Pomegranate Hair Mask Benefits: ಮಳೆಗಾಲದಲ್ಲಿ ಚರ್ಮದ ಜೊತೆಗೆ ಕೂದಲಿಗೆ ವಿಶೇಷ ಕಾಳಜಿ ಬೇಕು. ಬೇಸಿಗೆಯಲ್ಲಿ ಕೂದಲಿಗೆ ಹಾನಿಯ ಜೊತೆಗೆ ಬೆವರುವಿಕೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಕೂದಲು ಉದುರುವಿಕೆ ತಡೆಯಲು ಅನೇಕ ರೀತಿಯ ಉತ್ಪನ್ನಗಳನ್ನು ಜನರು ಬಳಸುತ್ತಾರೆ. ಆದರೆ ಈ ಉತ್ಪನ್ನಗಳ ಬಳಕೆಯು ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ. 


COMMERCIAL BREAK
SCROLL TO CONTINUE READING

ಕೆಮಿಕಲ್‌ ಯುಕ್ತ ಉತ್ಪನ್ನಗಳ ಬದಲು ದಾಳಿಂಬೆಯಿಂದ ಮಾಡಿದ ಈ ಹೇರ್ ಪ್ಯಾಕ್ ಅನ್ನು ಹಚ್ಚುವುದರಿಂದ ಕೂದಲಿಗೆ ರಕ್ಷಣೆ ದೊರೆಯುತ್ತದೆ. ದಾಳಿಂಬೆಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಕೂದಲನ್ನು ಬಲಪಡಿಸುತ್ತದೆ. ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ದಾಳಿಂಬೆ ಹೇರ್ ಪ್ಯಾಕ್ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಕೂದಲು ಸ್ಟ್ರಾಂಗ್ ಆಗುತ್ತದೆ.


ಇದನ್ನೂ ಓದಿ:  High BP : ಈ ಕೆಂಪು ತರಕಾರಿ ಎಷ್ಟೇ ಹೈ ಬಿಪಿ ಇದ್ದರೂ ಕ್ಷಣದಲ್ಲೇ ಕಂಟ್ರೋಲ್‌ ಮಾಡುತ್ತೆ !


ದಾಳಿಂಬೆ ಮತ್ತು ಮೊಸರು ಹೇರ್ ಪ್ಯಾಕ್


ದಾಳಿಂಬೆ ಮತ್ತು ಮೊಸರಿನ ಹೇರ್ ಪ್ಯಾಕ್ ಮಾಡಲು 7 - 8 ಸ್ಪೂನ್‌ ದಾಳಿಂಬೆ ಬೀಜಗಳನ್ನು 3-4 ಚಮಚ ಮೊಸರಿನ ಜೊತೆ ಬ್ಲೆಂಡರ್‌ನಲ್ಲಿ ಹಾಕಿ ಪೇಸ್ಟ್‌ ಮಾಡಿ. ಈಗ ಈ ಮಿಶ್ರಣವನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಒಣಗಿಸಿ. ಬಳಿಕ ಕೂದಲನ್ನು ನೀರಿನಿಂದ ತೊಳೆಯಿರಿ. ಈ ಹೇರ್ ಪ್ಯಾಕ್ ಕೂದಲಿಗೆ ಪೋಷಣೆ ನೀಡಿ ನೆತ್ತಿಯನ್ನು ಆರೋಗ್ಯವಾಗಿರಿಸುತ್ತದೆ. 


ದಾಳಿಂಬೆ ಮತ್ತು ಜೇನುತುಪ್ಪ ಹೇರ್ ಪ್ಯಾಕ್


1 ಟೀ ಸ್ಪೂನ್ ಜೇನುತುಪ್ಪದ ಜೊತೆಗೆ 4 ರಿಂದ 5 ಚಮಚಗಳು ದಾಳಿಂಬೆ ಬೀಜ ಹಾಕಿ ಮಿಕ್ಸಿ ಮಾಡಿ. ಈ ಪೇಸ್ಟ್‌ನ್ನು ಕೂದಲಿಗೆ ಸಂಪೂರ್ಣವಾಗಿ ಅನ್ವಯಿಸಿ. 10 ನಿಮಿಷದ ಬಳಿಕ ನೀರಿನಿಂದ ವಾಶ್‌ ಮಾಡಿ. ಈ ಹೇರ್ ಪ್ಯಾಕ್ ಕೂದಲು ಒಣಗುವುದನ್ನು ತಡೆಯುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲಿಗೆ ಹೊಳಪನ್ನೂ ತರುತ್ತದೆ.


ದಾಳಿಂಬೆ ಮತ್ತು ಆಲಿವ್ ಅಯಿಲ್ ಹೇರ್ ಪ್ಯಾಕ್


1/4 ಕಪ್ ದಾಳಿಂಬೆ ರಸ, 1 ಟೀಚಮಚ ಆಲಿವ್ ಎಣ್ಣೆ ಮತ್ತು 1/2 ಕಪ್ ನೀರು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಈ ಹೇರ್ ಪ್ಯಾಕ್ ಕೂದಲಿಗೆ ಆಂತರಿಕವಾಗಿ ಪೋಷಣೆ ನೀಡುತ್ತದೆ. ಬೆಳವಣಿಗೆಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ:  ಈ ಹಸಿರು ಎಲೆಯ ಒಂದು ಹನಿ ರಸ ಬ್ಲಡ್‌ ಶುಗರ್‌ ಅನ್ನು ನಿಮಿಷಗಳಲ್ಲಿ ನಿಯಂತ್ರಣಕ್ಕೆ ತರುವುದು!


(ಸೂಚನೆ: ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಅಗತ್ಯ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಹೊಣೆಯಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.