು ಅಪಾಯಕಾರಿ
  • ಗಾಜಿನ ಕೆಟ್ಟ ಶಕುನವು ಅಹಿತಕರ ಘಟನೆಯನ್ನು ಸೂಚಿಸುತ್ತದೆ
ಈ ಐದು ಶಕುನಗಳು ಅತ್ಯಂತ ಅಶುಭವಾಗಿರುತ್ತದೆ, ಇದರಿಂದ ಪರಿವಾರದ ಮೇಲೆ ಸಂಕಷ್ಟಗಳೇ  ಹೆಚ್ಚು title=
ಮನೆಯಿಂದ ಹೊರಡುವಾಗ ಸೀನು ಬಂದರೆ ಅಶುಭವಂತೆ (file photo)

ನವದೆಹಲಿ : ಕೆಲವು ಕೆಲಸಗಳನ್ನು ಮಾಡಿದರೆ ಒಳ್ಳೆಯದು ಅದು ಶುಭ ಫಲ ನೀಡುತ್ತವೆ ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಹಾಗೆಯೇ ಕೆಲವು ಕೆಲಸಗಳು ಅಶುಭಕರವಾಗಿರುತ್ತವೆ ಎಂದು ಕೂಡಾ ಹೇಳಲಾಗುತ್ತದೆ.  ಹಾಗಿದ್ದರೆ ಶುಭ ಶಕುನ (Shakuna Shastra) ಮತ್ತು ಅಶುಭಗಳನ್ನು ಗುರುತಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು  ಕೆಲವು ಗ್ರಂಥಗಳಲ್ಲಿಯೂ ಹೇಳಲಾಗಿದೆ. ಎಲ್ಲಿಗಾದರೂ ಪ್ರಯಾಣ ಬೆಳೆಸುತ್ತಿದ್ದರೆ, ಪ್ರಯಾನಕ್ಕೂ ಮುನ್ನ ಮೊಸರು (Curd) ತಿಂದು ಮನೆಯಿಂದ ಹೊರಡುವುದು ಶುಭ ಶಕುನವಂತೆ. ಅದೇ ಸಮಯದಲ್ಲಿ, ಕೆಲವು ಕೆಟ್ಟ ಶಕುನಗಳು ಕೆಲಸಕ್ಕೆ ಅಡ್ಡಿಯಾಗುತ್ತವೆ ಎಂದು ನಂಬಲಾಗಿದೆ. ಇದರಿಂದಾಗಿ ಯಾವುದೇ ಕೆಲಸ ಕೈಗೂಡುವುದಿಲ್ಲ ಎನ್ನಲಾಗುತ್ತದೆ. 

ಹಾಲಿಗೆ ಸಂಬಂಧಿಸಿದ ಶಕುನ : 
ಅಡುಗೆಮನೆಯಲ್ಲಿ (Kitchen) ಅಥವಾ ಮನೆಯಲ್ಲಿ ಹಾಲು ಕುದಿಯುವಾಗ ಅದು ಉಕ್ಕರಿಸಿ ನೆಲದ ಮೇಲೆ ಬೀಳುವುದು ಕೆಟ್ಟ ಶಕುನ ಎಂದು ಹೇಳಲಾಗುತ್ತದೆ. ನೆಲದ ಮೇಲೆ ಹಾಲು (Milk) ಚೆಲ್ಲಿದರೆ ದೊಡ್ಡ ಅವಘಡ ಸಂಭವಿಸಬಹುದು ಎಂದು ನಂಬಲಾಗಿದೆ. 

ಇದನ್ನೂ ಓದಿ : Year 2022: ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರಬರಲು ಹೊಸ ವರ್ಷದಂದು ತಪ್ಪದೇ ಈ ಕೆಲಸ ಮಾಡಿ

ಒಡೆದ  ಗಾಜು :
ಗಾಜಿಗೆ ಸಂಬಂಧಿಸಿದಂತೆ ಕೂಡಾ ಶಕುನವನ್ನು ನೋಡಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ ಗಾಜು ಒಡೆಯುವುದು ಕೆಟ್ಟ ಶಕುನ. ಒಡೆದ ಗಾಜಿನಲ್ಲಿ ಯಾವತ್ತೂ ಮುಖವನ್ನು ನೋಡುವುದು ಕೂಡ ಅಶುಭ. ಮನೆಯ ಈಶಾನ್ಯ ಮೂಲೆಯಲ್ಲಿ ಗಾಜಿನ ತುಂಡುಗಳು ಸಂಗ್ರಹವಾಗಿದ್ದರೆ ಅದು ವಾಸ್ತು ದೋಷಕ್ಕೆ (Vastu dosha) ಕಾರಣವಾಗುತ್ತದೆ.  

ಪೊರಕೆ ಶಕುನ : 
ಪೊರಕೆಯಲ್ಲಿ ಮಹಾಲಕ್ಷ್ಮಿ (Godess Lakshmi) ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಆದುದರಿಂದಲೇ ಹೆಂಗಸರು ಅಥವಾ ಮನೆಯ ಹಿರಿಯರು ಪೊರಕೆಯ (Broom) ಮೇಲೆ ಕಾಲಿಡದಂತೆ ಹೇಳುತ್ತಿರುತ್ತಾರೆ. ಅಲ್ಲದೆ, ಸೂರ್ಯಾಸ್ತದ ಸಮಯದಲ್ಲಿ ಮನೆಯಿಂದ ಕಸವನ್ನು ಹೊರ ಹಾಕುವುದು ಕೂಡಾ ಅಶುಭ ಎಂದೇ ಹೇಳಲಾಗುತ್ತದೆ. ಪೊರಕೆಯನ್ನು ಯಾರಿಗೂ ಕಾಣದ ಜಾಗದಲ್ಲಿ ಇಡಬೇಕು.  

ಇದನ್ನೂ ಓದಿ : Kaal Sarp Yog : 2022 ರ ಮೊದಲ ದಿನವೇ ಬರಲಿದೆ ಕಾಲ ಸರ್ಪ ಯೋಗ : ಅಂದು ನಿಮ್ಮ ಜಾತಕ ಹೇಗಿರಲಿದೆ?

ಪ್ರಾಣಿಗಳಿಗೆ ಸಂಬಂಧಿಸಿದ ಶಕುನಗಳು :
ಶಕುನ ಶಾಸ್ತ್ರದ (Shakuna Shastra) ಪ್ರಕಾರ, ನಾಯಿ ಮತ್ತು ಬೆಕ್ಕುಗಳು ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ಎಲ್ಲಿಯಾದರೂ ಅಳುವುದು ಕೆಟ್ಟ ಶಕುನವಾಗಿದೆ. ಅಲ್ಲದೆ, ಈ ಪ್ರಾಣಿಗಳು ಮನೆಯಲ್ಲಿ ಜಗಳವಾಡಿದರೆ, ಅದರ ಕೆಟ್ಟ ಶಕುನವು ಅಪಾಯಕಾರಿಯಾಗಿ ಸಾಬೀತಾಗುತ್ತದೆ. ಈ ಅಶುಭ ಚಿಹ್ನೆಗಳು ಯಾವುದೇ ಅಹಿತಕರ ಘಟನೆಯ ಮುನ್ಸೂಚನೆ ನೀಡುತ್ತದೆ.  

ಸೀನು :
ಮನೆಯಿಂದ ಹೊರಗೆ ಹೋಗುವಾಗ ಸೀನುವುದು ಕೆಟ್ಟ ಶಕುನ. ಇದರೊಂದಿಗೆ ಪ್ರಯಾಣಕ್ಕೆ ಹೊರಡುವಾಗ ಯಾರಾದರೂ ಸೀನಿದರೆ ಸ್ವಲ್ಪ ಹೊತ್ತು ಅಲ್ಲೇ ನಿಲ್ಲಬೇಕು ಎಂದು ಹೇಳಲಾಗುತ್ತದೆ. ಸ್ವಲ್ಪ ಹೊತ್ತು ಕುಳಿತ ನಂತರ ಅಥವಾ ನೀರು ಕುಡಿದ ನಂತರ ಮನೆಯಿಂದ ಹೊರಬರಬೇಕು ಎಂದು ಹಿರಿಯರು ಸೂಚಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News